CM in Bengaluru: ಹಾಲಿನ ದರ ಹೆಚ್ಚಿಸುವ ನಿರ್ಧಾರ ಕೆಎಂಎಫ್ ತೆಗೆದುಕೊಂಡಿದ್ದು: ಸಿದ್ದರಾಮಯ್ಯ, ಮುಖ್ಯಮಂತ್ರಿ

ಹಾಲಿನ ದರ ಹೆಚ್ಚಿಸುವ ನಿರ್ಧಾರ ಕೆಎಂಎಫ್ ತೆಗೆದುಕೊಂಡಿದೆ ತಮ್ಮನ್ನು ಕೇವಲ ಸಭೆಗೆ ಆಹ್ವಾನಿಸಲಾಗಿತ್ತು ಅಂತ ಹೇಳುವ ಮೂಲಕ ಸಿದ್ದರಾಮಯ್ಯ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

CM in Bengaluru: ಹಾಲಿನ ದರ ಹೆಚ್ಚಿಸುವ ನಿರ್ಧಾರ ಕೆಎಂಎಫ್ ತೆಗೆದುಕೊಂಡಿದ್ದು: ಸಿದ್ದರಾಮಯ್ಯ, ಮುಖ್ಯಮಂತ್ರಿ
|

Updated on:Jul 28, 2023 | 11:05 AM

ಬೆಂಗಳೂರು: ನಂದಿನಿ ಹಾಲಿನ (Nandini milk) ದರ ಹೆಚ್ಚಾಗಲಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಖಚಿತಪಡಿಸಿದರಾದರೂ ದೋಷವನ್ನು ಹಾಲು ಒಕ್ಕೂಟದ (milk federation) ಮೇಲೆ ಜಾರಿಸಿದರು. ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಿದ್ದರಾಮಯ್ಯ ಹಾಲಿನ ದರ ರೂ. 3 ಹೆಚ್ಚಿಸುವ ನಿರ್ಧಾರ ಕೆಎಂಎಫ್ ತೆಗೆದುಕೊಂಡಿದೆ, ತಮ್ಮನ್ನು ಸಭೆಗೆ ಆಹ್ವಾನಿಸಲಾಗಿತ್ತು, ಒಕ್ಕೂಟ ತೆಗೆದುಕೊಂಡಿರುವ ನಿರ್ಣಯವನ್ನು ಸಚಿವ ಸಂಪುಟದ ಗಮನಕ್ಕೆ ತರುವ ಕೆಲಸವನ್ನಷ್ಟೇ ತಾನು ಮಾಡಿದ್ದು ಎಂದು ಸಿದ್ದರಾಮಯ್ಯ ಹೇಳಿದರು. ಕರ್ನಾಟಕದಲ್ಲಿ ಈಗ ಹಾಲಿನ ದರ ರೂ. 39/ ಲೀಟರ್ ಇದೆ. ಹೆಚ್ಚಳದ ಬಳಿಕ ಅದು ರೂ. 42 ಆಗುತ್ತದೆ. ಅಷ್ಟಾಗಿಯೂ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಕಡಿಮೆ ಇದೆ. ಕೆಲ ರಾಜ್ಯಗಳಲ್ಲಿ ರೂ. 54-56/ ಲೀಟರ್ ಇದ್ದರೆ, ತಮಿಳುನಾಡಿನಲ್ಲಿ ರೂ. 44/ಲೀಟರ್ ಇದೆ ಅಂತ ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:04 am, Fri, 28 July 23

Follow us