ಹುಲಿ ಉಗುರು ಪ್ರಕರಣ: ಸೆಲಿಬ್ರಿಟಿಗಳ ಮನೆಯಿಂದ ವಶಪಡಿಸಿಕೊಂಡಿರುವ ವಸ್ತುಗಳನ್ನು ಫೋರೆನ್ಸಿಕ್ ಲ್ಯಾಬ್ ಕಳಿಸಲಾಗಿದೆ: ಕುಮಾರ್ ಪುಷ್ಕರ್, ಅರಣ್ಯ ಸಂರಕ್ಷಣಾಧಿಕಾರಿ
ನಿಖಿಲ್, ದರ್ಶನ್ ಮತ್ತು ಜಗ್ಗೇಶ್ ಮನೆಗಳಲ್ಲಿ ಸಿಕ್ಕ ವಸ್ತುಗಳು ಮೇಲ್ನೋಟಕ್ಕೆ ಹುಲಿ ಉಗುರು ಅಲ್ಲ ಅಂತ ತನಿಖಾಧಿಕಾರಿಗಳ ಗಮನಕ್ಕೆ ಬಂದಿದೆ, ಆದರೆ ಅದನ್ನು ಖಚಿತಪಡಿಸಿಕೊಳ್ಳಲು ವೈಲ್ಡ್ ಲೈಫ್ ಫೋರೆನ್ಸಿಕ್ ಲ್ಯಾಬ್ ಕಳಿಸಲಾಗಿದೆ ಎಂದು ಕುಮಾರ್ ಪುಷ್ಕರ್ ಹೇಳಿದರು.
ಬೆಂಗಳೂರು: ರಾಜ್ಯದಾದ್ಯಂತ ಹುಲಿ ಉಗುರು (tiger claw) ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ (Wildlife Protection Act) ಉಲ್ಲಘಿಸಿ ವನ್ಯಜೀವಿ ಉತ್ಪನ್ನಗಳನ್ನು ಮನೆಯಲ್ಲಿಟ್ಟುಕೊಂಡಿರುವ ಕೆಲ ಸೆಲಿಬ್ರಿಟಿಗಳ ಬಗ್ಗೆ ತೀವ್ರ ಚರ್ಚೆಯಾಗುತ್ತಿರುವಂತೆಯೇ ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ (Kumar Pushkar) ಪ್ರಕರಣದಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ವಿವರಣೆ ನೀಡಿದ್ದಾರೆ, ಅವರು ಹೇಳುವ ಪ್ರಕಾರ, ದರ್ಶನ್, ಜಗ್ಗೇಶ್, ರಾಕ್ ಲೈನ್ ವೆಂಕಟೇಶ್, ನಿಖಿಲ್ ಕುಮಾರಸ್ವಾಮಿ, ಗಿರೀಶ್ ಶಿವಣ್ಣ ಮೊದಲಾದವ ಮನೆಗಳಲ್ಲಿ ಶೋಧ ನಡೆಸಿ ವನ್ಯಜೀವಿ ಉತ್ಪನ್ನಗಳೆಂದು ಆರೋಪಿಸಲಾಗಿದ್ದ ವಸ್ತುಗಳನ್ನು ಅರಣ್ಯ ಇಲಾಲೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಗಿರೀಶ್ ಮನೆಯಲ್ಲಿ ಸಿಕ್ಕಿದ್ದು ಹುಲಿ ಉಗುರಿನಂತೆ ಕಾಣುವ ಆಭರಣವಾಗಿದೆ. ನಿಖಿಲ್, ದರ್ಶನ್ ಮತ್ತು ಜಗ್ಗೇಶ್ ಮನೆಗಳಲ್ಲಿ ಸಿಕ್ಕ ವಸ್ತುಗಳು ಮೇಲ್ನೋಟಕ್ಕೆ ಹುಲಿ ಉಗುರು ಅಲ್ಲ ಅಂತ ತನಿಖಾಧಿಕಾರಿಗಳ ಗಮನಕ್ಕೆ ಬಂದಿದೆ, ಆದರೆ ಅದನ್ನು ಖಚಿತಪಡಿಸಿಕೊಳ್ಳಲು ವೈಲ್ಡ್ ಲೈಫ್ ಫೋರೆನ್ಸಿಕ್ ಲ್ಯಾಬ್ ಕಳಿಸಲಾಗಿದೆ ಎಂದು ಕುಮಾರ್ ಪುಷ್ಕರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ