Loading video

ಪೊಲೀಸ್ ವೈಫಲ್ಯ ಮೇಲ್ನೋಟಕ್ಕೆ ಕಾಣುತ್ತಿದೆ, ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ: ವಿಜಯೇಂದ್ರ

Updated on: May 02, 2025 | 4:42 PM

ವಿರೋಧ ಪಕ್ಷದ ನಾಯಕರಾದ ಅರ್ ಅಶೋಕ ಮತ್ತು ತಾನು ಸುಹಾಸ್ ಕುಟುಂಬಕ್ಕೆ ಧೈರ್ಯ ಹೇಳಿದ್ದೇವೆ, ಅವರೇ ಕುಟುಂಬದ ಆಧಾರ ಸ್ತಂಭವಾಗಿದ್ದರು, ತಾಯಿ ಅನಾರೋಗ್ಯದಿಂದ ಇದ್ದಾರೆ, ಅವರ ಕುಟಂಬಕ್ಕೆ ಆರ್ಥಿಕ ನೆರವಿನ ರೂಪದಲ್ಲಿ ರೂ. 25 ಲಕ್ಷ ನೀಡಲು ಪಕ್ಷದ ಮುಖಂಡರ ಜೊತೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗಿದೆ, ಸರ್ಕಾರವೂ ಹೆಚ್ಚಿನ ಪರಿಹಾರ ಘೋಷಿಸಬೇಕೆಂದು ಅಗ್ರಹಿಸುತ್ತೇವೆ ಎಂದು ವಿಜಯೇಂದ್ರ ಹೇಳಿದರು.

ಮಂಗಳೂರು, ಮೇ 2: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಅಂತಿಮ ಸಂಸ್ಕಾರದಲ್ಲಿ ಭಾಗಿಯಾದ ಬಳಿಕ ಮಾಧ್ಯಮದವರೊಂದಿಗೆ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಪಹಲ್ಗಾಮ್ ನಲ್ಲಿ ಹಿಂದೂಗಳ ನರಮೇಧ ಇನ್ನೂ ಹಸಿಯಾಗಿರುವಾಗಲೇ, ಹಿಂದೂ ಕಾರ್ಯಕರ್ತನೊಬ್ಬನ (Hindu activist) ಕೊಲೆ ನಡೆದಿರುವುದು ಖಂಡನಾರ್ಹ, ಬಿಜೆಪಿ ಇದನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದೆ ಎಂದು ಹೇಳಿದರು. ಪೊಲೀಸರ ವೈಫಲ್ಯ ಮೇಲ್ನೋಟಕ್ಕೆ ಎದ್ದುಕಾಣುತ್ತದೆ, ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿ ಜನರಿಗೆ ಸರ್ಕಾರದ ಮೇಲೆ ವಿಶ್ವಾಸ ಹೊರಟು ಹೋಗಿದೆ ಎಂದು ಹೇಳಿದ ವಿಜಯೇಂದ್ರ ಸುಹಾಸ್ ಕುಟುಂಬದೊಂದಿಗೆ ಬಿಜೆಪಿ ಸದಾ ಇರುತ್ತದೆ ಎಂದರು.

ಇದನ್ನೂ ಓದಿ:  ಸುಹಾಸ್ ಶೆಟ್ಟಿ ಹತ್ಯೆ: ಪೊಲೀಸ್ ಮಹಾ ನಿರ್ದೇಶಕರು, ಉಸ್ತುವಾರಿ ಸಚಿರಿಂದ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ