ಬೆಂಬಲಿಗರ ಜೊತೆ ಸುಮಲತಾ ಮಹತ್ವದ ಮಾತುಕತೆ: ಮುಂದಿನ ನಡೆ ಘೋಷಣೆ ಮಾಡ್ತಾರಾ? ಲೈವ್ ನೋಡಿ

ಬೆಂಬಲಿಗರ ಜೊತೆ ಸುಮಲತಾ ಮಹತ್ವದ ಮಾತುಕತೆ: ಮುಂದಿನ ನಡೆ ಘೋಷಣೆ ಮಾಡ್ತಾರಾ? ಲೈವ್ ನೋಡಿ

ರಮೇಶ್ ಬಿ. ಜವಳಗೇರಾ
|

Updated on: Mar 30, 2024 | 3:56 PM

ಬೆಂಗಳೂರಿನ ಸುಮಲತಾ ಅಂಬರೀಶ್ ಅವರ ಮನೆಗೆ ಮಂಡ್ಯದಿಂದ ಅವರ ಬೆಂಬಲಿಗರು, ಅಭಿಮಾನಿಗಳು ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಲತಾ ಅವರು  ಅಭಿಮಾನಗಳ ಕುರಿತು ಮಾತನಾಡುತ್ತಿದ್ದು, ಈ ವೇಳೆ ಅವರ ಮುಂದಿನ ರಾಜಕೀಯ ನಡೆ ಬಗ್ಗೆ ಘೋಷಣೆ ಮಾಡುತ್ತಾರಾ? ಹಾಗಾದ್ರೆ, ಸುಮಲತಾ ಮುಂದಿನ ರಾಜಕೀಯ ನಡೆ ಯತ್ತ ಎನ್ನುವುದನ್ನು ಲೈವ್​ನಲ್ಲಿ ನೋಡಿ.

ಮಂಡ್ಯ, (ಮಾರ್ಚ್ 30): ಮಂಡ್ಯ ಟಿಕೆಟ್ ಜೆಡಿಎಸ್ ಪಾಲಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿಯೇ ಅಖಾಡಕ್ಕೆ ಧುಮುಕುತ್ತಿದ್ದು ರಣಕಣ ನಿಗಿ ನಿಗಿ ಎನ್ನುತ್ತಿದೆ.. ಮಂಡ್ಯದಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ ಬಳಿಕ ಮೌನಕ್ಕೆ ಶರಣಾಗಿದ್ದ ಸುಮಲತಾ ಅಂಬರೀಶ್ ಅವರನ್ನು ನಿನ್ನೆ (ಮಾರ್ಚ್ 29) ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದ್ರೆ, ಸುಮಲತಾ ಅಂಬರೀಶ್ ಅವರು ಈಗಲೇ ಏನು ತೀರ್ಮಾನ ಕೈಗೊಳ್ಳಲ್ಲ. ನನ್ನ ಅಭಿಮಾನಿಗಳು, ಬೆಂಗಲಿಗರ ಅಭಿಪ್ರಾಯ ಪಡೆದು ಮಂಡ್ಯದಲ್ಲೇ ನನ್ನ ಮುಂದಿನ ನಿರ್ಧಾರ ಘೋಷಿಸುವುದಾಗಿ ವಿಜಯೇಂದ್ರಗೆ ಹೇಳಿದ್ದರು.  ಆದ್ರೆ, ಅವರ ಬೆಂಬಲಿಗರು ಬೆಂಗಳೂರಿನ ಸುಮಲತಾ ಅಂಬರೀಶ್ ಅವರ ಮನೆಗೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಲತಾ ಅವರು  ಅಭಿಮಾನಗಳ ಕುರಿತು ಮಾತನಾಡುತ್ತಿದ್ದು, ಈ ವೇಳೆ ಅವರ ಮುಂದಿನ ರಾಜಕೀಯ ನಡೆ ಬಗ್ಗೆ ಘೋಷಣೆ ಮಾಡುತ್ತಾರಾ? ಹಾಗಾದ್ರೆ, ಸುಮಲತಾ ಮುಂದಿನ ರಾಜಕೀಯ ನಡೆ ಯತ್ತ ಎನ್ನುವುದನ್ನು ಲೈವ್​ನಲ್ಲಿ ನೋಡಿ.