ವೀಣಾ ಕಾಶಪ್ಪನವರ್ ಖಂಡಿತವಾಗಿಯೂ ನನ್ನ ಪರ ಪ್ರಚಾರಕ್ಕೆ ಬರಲಿದ್ದಾರೆ: ಸಂಯುಕ್ತ ಪಾಟೀಲ್

ವೀಣಾ ಕಾಶಪ್ಪನವರ್ ಖಂಡಿತವಾಗಿಯೂ ನನ್ನ ಪರ ಪ್ರಚಾರಕ್ಕೆ ಬರಲಿದ್ದಾರೆ: ಸಂಯುಕ್ತ ಪಾಟೀಲ್

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 30, 2024 | 3:05 PM

ಕಾರ್ಯಕರ್ತರು ಮಾತ್ರ ಅಲ್ಲ, ಶಾಸಕರು, ಹಿರಿಯ ನಾಯಕರು, ಸಚಿವರು-ಎಲ್ಲ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಹೇಳಿದ ಸಂಯುಕ್ತ, ಟಿಕೆಟ್ ಸಿಗದ ಕಾರಣ ತೀವ್ರವಾಗಿ ನೊಂದಿರುವ ಮತ್ತು ಅಸಮಾಧಾನಗೊಂಡಿರುವ ವೀಣಾ ಕಾಶಪ್ಪನವರ್ ಅವರ ಬೆಂಬಲ ಸಿಗಲಿದೆ ಅವರು ಪ್ರಚಾರಕ್ಕೆ ಬರುವ ಸಂಪೂರ್ಣ ಭರವಸೆ ತನಗಿದೆ ಎಂದರು.

ಬಾಗಲಕೋಟೆ: ದಿನಗಳೆದಂತೆ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಂಯುಕ್ತ ಪಾಟೀಲ್ (Samyukta Patil) ಆತ್ಮವಿಶ್ವಾಸ ಹೆಚ್ಚುತಿದೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಟಿವಿ9 ವರದಿಗಾರನೊಂದಿಗೆ ಮಾತಾಡಿದ ಅವರು ಕ್ಷೇತ್ರದಲ್ಲಿ ಜನರಿಂದ ತನಗೆ ಉತ್ತಮ ಬೆಂಬಲ ಮತ್ತು ಪ್ರತಿಕ್ರಿಯೆ ಸಿಗುತ್ತಿದೆ, ಕಾರ್ಯಕರ್ತರೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ, ಪ್ರಚಾರದ ಭರಾಟೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಬಹುದು, ಜನ ತನಗೋಸ್ಕರ ಅಂತಲ್ಲ, ಪಕ್ಷಕ್ಕಾಗಿ ಒಂದೇ ಮನಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ, ಎಲ್ಲರ ಚಿತ್ತ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದರ ಮೇಲೆ ನೆಟ್ಟಿದೆ ಎಂದು ಹೇಳಿದರು. ಕಾರ್ಯಕರ್ತರು ಮಾತ್ರ ಅಲ್ಲ, ಶಾಸಕರು, ಹಿರಿಯ ನಾಯಕರು, ಸಚಿವರು-ಎಲ್ಲ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಹೇಳಿದ ಸಂಯುಕ್ತ, ಟಿಕೆಟ್ ಸಿಗದ ಕಾರಣ ತೀವ್ರವಾಗಿ ನೊಂದಿರುವ ಮತ್ತು ಅಸಮಾಧಾನಗೊಂಡಿರುವ ವೀಣಾ ಕಾಶಪ್ಪನವರ್ (Veena Kashappanavar) ಅವರ ಬೆಂಬಲ ಸಿಗಲಿದೆ ಅವರು ಪ್ರಚಾರಕ್ಕೆ ಬರುವ ಸಂಪೂರ್ಣ ಭರವಸೆ ತನಗಿದೆ ಎಂದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೆಲ್ಲ ಒಂದು ಕುಟುಂಬದಂತೆ, ಪಂಚಮಸಾಲಿ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿರುವ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ಮತ್ತು ವೀಣಾ ಅವರು ಪ್ರಚಾರದಲ್ಲಿ ಕೈಜೋಡಿಸಲಿರುವುದರಿಂದ ಆ ಸಮುದಾಯದ ವೋಟು ತಮಗೆ ಸಿಗಲಿವೆ ಎಂದು ಸಂಯುಕ್ತ ಪಾಟೀಲ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:  ಸಂಯುಕ್ತ ಪಾಟೀಲ್ ಪತಿ ಬೀದರ್​ನವರು, ಆ ಲೋಕಸಭಾ ಕ್ಷೇತ್ರದ ಟಿಕೆಟ್ ಯಾಕೆ ಹೈಕಮಾಂಡ್ ಅವರಿಗೆ ನೀಡಲಿಲ್ಲ? ವೀಣಾ ಕಾಶಪ್ಪನವರ್