DK Shivakumar Birthday: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ 63ನೇ ಹುಟ್ಟುಹಬ್ಬ ಸಂಭ್ರಮ, ಕೇಕ್, ಬೊಕ್ಕೆಗಳೊಂದಿಗೆ ಅಭಿಮಾನಿಗಳು ಮನೆಗೆ ದೌಡು!
ಅವರ ಮತ್ತು ಮತ್ತೊಮ್ಮೆ ಸಿಎಮ್ ಆಗಲು ಅವರಷ್ಟೇ ಆಸೆ ಇಟ್ಟುಕೊಂಡಿರುವ ಮಾಜಿ ಮುಖ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಉನ್ನತ ಹುದ್ದೆಗೆ ತುರುಸಿನ ಪೈಪೋಟಿ ಜಾರಿಯಲ್ಲಿದೆ.
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಹುಟ್ಟುಹಬ್ಬದ (birthday) ಸಂಭ್ರಮ. ಅವರಿವತ್ತು 63 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಬೆಳಗಿನ ಜಾವದಿಂದಲೇ ಅಭಿಮಾನಿಗಳು (supporters) ಸದಾಶಿವನಗರದಲ್ಲಿರುವ ಅವರ ಮನೆಗೆ ಬೋಕೆ, ಹೂವಿನ ಹಾರಗಳೊಂದಿಗೆ ಎಡತಾಕುತ್ತಿದ್ದಾರೆ. ಬಗೆಬಗೆಯ ಕೇಕ್ ಗಳನ್ನು ಕೊಂಡೊಯ್ದು ಅವರಿಗೆ ವಿಶ್ ಮಾಡಲಾಗುತ್ತಿದೆ. ಅಭಿಮಾನಿಗಳಿಗೆ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆನ್ನುವ ಆಸೆ ಉತ್ಕಟವಾಗಿರೋದು ದಿಟ. ಶಿವಕುಮಾರ್ ತಮ್ಮಾಸೆಯನ್ನು ಬಹಲ ದಿನಗಳ ಹಿಂದೆಯೇ ಬಹಿರಂಗಪಡಿಸಿದ್ದಾರೆ. ಅವರ ಮತ್ತು ಮತ್ತೊಮ್ಮೆ ಸಿಎಮ್ ಆಗಲು ಅವರಷ್ಟೇ ಆಸೆ ಇಟ್ಟುಕೊಂಡಿರುವ ಮಾಜಿ ಮುಖ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಉನ್ನತ ಹುದ್ದೆಗೆ ತುರುಸಿನ ಪೈಪೋಟಿ ಜಾರಿಯಲ್ಲಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

