ಕೊನೆಗೂ ಮನಸ್ಸು ಬದಲಾಯಿಸಿ ಸಂಯುಕ್ತ ಪಾಟೀಲ್ ಪರ ಪ್ರಚಾರಕ್ಕೆ ಬಂದ ವೀಣಾ ಕಾಶಪ್ಪನವರ್!

|

Updated on: Apr 19, 2024 | 5:32 PM

ತಮ್ಮ ಪತಿ ಮತ್ತು ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ಅವರೊಂದಿಗೆ ವೀಣಾ ಜಿಲ್ಲಾಧಿಕಾರಿಗಳ ಕಚೇರಿಗೆ ನಡೆದು ಹೋಗುತ್ತಿರುವುದನ್ನು ನಾವಿಲ್ಲಿ ನೋಡಬಹುದು. ಸಂಯುಕ್ತ ಅವರಿಗೆ ವೀಣಾರನ್ನು ನೋಡಿ ಆಕಾಶದಲ್ಲಿ ತೇಲಾಡುವ ಅನುಭವ ಆಗಿರಬಹುದು. ಯಾಕೆಂದರೆ, ಬಾಗಲಕೋಟೆ ಕ್ಷೇತ್ರದಲ್ಲಿ ವೀಣಾ ಉಳಿದೆಲ್ಲ ಸ್ಥಳೀಯ ನಾಯಕರಿಗಿಂತ ಹೆಚ್ಚು ಪ್ರಭಾವಿ ಮತ್ತು ಜನಪ್ರಿಯರು.

ಬಾಗಲಕೋಟೆ: ವೀಣಾ ಕಾಶಪ್ಪನವರ್ (Veena Kashappanavar) ಅವರಲ್ಲಿ ಮಡುಗಟ್ಟಿದ್ದ ಕೋಪ-ತಾಪ-ಹತಾಷ-ಬೇಸರ-ಮುನಿಸು ಮಾಯವಾದಂತಿದೆ. ಬಾಗಲಕೋಟೆ ಲೋಕಸಭಾ ಕ್ಷೇತ್ರದ (Bagalkot LS Seat) ಟಿಕೆಟ್ ತಮಗೆ ನೀಡದೆ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತ ಪಾಟೀಲ್ ಗೆ (Samyukta Patil) ನೀಡಿದ್ದಕ್ಕೆ ವೀಣಾ ತೀವ್ರ ಹತಾಷರಾಗಿದ್ದರು ಮತ್ತು ಮಾಧ್ಯಮಗಳ ಮುಂದೆ ತಮ್ಮ ನೋವನ್ನು ತೋಡಿಕೊಂಡಿದ್ದರು. ಸಂಯುಕ್ತ ಪರ ಪ್ರಚಾರ ಮಾಡಲು ಹೋಗುವುದಿಲ್ಲ ಅಂತ ಹಟ ಕೂಡ ಹಿಡಿದು ಕೆಲದಿನಗಳ ಕಾಲ ಬೆಂಗಳೂರಲ್ಲೇ ಉಳಿದುಬಿಟ್ಟಿದ್ದರು. ಅದರೆ ಅವರು ಮುನಿಸನ್ನು ಮರೆತು ಇವತ್ತು ಸಂಯಕ್ತ ನಾಮಪತ್ರ ಸಲ್ಲಿಸುವ ಮೊದಲು ನಡೆದ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ಪಾಳೆಯಲ್ಲಿ ಹರ್ಷ ಮೂಡಿಸಿದರು. ತಮ್ಮ ಪತಿ ಮತ್ತು ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ಅವರೊಂದಿಗೆ ವೀಣಾ ಜಿಲ್ಲಾಧಿಕಾರಿಗಳ ಕಚೇರಿಗೆ ನಡೆದು ಹೋಗುತ್ತಿರುವುದನ್ನು ನಾವಿಲ್ಲಿ ನೋಡಬಹುದು. ಸಂಯುಕ್ತ ಅವರಿಗೆ ವೀಣಾರನ್ನು ನೋಡಿ ಆಕಾಶದಲ್ಲಿ ತೇಲಾಡುವ ಅನುಭವ ಆಗಿರಬಹುದು. ಯಾಕೆಂದರೆ, ಬಾಗಲಕೋಟೆ ಕ್ಷೇತ್ರದಲ್ಲಿ ವೀಣಾ ಉಳಿದೆಲ್ಲ ಸ್ಥಳೀಯ ನಾಯಕರಿಗಿಂತ ಹೆಚ್ಚು ಪ್ರಭಾವಿ ಮತ್ತು ಜನಪ್ರಿಯರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಪಂಚಮಸಾಲಿ ಸಮುದಾಯದ ಹೆಸರು ಹೇಳಿಕೊಂಡು ಹೊರಗಿನಿಂದ ಬಂದು ಟಿಕೆಟ್ ಪಡೆಯುವುದು ಅನ್ಯಾಯ: ವೀಣಾ ಕಾಶಪ್ಪನವರ್​