Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಚಾರವಾದಿ ಸಿದ್ದರಾಮಯ್ಯ ಬಾದಾಮಿಯಲ್ಲಿ ಕುರಿಗೌಡಪ್ಪಜ್ಜನ ದರ್ಶನದ ನಂತರ ತಮಗೆ ಭಂಡಾರ ಹಚ್ಚೋದು ಬೇಡ ಅಂದರು!

ವಿಚಾರವಾದಿ ಸಿದ್ದರಾಮಯ್ಯ ಬಾದಾಮಿಯಲ್ಲಿ ಕುರಿಗೌಡಪ್ಪಜ್ಜನ ದರ್ಶನದ ನಂತರ ತಮಗೆ ಭಂಡಾರ ಹಚ್ಚೋದು ಬೇಡ ಅಂದರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 18, 2022 | 6:44 PM

ಕುರಿಗೌಡಪ್ಪಜ್ಜನ ದೇವಸ್ಥಾನದಲ್ಲಿ ಪೂಜಾರಿಯೊಬ್ಬರು ಭಂಡಾರ ಹಚ್ಚಲು ಮುಂದಾದಾಗ ನಯವಾಗಿ ನಿರಾಕರಿಸುತ್ತಾರೆ. ಅವರು ವಿಚಾರವಾದಿ ಎಲ್ಲರಿಗೂ ಗೊತ್ತು. ಆದರೂ ಕೆಲ ಸಲ ಅದ್ಯಾಕೆ ಕೈಯಲ್ಲಿ ನಿಂಬೆಹಣ್ಣು ಹಿಡಿದಿರುತ್ತಾರೋ?

Badami: ಮಾಜಿ ಮುಖ್ಯಮಂತ್ರಿ ಸಿದ್ದಾಮಯ್ಯನವರು (Siddaramaiah) ಮುಂದಿನ ವಿಧಾನ ಸಭೆ ಚುನಾವಣೆಗೆ (Assembly polls) ಭರ್ಜರಿಯಾಗೇ ತಯಾರಿ ನಡೆಸಿದ್ದಾರೆ. ಶನಿವಾರ ಬಾದಾಮಿ ತಾಲ್ಲೂಕು ಪ್ರವಾಸದಲ್ಲಿದ್ದ ಅವರು ಮುತ್ತಲ್ಲಗೇರಿ ಗ್ರಾಮಕ್ಕೆ ಭೇಟಿ ನೀಡಿ ಕುರಿಗೌಡಪ್ಪಜ್ಜನ (Kurigooudappajja) ದರ್ಶನ ಪಡೆದರು ಮತ್ತು ಅದೇ ಊರಿನಲ್ಲಿ ಕುರಿಗೌಡಪ್ಪಜ್ಜನ ಸಮುದಾಯ ಭವನದ ಗುದ್ದಲಿ ಪೂಜೆ ನೆರವೇರಿಸಿದರು. ಅದು ಸರಿ, ಅದರೆ ಕುರಿಗೌಡಪ್ಪಜ್ಜನ ದೇವಸ್ಥಾನದಲ್ಲಿ ಪೂಜಾರಿಯೊಬ್ಬರು ಭಂಡಾರ ಹಚ್ಚಲು ಮುಂದಾದಾಗ ನಯವಾಗಿ ನಿರಾಕರಿಸುತ್ತಾರೆ. ಅವರು ವಿಚಾರವಾದಿ ಎಲ್ಲರಿಗೂ ಗೊತ್ತು. ಆದರೂ ಕೆಲ ಸಲ ಅದ್ಯಾಕೆ ಕೈಯಲ್ಲಿ ನಿಂಬೆಹಣ್ಣು ಹಿಡಿದಿರುತ್ತಾರೋ? ಬಿಡಿ ಸಾರ್, ನಮಗ್ಯಾಕೆ ದೊಡ್ಡವರ ಉಸಾಬರಿ…

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.