ಗದಗ: ಹಾವು ಮತ್ತು ನಾಯಿ ನಡುವಿನ ಕಾದಾಟದಲ್ಲಿ ಇಬ್ಬರೂ ಗೆಲ್ಲಲಿಲ್ಲ, ಒಬ್ಬರೂ ಉಳಿಯಲಿಲ್ಲ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 18, 2022 | 5:11 PM

ಮೊದಲು ಸತ್ತಿದ್ದು ಹಾವಾದರೂ ಅದರಿಂದ ಕಚ್ಚಿಸಿಕೊಂಡ ನಾಯಿಯ ಮೈಯಲ್ಲಿ ವಿಷ ಪಸರಿಸಿ ಅದು ಕೂಡ ಸ್ವಲ್ಪ ಸಮಯದ ಬಳಿಕೆ ಸತ್ತಿದೆ. ಶೇಖಪ್ಪ ಸ್ಥಳೀಯ ಪಶು ವೈದ್ಯರೊಬ್ಬರನ್ನು ಕರೆತಂದು ನಾಯಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ, ಅಷ್ಟರಲ್ಲಿ ಬಹಳ ತಡವಾಗಿ ಬಿಟ್ಟಿರುತ್ತದೆ.

Gadag: ಎರಡು ಭಿನ್ನ ಪ್ರಾಣಿಗಳ ನಡುವೆ ನಡೆದ ರೋಚಕ ಕಾದಾಟವಿದು, ಆದರೆ ಈ ಹೋರಾಟದಲ್ಲಿ ಇಬ್ಬರೂ ಗೆಲ್ಲಲಿಲ್ಲ, ಒಬ್ಬರೂ ಉಳಿಯಲಿಲ್ಲ. ಗದಗ ಜಿಲ್ಲೆ ನರಗುಂದ (Naragunda) ತಾಲ್ಲೂಕಿನ ಹದಲಿ ಹೆಸರಿನ ಗ್ರಾಮದ ನಿವಾಸಿ ಶೇಖಪ್ಪ (Shekhappa) ಎನ್ನುವವರ ಜಮೀನಲ್ಲಿ ಅವರು ನಾಯಿ (dog) ಮತ್ತು ನಾಗರ ಹಾವಿನ (Cobra) ನಡುವೆ ಘೋರ ಸ್ವರೂಪದ ಹೋರಾಟ ನಡೆದಿದೆ. ಶೇಖಪ್ಪ ಕಾದಾಟ ಬಿಡಿಸುವ ಪ್ರಯತ್ನ ಮಾಡಿದರೂ ಹಾವು ಮತ್ತು ನಾಯಿ ಜಿದ್ದಿಗೆ ಬಿದ್ದಂತೆ ಕಾದಾಡಿವೆ. ಕಲಹದಲ್ಲಿ ಮೊದಲು ಸತ್ತಿದ್ದು ಹಾವಾದರೂ ಅದರಿಂದ ಕಚ್ಚಿಸಿಕೊಂಡ ನಾಯಿಯ ಮೈಯಲ್ಲಿ ವಿಷ ಪಸರಿಸಿ ಅದು ಕೂಡ ಸ್ವಲ್ಪ ಸಮಯದ ಬಳಿಕೆ ಸತ್ತಿದೆ. ಶೇಖಪ್ಪ ಸ್ಥಳೀಯ ಪಶು ವೈದ್ಯರೊಬ್ಬರನ್ನು ಕರೆತಂದು ನಾಯಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ, ಅಷ್ಟರಲ್ಲಿ ಬಹಳ ತಡವಾಗಿ ಬಿಟ್ಟಿರುತ್ತದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.