ಶಿವಕುಮಾರ ಮತ್ತು ಸಿದ್ದರಾಮಯ್ಯ ಯಾಕೆ ತಮ್ಮ ಕಾರ್ಯಕರ್ತರಿಗೆ ಮಾಸ್ಕ್​ ಧರಿಸುವಂತೆ ಹೇಳುತ್ತಿಲ್ಲ?

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 11, 2022 | 8:44 PM

ಸಿದ್ದರಾಮಯ್ಯ ಮತ್ತು ಶಿವಕುಮಾರ ಕೂರುವ ಈ ಬಿಳಿ ಕಾರಿನ ಸುತ್ತ ನೆರೆದಿರುವ ಜನರನ್ನು ನೋಡಿ. ಎಷ್ಟು ಜನರ ಮುಖದ ಮೇಲೆ ಮಾಸ್ಕ್​​ ಇದೆ? ಇವರಿಗೆ ಕೊರೋನಾ ವೈರಸ್​ ಬಗ್ಗೆ ಭಯವಿದ್ದಂತಿಲ್ಲ. ಓಕೆ, ಸಿದ್ದರಾಮಯ್ಯ ಮಾಸ್ಕ್​ ಧರಿಸಿದ್ದಾರೆ ಅದರೆ, ಶಿವಕುಮಾರ ಮಾಸ್ಕ್ ಧರಿಸದಿರುವ ಶಪಥ ಮಾಡಿರುವಂತಿದೆ.

ಜನ ಮರುಳೋ ಜಾತ್ರೆ ಮರಳೋ ಅಂತ ಇದನ್ನೇ ಉಲ್ಲೇಖಿಸ ಹೇಳಿರಬಹುದು ಮಾರಾಯ್ರೇ. ಕೋವಿಡ್​​​-19 ಮೂರನೇ ಅಲೆ ಎಲ್ಲರ ನೆತ್ತಿ ಮೇಲೆ ಅಪಾಯಕಾರಿಯಾಗಿ ಓಲಾಡುತ್ತಿದೆ. ಆದರೆ, ನಮ್ಮ ರಾಜಕಾರಣಿಗಳಿಗೆ, ಅವರ ಹಿಂಬಾಲಕರಿಗೆ ಇದ್ಯಾವುದರ ಪರಿವೆಯಿಲ್ಲ. ಕರ್ನಾಟಕ ಪ್ರದೇಶ ಕಾಂಗ್ರೆಸ್​ ಅದರ ಅಧ್ಯಕ್ಷ ಡಿಕೆ ಶಿವಕುಮಾರ ಅವರ ನೇತೃತ್ವದಲ್ಲಿ ಮೇಕೆದಾಟು ಯೋಜನೆಯ ಶೀಘ್ರ ಅನುಷ್ಠಾನ ಆಗ್ರಹಿಸಿ ಆರಂಭಿಸಿರುವ ಪಾದಯಾತ್ರೆಗೆ ಮಂಗಳವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನಕಪುರನಲ್ಲಿ ಬಂದು ಸೇರಿದಾಗಿನ ದೃಶ್ಯದ ವಿಡಿಯೋ ನಿಮಗಿಲ್ಲಿ ಕಾಣುತ್ತಿದೆ. ಪಾದಯಾತ್ರೆಯ ಮೊದಲ ದಿನ ಮುಗಿದ ನಂತರ ಜ್ವರ ಕಾಣಿಸಿಕೊಂಡಿದ್ದರಿಂದ ಬೆಂಗಳೂರಿಗೆ ವಾಪಸ್ಸಾಗಿದ್ದ ಸಿದ್ದರಾಮಯ್ಯನವರು ಮಂಗಳವಾರ ವಾಪಸ್ಸಾದರು. ಮಾಜಿ ಮುಖ್ಯಮಂತ್ರಿಗಳು ಪಕ್ಷದ ಹಿರಿಯ ಮತ್ತು ಜನಪ್ರಿಯ ನಾಯಕರಾಗಿರುವುದರಿಂದ ಪಾದಯಾತ್ರೆಗೆ ಹೆಚ್ಚಿನ ಬಲ ತರುತ್ತಾರೆ ಎನ್ನುವುದು ನಿಸ್ಸಂದೇಹ.

ಆದರೆ ವಿಷಯ ಅದಲ್ಲ. ಅವರ ಅಭಿಮಾನಿಗಳು ವರ್ತಿಸುತ್ತಿರುವ ರೀತಿ ಗಾಬರಿ ಮೂಡಿಸುತ್ತದೆ. ಸಿದ್ದರಾಮಯ್ಯ ಮತ್ತು ಶಿವಕುಮಾರ ಕೂರುವ ಈ ಬಿಳಿ ಕಾರಿನ ಸುತ್ತ ನೆರೆದಿರುವ ಜನರನ್ನು ನೋಡಿ. ಎಷ್ಟು ಜನರ ಮುಖದ ಮೇಲೆ ಮಾಸ್ಕ್​​ ಇದೆ? ಇವರಿಗೆ ಕೊರೋನಾ ವೈರಸ್​ ಬಗ್ಗೆ ಭಯವಿದ್ದಂತಿಲ್ಲ. ಓಕೆ, ಸಿದ್ದರಾಮಯ್ಯ ಮಾಸ್ಕ್​ ಧರಿಸಿದ್ದಾರೆ ಅದರೆ, ಶಿವಕುಮಾರ ಮಾಸ್ಕ್ ಧರಿಸದಿರುವ ಶಪಥ ಮಾಡಿರುವಂತಿದೆ.

ಪಾದಯಾತ್ರೆ ಆರಂಭಿಸುವ ಮೊದಲು ಮೈಸೂರಲ್ಲಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದಾಗನಿಂದ ಹಿಡಿದು ಮಂಗಳವಾರದವರೆಗೆ ಡಿಕೆಶಿ ಮಾಸ್ಕ್​ ಧರಿಸಿದ್ದು ಕಂಡೇ ಇಲ್ಲ. ರಾಜಕೀಯ ಕಿಚ್ಚು, ಪಾದಯಾತ್ರೆ, ಬಿಜೆಪಿಯನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಲು ಅವರು ಮಾಡಿಕೊಂಡಿರುವ ಸಂಕಲ್ಪ ಎಲ್ಲಾ ಸರಿ, ಅದರೆ ಕೊರೋನಾ ವೈರಸ್​​​ನೊಂದಿಗೆ ಯಾಕೆ ಚೆಲ್ಲಾಟ? ವೈರಸ್​ ತಾರತಮ್ಯ ಮಾಡೋದಿಲ್ಲ ಅದಕ್ಕೆ ಎಲ್ಲರೂ ಸಮಾನರು!

ಶಿವಕುಮಾರ ಮತ್ತು ಸಿದ್ದರಾಮಯ್ಯ ತಮ್ಮ ಕಾರ್ಯಕರ್ತರಿಗೆ, ಬೆಂಬಲಿಗರಿಗೆ ಮಾಸ್ಕ್​ ಧರಿಸಿ, ದೈಹಿಕ ಆಂತರ ಕಾಯ್ದುಕೊಳ್ಳಿ ಅಂತ ಯಾಕೆ ಹೇಳುತ್ತಿಲ್ಲ? ಹಾಗೆ ಹೇಳಿದರೆ ಅವರು ಬೇರೆ ಪಕ್ಷದ ಪರ ಜೈಕಾರ ಹಾಕುತ್ತಾರೆಯೇ? ಎಚ್ಚೆತ್ತುಕೊಳ್ಳಿ ಮಾರಾಯ್ರೇ ಎಚ್ಚೆತ್ತುಕೊಳ್ಳಿ!!

ಇದನ್ನೂ ಓದಿ:   Viral Video: ಕಾರಿಗೆ ತಳ್ಳು ಗಾಡಿ ತಾಗಿದ್ದಕ್ಕೆ ಕೋಪಗೊಂಡು ಪಪ್ಪಾಯಿ ಹಣ್ಣುಗಳನ್ನು ಬಿಸಾಡಿದ ಮಹಿಳೆ; ವಿಡಿಯೋ ವೈರಲ್