ಕನಸಿನ ಮನೆ ಕಣ್ಣೆದಿರು ಕುಸಿದು ಉಕ್ಕಿ ಹರಿಯುವ ನದಿಗೆ ಬಿದ್ದರೆ, ಆ ಆಘಾತವನ್ನು ತಡೆದುಕೊಳ್ಳುವುದು ಸುಲಭವಲ್ಲ!

ಕನಸಿನ ಮನೆ ಕಣ್ಣೆದಿರು ಕುಸಿದು ಉಕ್ಕಿ ಹರಿಯುವ ನದಿಗೆ ಬಿದ್ದರೆ, ಆ ಆಘಾತವನ್ನು ತಡೆದುಕೊಳ್ಳುವುದು ಸುಲಭವಲ್ಲ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 19, 2021 | 8:25 PM

ನದಿ ತೀರದಲ್ಲಿ ಮನೆ ಕಟ್ಟುವುದು ಕವಿಯೊಬ್ಬನ ಕಲ್ಪನೆಯಂತಿದೆ. ಭಾವುಕ ಜೀವಿಗಳು, ನಿಸರ್ಗವನ್ನು ಅತಿಯಾಗಿ ಪ್ರೀತಿಸುವವರು ಹೀಗೆ ಸುಂದರವಾದ ಪ್ರಕೃತಿಯ ಮಡಿಲಲ್ಲಿ ಮನೆ ಕಟ್ಟಿ ಅದರಲ್ಲಿ ವಾಸ ಮಾಡುವುದನ್ನು ಇಷ್ಟಪಡುತ್ತಾರೆ.

ಬಂಗಾಳ ಕೊಲ್ಲಿಯಲ್ಲಿ ಎದ್ದ ಚಂಡಮಾರತವು ವಾಯುಮಂಡಲ ಕುಸಿತವಾಗಿ ಮಾರ್ಪಟ್ಟ ನಂತರ ಶುಕ್ರವಾರ ಬೆಳಗಿನ ಜಾವದಿಂದ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಆದರೆ ಈ ಮಳೆ ಸೃಷ್ಟಿಸುತ್ತಿರುವ ಅವಾಂತರಗಳು ಒಂದೆರಡಲ್ಲ. ಕರ್ನಾಟಕದಲ್ಲಂತೂ ಒಂದು ತಿಂಗಳಿಂದ ಬಿಟ್ಟೂ ಬಿಡದೆ ಮಳೆಯಾಗುತ್ತಿದೆ. ಆಂಧ್ರಪ್ರದೇಶದ ಚಿತ್ತೂರ್, ಅನಂತಪುರ ಮತ್ತು ಕರ್ನೂಲು ಜಿಲ್ಲೆಯ ದಕ್ಷಿಣ ಭಾಗದಲ್ಲಿ ಬೆಳಗ್ಗೆಯಿಂದ ಮಳೆ ಸುರಿಯುತ್ತಿದೆ. ಚಿತ್ತೂರ ಜಿಲ್ಲೆಯ ತಿರುಪತಿಯಲ್ಲಿ ಸುರಿಯುತ್ತಿರುವ ಮಳೆ ಭಾರತದ ಅತ್ಯಂತ ಶ್ರೀಮಂತ ತಿಮ್ಮಪ್ಪನ ದೇವಾಲಯವನ್ನು ಭಕ್ತರಿಗೆ ಎರಡು ದಿನಗಳವರೆಗೆ ಮುಚ್ಚುವಂಥ ಪರಿಸ್ಥಿತಿ ನಿರ್ಮಾಣ ಮಾಡಿದೆ.

ಮನೆಯೊಂದು ಕುಸಿದು ಉಕ್ಕಿ ಹರಿಯುತ್ತಿರುವ ನದಿಯ ಅಂಚಿಗೆ ಬೀಳುತ್ತಿರುವುದು ನಿಮಗೆ ಈ ವಿಡಿಯೋನಲ್ಲಿ ಕಾಣುತ್ತಿದೆ. ಈ ದೃಶ್ಯ ತಿರುಪತಿಯ ವಸುಂಧರಾ ನಗರನಲ್ಲಿಯದು. ಮನೆ ಹಳೆಯದೇನೂ ಅಲ್ಲ. ತೀರ ಹೊಸತು ಅಲ್ಲದಿದ್ದರೂ ಇತ್ತಿಚಿನ ವರ್ಷಗಳಲ್ಲಿ ಕಟ್ಟಿರುವಂತಿದೆ. ಮನೆ ಕಟ್ಟುವಾಗ ಅದರ ಮಾಲೀಕರು ಅದೇನೆಲ್ಲ ಕನಸು ಕಂಡಿದ್ದರೋ.

ನದಿ ತೀರದಲ್ಲಿ ಮನೆ ಕಟ್ಟುವುದು ಕವಿಯೊಬ್ಬನ ಕಲ್ಪನೆಯಂತಿದೆ. ಭಾವುಕ ಜೀವಿಗಳು, ನಿಸರ್ಗವನ್ನು ಅತಿಯಾಗಿ ಪ್ರೀತಿಸುವವರು ಹೀಗೆ ಸುಂದರವಾದ ಪ್ರಕೃತಿಯ ಮಡಿಲಲ್ಲಿ ಮನೆ ಕಟ್ಟಿ ಅದರಲ್ಲಿ ವಾಸ ಮಾಡುವುದನ್ನು ಇಷ್ಟಪಡುತ್ತಾರೆ.

ಆದರೆ ಅವರ ಕನಸಿನ ಸೌಧ ಹೀಗೆ ಕಣ್ಣೆದುರೇ ನೀರು ಪಾಲಾದರೆ ಅವರಿಗೆ ಹೇಗಾಗಿರಬೇಡ. ಅದೃಷ್ಟವಶಾತ್ ಆಗ ಮನೆಯಲ್ಲಿ ಯಾರೂ ಇರಲಿಲ್ಲವಂತೆ. ಕಳೆದ 16 ಗಂಟೆಗಳಲ್ಲಿ ಆಂಧ್ರದ ಮೂರು ಜಿಲ್ಲೆಗಳಲ್ಲಿ ಮೂರು ಮನೆಗಳು ಕುಸಿದಿವೆ ಮತ್ತು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ:   ನಿಮ್ಮ ವಿಡಿಯೋಗೆ ಯೂಟ್ಯೂಬ್ ವೇದಿಕೆಯಲ್ಲಿ ಡಿಸ್ಲೈಕ್​ಗಳು ಬರುತ್ತಿದ್ದರೆ ಚಿಂತೆ ಬೇಡ, ಇನ್ನು ಮುಂದೆ ಆ ಕೌಂಟರ್ ಕಾಣದಂತೆ ಮರೆಯಾಗುವುದು