Karnataka Assembly Polls: ಪೂಜ್ಯ ತಂದೆಯವರೇ ನನಗೆ ಶಿಕಾರಿಪುರದಿಂದ ಸ್ಪರ್ಧಿಸುವಂತೆ ಹೇಳಿದರು: ಬಿವೈ ವಿಜಯೇಂದ್ರ
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಮೇರಾ ಬೂತ್ ಸಬ್ಸೇ ಮಜಬೂತ್ ಅಂತ ಹೇಳುವ ಹಾಗೆ ಕಾರ್ಯಕರ್ತರೆಲ್ಲರೂ ಬೂತ್ ಗಳ ಮಟ್ಟದಿಂದ ಕೆಲಸ ಮಾಡಲು ವಿಜಯೇಂದ್ರ ಕರೆ ನೀಡಿದರು
ಶಿವಮೊಗ್ಗ: ಶಿಕಾರಿಪುರದಲ್ಲಿ ಇಂದು ಬಿಜೆಪಿ ಸಮಾವೇಶದಲ್ಲಿ ಮಾತಾಡಿದ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಮತ್ತು ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra), ಬಿಎಸ್ ಯಡಿಯೂರಪ್ಪನವರು (BS Yediyurappa) ಪ್ರತಿನಿಧಿಸಿದ ಕ್ಷೇತ್ರದಿಂದ ತಾನು ಸ್ಪರ್ಧಿಸಬೇಕೆಂದು ಆಗ್ರಹಿಸಿದ್ದಕ್ಕೆ ಜನರಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಅಸಲಿಗೆ ತಮ್ಮ ತಂದೆಯವರ ಆಸೆಯೂ ಇದೇ ಆಗಿತ್ತು ಎಂದ ಅವರು; ಯಡಿಯೂರಪ್ಪನವರಿಗೆ ತೋರಿದ ಪ್ರೀತಿ ವಿಶ್ವಾಸವನ್ನು ತನಗೂ ನೀಡಿ ಭಾರೀ ಬಹುಮತದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda), ಮೇರಾ ಬೂತ್ ಸಬ್ಸೇ ಮಜಬೂತ್ ಅಂತ ಹೇಳುವ ಹಾಗೆ ಕಾರ್ಯಕರ್ತರೆಲ್ಲರೂ ಬೂತ್ ಗಳ ಮಟ್ಟದಿಂದ ಕೆಲಸ ಮಾಡಲು ವಿಜಯೇಂದ್ರ ಕರೆ ನೀಡಿದರು
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 03, 2023 04:25 PM