ಬ್ಯಾಂಕ್ನಲ್ಲಿ ರೂ. 5 ಲಕ್ಷಕ್ಕಿಂತ ಹೆಚ್ಚು ಎಫ್ಡಿ ಮಾಡಿಸುವುದಾದರೆ ಕುಟುಂಬದ ಇಬ್ಬರು ಸದಸ್ಯರ ಹೆಸರಲ್ಲಿ ಮಾಡಿಸಿ: ಡಾ ಬಾಲಾಜಿ ರಾವ್
ನಮ್ಮ ಡಿಪಾಸಿಟ್ ರೂ. 5 ಲಕ್ಷಕ್ಕಿಂತ ಜಾಸ್ತಿ ಇದ್ದರೆ ಮಾತ್ರ ವಿಮೆ ಹಣದ ರೂಪದಲ್ಲಿ ರೂ. 5 ಲಕ್ಷ ಸಿಗುತ್ತದೆ ಎಂದು ಡಾ ಬಾಲಾಜಿ ರಾವ್ ಹೇಳುತ್ತಾರೆ.
ಬ್ಯಾಂಕ್ಗಳಲ್ಲಿ ಹಣ ಹೂಡುವುದು ನಾವು ಅಂದುಕೊಂಡಷ್ಟು ಸುಲಭವಾಗಿಲ್ಲ ಮಾರಾಯ್ರೇ. ಕಳೆದ ಸಂಚಿಕೆಯಲ್ಲಿ ಹೂಡಿಕೆ ತಜ್ಞ ಡಾ ಬಾಲಾಜಿ ರಾವ್ ಅವರು ನಮ್ಮ ಠೇವಣಿಗಳ ಒಂದು ಭಾಗವನ್ನು ವಿಮೆ ಮಾಡಲಾಗುತ್ತದೆ ಎಂದು ಹೇಳಿದ್ದರು. ಒಂದು ಪಕ್ಷ ನಾವು ಹಣ ಹೂಡಿದ ಬ್ಯಾಂಕ್ ಕಾರಣಾಂತರಗಳಿಂದ ಮುಚ್ಚಿ ಹೋದರೆ, ವಿಮೆ ರೂಪದಲ್ಲಿ ರೂ. 5 ಲಕ್ಷ ನಮಗೆ ಸಿಗುತ್ತದೆ. ಈ ವಿಮೆ ಅಂಶ ಕೆಲವರಲ್ಲಿ ಕೊಂಚ ಗೊಂದಲ ಉಂಟು ಮಾಡಿತ್ತು. ಡಾ ರಾವ್ ಅವರ ಸ್ನೇಹಿತರೊಬ್ಬರು ಅವರಿಗೆ ಫೋನಾಯಿಸಿ, ತಾನು ಒಂದು ಬ್ಯಾಂಕಿನಲ್ಲಿ ರೂ. 2 ಲಕ್ಷ ಫಿಕ್ಸೆಡ್ ಡಿಪಾಸಿಟ್ ಮಾಡಿಸಿದ್ದು, ಅಕಸ್ಮಾತ್ ಆ ಬ್ಯಾಂಕ್ ದಿವಾಳಿಯೆದ್ದರೆ ತನಗೂ ರೂ. 5 ಲಕ್ಷ ಸಿಕ್ಕುತ್ತಾ ಅಂತ ಕೇಳಿದರಂತೆ. ಅದಕ್ಕೆ ರಾವ್ ಅವರು ಹೇಳುವುದೇನೆಂದರೆ, ಖಂಡಿತ ಇಲ್ಲ. ಅವರ ಸ್ನೇಹಿತನಿಗೆ 2 ಲಕ್ಷ ರೂ. ಮಾತ್ರ ಸಿಗೋದು.
ನಮ್ಮ ಡಿಪಾಸಿಟ್ ರೂ. 5 ಲಕ್ಷಕ್ಕಿಂತ ಜಾಸ್ತಿ ಇದ್ದರೆ ಮಾತ್ರ ವಿಮೆ ಹಣದ ರೂಪದಲ್ಲಿ ರೂ. 5 ಲಕ್ಷ ಸಿಗುತ್ತದೆ ಎಂದು ಡಾ ಬಾಲಾಜಿ ರಾವ್ ಹೇಳುತ್ತಾರೆ. ಒಂದು ಪಕ್ಷ ನೀವು 10 ಲಕ್ಷ ರೂ. ಅಥವಾ 50 ಲಕ್ಷ ರೂ. ಡಿಪಾಸಿಟ್ ಮಾಡಿದ್ದರೂ ಸಿಗೋದು ರೂ 5 ಲಕ್ಷ ಮಾತ್ರ. ಉಳಿದ ಹಣ ಯಾವುದಾದರೂ ಹುಂಡಿಗೆ ಹಾಕಿದಂತೆಯೇ ಎಂದು ಅವರು ಹೇಳುತ್ತಾರೆ.
ಹಾಗೆಯೇ, ವಿಮೆಯ ಹಣ ಕೂಡಲೇ ನಮ್ಮ ಕೈಗೆ ಸಿಗದು ಎಂದು ಡಾ ರಾವ್ ಹೇಳುತ್ತಾರೆ. ಹಲವಾರು ಪ್ರಕ್ರಿಯೆಗಳು ಪೂರ್ತಿಗೊಂಡು, ಮುಚ್ಚಿಹೋದ ಬ್ಯಾಂಕಿನ ಅರ್ ಬಿ ಐ ಪೋಸ್ಟ್ ಮಾರ್ಟಂ ನಡೆಸಿ ಮರಣ ಪ್ರಮಾಣ ಪತ್ರ ನೀಡಿದ ನಂತರ ಹಣ ಸಿಗುತ್ತದೆ.
ಬ್ಯಾಂಕ್ನಲ್ಲಿ 5 ಲಕ್ಷ ರೂ. ಗಳಿಗಿಂತ ಜಾಸ್ತಿ ಹಣ ಡಿಪಾಸಿಟ್ ಮಾಡುವಂತಿದ್ದರೆ, ಅದನ್ನು ಅದನ್ನು ಕುಟುಂಬದ ಇಬ್ಬರ ಸದಸ್ಯರ ಹೆಸರಲ್ಲಿ ಮಾಡಿಸಿದರೆ, ಇಬ್ಬರಿಗೂ ವಿಮೆ ಸಿಗುತ್ತದೆ ಅಂತ ಡಾ ರಾವ್ ಹೇಳುತ್ತಾರೆ.
ರಾಷ್ಟ್ರೀಕೃತ, ಅಂತರರಾಷ್ಟ್ರೀಯ, ಸಣ್ಣ ಪ್ರಮಾಣದ ಹಣಕಾಸು ಸಂಸ್ಥೆ, ಖಾಸಗಿ ಮತ್ತು ಕೊ-ಆಪರೇಟಿವ್ ಬ್ಯಾಂಕ್ ಮತ್ತು ಸಾರ್ವಜನಿಕ ವಲಯದ ಯಾವುದೇ ಕಮರ್ಷಿಯಲ್ ಬ್ಯಾಂಕ್ ನಲ್ಲಿ ಹಣ ಹೂಡಿದರೂ ವಿಮೆಯ ಹಣ ಸಿಗುತ್ತದೆ. ಆದರೆ ಕೊ-ಆಪರೇಟಿವ್ ಸೊಸೈಟಿಯಲ್ಲಿ ಹೂಡಿದರೆ ಹಣ ಸಿಗೋದಿಲ್ಲ ಅಂತ ಅವರು ಹೇಳುತ್ತಾರೆ.
ಇದನ್ನೂ ಓದಿ: Shocking Video: ಬೈಕ್ಗಳಿಗೆ ಡಿಕ್ಕಿ ಹೊಡೆದು, ರಸ್ತೆಯ ಪಕ್ಕದವರ ಮೇಲೆ ಹರಿದ ಐಷಾರಾಮಿ ಕಾರು; ಶಾಕಿಂಗ್ ವಿಡಿಯೋ ವೈರಲ್