ಮಳೆಯಿಂದ ತೇಲುತ್ತಿದೆ ಐಟಿ ಕ್ಯಾಪಿಟಲ್; ವೈರಲ್ ವೀಡಿಯೋ ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ ಭಾರಿ ಮಳೆಯಾದ ಹಿನ್ನೆಲೆ ರಸ್ತೆಗಳು ಹರಿಯುವ ನದಿಯಂತಾಗಿವೆ. ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ ಚಾಲಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಇದರಿಂದಾಗಿ ನಿಧಾನಗತಿಯ ಸಂಚಾರ ಏರ್ಪಟ್ಟಿದ್ದು, ಟ್ವಿಟರ್ ಖಾತೆಯೊಂದರ ಪೋಸ್ಟ್ ಎಲ್ಲರ ಗಮನ ಸೆಳೆಯುತ್ತಿದೆ. “ಸ್ಮಾರ್ಟ್ ಸಿಟಿ” ಗಾಗಿ ಶತಕೋಟಿ ಖರ್ಚು ಮಾಡಲಾಗಿದೆ, ಆದರೆ ಒಂದೇ ಒಂದು ಸರಿಯಾದ ಚರಂಡಿ ಕೂಡ ಕಾಣುತ್ತಿಲ್ಲ ಎಂದು @YTKDIndia ಟ್ವಿಟರ್ ಖಾತೆಯಲ್ಲಿ ಬರೆಯಲಾಗಿದ್ದು, ಪೋಸ್ಟ್ ವೈರಲ್ ಆಗುತ್ತಿದೆ.
ಬೆಂಗಳೂರು, ಅಕ್ಟೋಬರ್ 11: ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ ಭಾರಿ ಮಳೆಯಾದ ಹಿನ್ನೆಲೆ ರಸ್ತೆಗಳು ಹರಿಯುವ ನದಿಯಂತಾಗಿವೆ. ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ ಚಾಲಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಇದರಿಂದಾಗಿ ನಿಧಾನಗತಿಯ ಸಂಚಾರ ಏರ್ಪಟ್ಟಿದ್ದು, ಟ್ವಿಟರ್ ಖಾತೆಯೊಂದರ ಪೋಸ್ಟ್ ಎಲ್ಲರ ಗಮನ ಸೆಳೆಯುತ್ತಿದೆ. ಭಾರತದ ಐಟಿ ರಾಜಧಾನಿಗೆ ಸ್ವಾಗತ ಎಂದು ಬರೆಯುತ್ತಾ, ಪ್ರತಿ ವರ್ಷವೂ ಒಂದೇ ಕಥೆ. ರಸ್ತೆಗಳು ಮುಳುಗಡೆಯಾಗಿ ಸಾರ್ವಜನಿಕರು ಕಷ್ಟಪಡುವಂತಾದರೂ ರಾಜಕಾರಣಿಗಳು ಮತ್ತು ಅಧಿಕಾರಿಗಳು ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. “ಸ್ಮಾರ್ಟ್ ಸಿಟಿ” ಗಾಗಿ ಶತಕೋಟಿ ಖರ್ಚು ಮಾಡಲಾಗಿದೆ, ಆದರೆ ಒಂದೇ ಒಂದು ಸರಿಯಾದ ಚರಂಡಿ ಕೂಡ ಕಾಣುತ್ತಿಲ್ಲ ಎಂದು @YTKDIndia ಟ್ವಿಟರ್ ಖಾತೆಯಲ್ಲಿ ಬರೆಯಲಾಗಿದ್ದು, ಪೋಸ್ಟ್ ವೈರಲ್ ಆಗುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Oct 11, 2025 10:36 AM