AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿನ್ನಲಿದ್ದ ಶಕ್ತಿ ನನಗೂ ಕೊಡು ಅಂತ ಅಪ್ಪುರನ್ನು ನೆನೆದು ರಾಘವೇಂದ್ರ ರಾಜಕುಮಾರ ಎಫ್​​ಬಿನಲ್ಲಿ ಪೋಸ್ಟ್ ಮಾಡಿದ್ದಾರೆ

ನಿನ್ನಲಿದ್ದ ಶಕ್ತಿ ನನಗೂ ಕೊಡು ಅಂತ ಅಪ್ಪುರನ್ನು ನೆನೆದು ರಾಘವೇಂದ್ರ ರಾಜಕುಮಾರ ಎಫ್​​ಬಿನಲ್ಲಿ ಪೋಸ್ಟ್ ಮಾಡಿದ್ದಾರೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Nov 10, 2021 | 12:29 AM

Share

ಡಾ ರಾಜ್ ಕುಮಾರ ಅವರ ಮಕ್ಕಳ ನಡುವೆ ಇರುವ ಬಾಂಧವ್ಯ, ಪ್ರೀತಿ, ಒಡನಾಟ, ಪರಸ್ಪರ ಆದರ ಮತ್ತು ಗೌರವ ನೋಡುತ್ತಿದ್ದರೆ ಇದ್ದರೆ ಇರಬೇಕು ಇಂಥ ಅಣ್ಣ-ತಮ್ಮಂದಿರು ಅನಿಸದಿರದು. ಡಾ ರಾಜಕುಮಾರ ಅವರಿಗೆ ಐವರು ಮಕ್ಕಳು-ಮೂರು ಗಂಡು ಮತ್ತು ಎರಡು ಹೆಣ್ಣು. ಎಲ್ಲರಿಗಿಂತ ದೊಡ್ಡವರು ಶಿವರಾಜಕುಮಾರ ಮತ್ತು ಚಿಕ್ಕವರು ಪುನೀತ್ ರಾಜಕುಮಾರ. ಶಿವಣ್ಣ ಪ್ರತಿದಿನ ಮಾಧ್ಯಮದ ಜೊತೆ ಮಾತಾಡುವಾಗ ಅಪ್ಪು ನನಗಿಂತ 13 ವರ್ಷ ಚಿಕ್ಕವನು, ಅವನು ನನಗೆ ಮಗನಂತಿದ್ದ ಅಂತ ಹೇಳುತ್ತಾರೆ. ಇವರಿಬ್ಬರಿಗೆ ಹೋಲಿಸಿದರೆ, ರಾಘವೇಂದ್ರ ರಾಜಕುಮಾರ […]

ಡಾ ರಾಜ್ ಕುಮಾರ ಅವರ ಮಕ್ಕಳ ನಡುವೆ ಇರುವ ಬಾಂಧವ್ಯ, ಪ್ರೀತಿ, ಒಡನಾಟ, ಪರಸ್ಪರ ಆದರ ಮತ್ತು ಗೌರವ ನೋಡುತ್ತಿದ್ದರೆ ಇದ್ದರೆ ಇರಬೇಕು ಇಂಥ ಅಣ್ಣ-ತಮ್ಮಂದಿರು ಅನಿಸದಿರದು. ಡಾ ರಾಜಕುಮಾರ ಅವರಿಗೆ ಐವರು ಮಕ್ಕಳು-ಮೂರು ಗಂಡು ಮತ್ತು ಎರಡು ಹೆಣ್ಣು. ಎಲ್ಲರಿಗಿಂತ ದೊಡ್ಡವರು ಶಿವರಾಜಕುಮಾರ ಮತ್ತು ಚಿಕ್ಕವರು ಪುನೀತ್ ರಾಜಕುಮಾರ. ಶಿವಣ್ಣ ಪ್ರತಿದಿನ ಮಾಧ್ಯಮದ ಜೊತೆ ಮಾತಾಡುವಾಗ ಅಪ್ಪು ನನಗಿಂತ 13 ವರ್ಷ ಚಿಕ್ಕವನು, ಅವನು ನನಗೆ ಮಗನಂತಿದ್ದ ಅಂತ ಹೇಳುತ್ತಾರೆ. ಇವರಿಬ್ಬರಿಗೆ ಹೋಲಿಸಿದರೆ, ರಾಘವೇಂದ್ರ ರಾಜಕುಮಾರ ಕೊಂಚ ಅಂತರ್ಮುಖಿ ಅನಿಸುತ್ತಾರೆ, ಸಾರ್ವಜನಿಕವಾಗಿ ಅವರು ಮಾತಾಡಿದ್ದು ಬಹಳ ಕಮ್ಮಿ.

ಆದರೆ, ರಾಘಣ್ಣ ತಮ್ಮ ಅಗಲಿದ ತಮ್ಮನನ್ನು ಎಷ್ಟು ಪ್ರೀತಿಸುತ್ತಿದ್ದರು, ಅವರ ಬಗ್ಗೆ ಮತ್ತ್ತು ಅವರು ಮಾಡುತ್ತಿದ್ದ ಸಮಾಜ ಸೇವೆಯ ಬಗ್ಗ್ಗೆ ಅದೆಷ್ಟು ಅಭಿಮಾನ ಇಟ್ಟುಕೊಂಡಿದ್ದರು ಅನ್ನೋದು ಅವರ ನಿನ್ನೆಯ ಫೇಸ್ಬುಕ್ ಪೋಸ್ಟ್ ನೋಡಿದರೆ ಗೊತ್ತಾಗುತ್ತದೆ. ಅದರಲ್ಲಿ ರಾಘಣ್ಣ ತಮ್ಮ ದುಃಖ ತೋಡಿಕೊಳ್ಳುವುದರ ಜೊತೆಗೆ ಪುನೀತ್ ಮಾಡಿದ ಸಮಾಜ ಸೇವೆಯನ್ನು ಕೊಂಡಾಡುತ್ತಾ ತಮ್ಮ ಮುಂದಿನ ಅದೇ ಬದುಕಿನಲ್ಲಿ ಪ್ರೇರಣೆಯಾಗಲಿದೆ ಎಂದು ಹೇಳಿಕೊಂಡಿದ್ದಾರೆ.

ನಾನು ನಿರುದ್ಯೋಗಿಯಾಗಿದ್ದೆ, ಆದರೆ ನೀನು ನನಗೆ ನೌಕರಿ ಕೊಟ್ಟಿದ್ದೀಯಾ, ನೀನು ಯಾರಿಗೂ ಗೊತ್ತಾಗದ ಹಾಗೆ, ನಿಸ್ವಾರ್ಥ ಮನೋಭಾವದಿಂದ ಮಾಡುತ್ತಿದ್ದ ಅನೇಕ ಸಮಾಜ ಸೇವಗಳನ್ನು ನೋಡಿಕೊಳ್ಳುವ ಮತ್ತು ಮುಂದುವರಿಸಿಕೊಂಡು ಹೋಗುವ ಕೆಲಸ ಅಂತ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಅವರು ಕೊನೆಯಲ್ಲಿ ನಿನ್ನಲಿದ್ದ ಶಕ್ತಿಯನ್ನು ನನಗೆ ಕೊಡು ಅಂತ ಹೇಳಿರುವುದು ಮನೋಜ್ಞವಾಗಿದೆ. ನಿನ್ನ ನೆನಪಲ್ಲಿ, ನಿನ್ನ ಯೋಚನೆಗಳೊಂದಿಗೆ ಜೀವಿಸುತ್ತಿದ್ದೇನೆ ಅಂತ ರಾಘಣ್ಣ ಹೇಳಿದ್ದಾರೆ.

ಇದನ್ನೂಓದಿ:   Puneeth Rajkumar: ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ; ಅಪ್ಪು ಜೊತೆ ಹಾಡಿದ ಕೊನೆಯ ವಿಡಿಯೋಗಳಲ್ಲಿ ಒಂದನ್ನು ಹಂಚಿಕೊಂಡ ರಾಘವೇಂದ್ರ ರಾಜಕುಮಾರ್