ಹೇಳದೆ ಕೇಳದೆ ಉಚಿತ ಬಸ್ ಹತ್ತಿ ತವರಿಗೆ ಹೋದ ಪತ್ನಿ; ಸಿಟ್ಟಿಗೆದ್ದ ಪತಿಯಿಂದ KSRTC ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ

ಹೇಳದೆ ಕೇಳದೆ ಉಚಿತ ಬಸ್ ಹತ್ತಿ ತವರಿಗೆ ಹೋದ ಪತ್ನಿ; ಸಿಟ್ಟಿಗೆದ್ದ ಪತಿಯಿಂದ KSRTC ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ

ಬಿ ಮೂರ್ತಿ, ನೆಲಮಂಗಲ
| Updated By: Rakesh Nayak Manchi

Updated on:Mar 30, 2024 | 3:37 PM

ಕರ್ನಾಟಕದಲ್ಲಿ ಶಕ್ತಿ ಯೋಜನೆ ಜಾರಿಯಾದ ನಂತರ ಮನೆಯಲ್ಲಿ ಹೇಳದೆ ಕೇಳದೆ ಮಹಿಳೆಯರು ಹೊರಟು ಹೋಗುವ ಘಟನೆಗಳು ನಡೆಯುತ್ತಿವೆ. ಇದರಿಂದಾಗಿ ಪತಿಮಹಾಶಯರು ಕೆರಳಿ ಕೆಂಡವಾಗುತ್ತಿದ್ದಾರೆ. ನೆಲಮಂಗಲದಲ್ಲೂ ಇಂತಹದ್ದೇ ಒಂದು ಘಟನೆ ನಡೆದಿದೆ. ಉಚಿತ ಬಸ್ ಹಿನ್ನೆಲೆ ಪತ್ನಿ ತವರಿಗೆ ಹೋಗಿದ್ದಾಳೆ ಎಂದು ಆಕ್ರೋಶಗೊಂಡ ಕುಡುಕ ಪತಿ ಕೆಎಸ್​ಆರ್​ಟಿಸಿ ಸಿಬ್ಬಂದಿ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾನೆ.

ನೆಲಮಂಗಲ, ಮಾ.30: ಪತ್ನಿ ಫ್ರೀ ಬಸ್​ನಲ್ಲಿ ತವರಿಗೆ ಹೋಗಿದ್ದನ್ನ ಕಂಡು ಸಿಟ್ಟಿಗೆದ್ದ ಕುಡುಕ ಗಂಡ ಕೆಎಸ್​ಆರ್​ಟಿಸಿ (KSRTC) ಸಿಬ್ಬಂದಿ ಮೇಲೆ ಚಾಕು, ದೊಣ್ಣೆಯಿಂದ ಹಲ್ಲೆಗೆ ಯತ್ನಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ (Nelamangala) ತಾಲೂಕಿನಲ್ಲಿ ನಡೆದಿದೆ. ಉಚಿತ ಬಸ್ (Free Bus) ಇದೆ ಎಂದು ತನಗೆ ಹೇಳದೆ ಪತ್ನಿ ತವರಿಗೆ ಹೊಗಿದ್ದಾಳೆ ಎಂದು ಚಿಕ್ಕಸಂದ್ರದ ನಾಗ ಎಂಬಾತ ಸಿಟ್ಟಿಗೆದ್ದು ರಂಪಾಟ ನಡೆಸಿದ್ದಾನೆ. ಮೊದಲು ಚಾಕು ಹಿಡಿದು ಹಲ್ಲೆ ನಡೆಸಲು ಯತ್ನಿಸಿದಾಗ ಸ್ಥಳೀಯರು ತಡೆದಿದ್ದಾರೆ. ಬಳಿಕ ದೊಣ್ಣೆ ಹಿಡಿದುಕೊಂಡು ಹಲ್ಲೆಗೆ ಮುಂದಾದಾಗ ಅಲ್ಲೇ ಇದ್ದ ವ್ಯಕ್ತಿಯೊಬ್ಬರು ನಾಗನನ್ನು ತಡೆದಿದ್ದಾರೆ.

ಇದನ್ನೂ ಓದಿ: ಡಾ ಮಂಜುನಾಥ್ ಮಾಧ್ಯಮದವರೊಂದಿಗೆ ಮಾತಾಡುವಾಗ ಕುಡುಕನೊಬ್ಬ ‘ಮಂಜಣ್ಣ ಕರ್ನಾಟಕದ ಸುಪುತ್ರ’ ಅಂತ ಕೂಗಿದ!

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Mar 30, 2024 03:36 PM