ತಿರುಪತಿಯಿಂದ ಬಚಾವ್​ ಆಗಿ ಬಂದ ಘಟನೆ ವಿವರಿಸಿದ ನಟಿ ತಾರಾ

ತಿರುಪತಿಯಿಂದ ಬಚಾವ್​ ಆಗಿ ಬಂದ ಘಟನೆ ವಿವರಿಸಿದ ನಟಿ ತಾರಾ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 19, 2021 | 10:04 PM

‘ಅಲ್ಲಿಯವರೆಗೆ ಹೋದರೂ ದೇವರ ದರ್ಶನ ಮಾಡಲು ಆಗಿಲ್ಲ ಎನ್ನುವ ಬೇಸರ ಒಂದು ಕಡೆಯಾದರೆ, ಸುರಕ್ಷಿತವಾಗಿ ಬೆಂಗಳೂರು ತಲುಪಿದ್ದೇವೆ ಎನ್ನುವ ಸಂತೋಷ ಮತ್ತೊಂದು ಕಡೆ’ ಎಂಬುದು ತಾರಾ ಮಾತು.

ಆಂಧ್ರಪ್ರದೇಶದಲ್ಲಿ ಮಳೆಯ ಅಬ್ಬರ ಜೋರಾಗಿದೆ. ತಿರುಮಲ ತಿರುಪತಿಯಲ್ಲಿ‌ ಭಾರಿ ಮಳೆಯ ಕಾರಣ, ಎರಡು ದಿನ‌ ಭಕ್ತರಿಗೆ ದೇವರ ದರ್ಶನವನ್ನು ಬಂದ್ ಮಾಡಲಾಗಿದೆ. ತಿರುಪತಿ ಘಾಟ್ ರಸ್ತೆಗೆ ಹಾನಿಯಾಗಿದ್ದು, ಬೆಟ್ಟಕ್ಕೆ ಹೋಗುವ ರಸ್ತೆಯನ್ನು ಟಿಟಿಡಿ ದುರಸ್ತಿಗೊಳಿಸುತ್ತಿದೆ. ಈ ಸಮಯದಲ್ಲಿ ಕನ್ನಡದ ಹಿರಿಯ ನಟಿ ತಾರಾ ಕೂಡ ತಿರುಪತಿಯಲ್ಲೇ ಇದ್ದರು. ಈಗ ಅವರು ಕ್ಷೇಮವಾಗಿ ಬೆಂಗಳೂರಿಗೆ ಮರಳಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ನಾನು ತಿರುಪತಿಯಲ್ಲಿದ್ದೆ. ಜೋರಾಗಿ ಮಳೆ ಬಂತು. ಅಲ್ಲಿ ಹೋಗುವಾಗ ನನಗೆ ಭಯ ಆಯ್ತು. ಯು-ಟರ್ನ್​ ತೆಗೆದುಕೊಂಡು ಮರಳಿ ಬಂದ್ವಿ. ಆಗ ಹೆದ್ದಾರಿ ಕಂಡ್ತು. ಅದು ಬೆಂಗಳೂರಿನ ಹೆದ್ದಾರಿ ಆಗಿತ್ತು. ನಾವು ಸುರಕ್ಷಿತವಾಗಿ ಬಂದು ತಲುಪಿದ್ದೇವೆ’ ಎಂದು ತಾರಾ ಹೇಳಿದ್ದಾರೆ. ‘ಅಲ್ಲಿಯವರೆಗೆ ಹೋದರೂ ದೇವರ ದರ್ಶನ ಮಾಡಲು ಆಗಿಲ್ಲ ಎನ್ನುವ ಬೇಸರ ಒಂದು ಕಡೆಯಾದರೆ, ಸುರಕ್ಷಿತವಾಗಿ ಬೆಂಗಳೂರು ತಲುಪಿದ್ದೇವೆ ಎನ್ನುವ ಸಂತೋಷ ಮತ್ತೊಂದು ಕಡೆ’ ಎಂಬುದು ತಾರಾ ಮಾತು.

ಇದನ್ನೂ ಓದಿ: ನಯನತಾರಾಗೆ ಕೊಟ್ಟಿದ್ದ ಆಫರ್​ ಬಾಚಿಕೊಂಡ ಸ್ಯಾಂಡಲ್​ವುಡ್​​ ನಟಿ; ಕಾಲಿವುಡ್​​​ನಲ್ಲಿ ಹೆಚ್ಚಾಯ್ತು ಕನ್ನಡ ಮಂದಿಯ ಹವಾ