ತೇಜಸ್ವಿನಿ ಗೌಡ ಬಹಳ ಹಿಂದೆಯೇ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾಗಿ ಪಕ್ಷ ಸೇರುವ ಇಚ್ಛೆ ವ್ಯಕ್ತಪಡಿಸಿದ್ದರು: ಡಿಕೆ ಶಿವಕುಮಾರ್
ಹೆಚ್‌ಡಿ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿರುವುದನ್ನು ಶಿವಕುಮಾರ್ ಗಮನಕ್ಕೆ ತಂದಾಗ, ಅವರೆಲ್ಲ ಒಂದೇ ಗರಡಿಯಲ್ಲಿ ಪಳಗಿದವರು, ಇವರ ಪಟ್ಟು ಅವರಿಗೆ ಗೊತ್ತು, ಅವರ ಪಟ್ಟು ಇವರಿಗೆ ಗೊತ್ತು, ಚುನಾವಣೆ ಸಂದರ್ಭದಲ್ಲಿ ಅವರವರ ಅನುಕೂಲಕ್ಕೆ ತಕ್ಕಂತೆ ಮಾತಾಡುತ್ತಾರೆ, ಅವರು (ಕುಮಾರಸ್ವಾಮಿ) ಮಾತಾಡಿದ್ದನ್ನು ಮರೆತು ಬಿಡಲಾಗುತ್ತಾ ಎಂದು ಹೇಳಿದರು.
ಬೆಂಗಳೂರು: ವಿಧಾನ ಪರಿಷತ್ ಸದಸ್ಯರಾಗಿದ್ದ ಮತ್ತು ವಿಧಾನಮಂಡಲ ಬಜೆಟ್ ಅಧಿವೇಶನದಲ್ಲಿ ಸಿದ್ದರಾಮಯ್ಯ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದ ಬಿಜೆಪಿಯ ತೇಜಸ್ವಿನಿ ಗೌಡ (Tejasvini Gowda) ಇಂದು ದೆಹಲಿಯಲ್ಲಿ ಕಾಂಗ್ರೆಸ್ ಸೇರಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಸಂಭ್ರಮವೇನೂ ವ್ಯಕ್ತಪಡಿಸಲಿಲ್ಲ. ಅವರ ಸೇರ್ಪಡೆ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ತೇಜಸ್ವಿನಿ ಬಿಜೆಪಿಯ ವಕ್ತಾರೆ (spokesperson) ಅಗಿದ್ದರು ಮತ್ತು ವಿಧಾನ ಪರಿಷತ್ ನ ಹಾಲಿ ಸದಸ್ಯೆಯೂ ಆಗಿದ್ದರು, ಬಹಳ ದಿನಗಳ ಹಿಂದೆಯೇ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಪಕ್ಷ ಸೇರುವ ಇಚ್ಛೆ ವ್ಯಕ್ತಪಡಿಸಿದ್ದರು ಎಂದು ಶಿವಕುಮಾರ್ ಹೇಳಿದರು. ಖರ್ಗೆ ಅವರು ವಿಷಯವನ್ನು ತನ್ನ ಗಮನಕ್ಕೆ ತಂದಾಗ ಪಕ್ಷಕ್ಕೆ ಬರುವವರನ್ನೆಲ್ಲ ಸ್ವಾಗತಿಸೋಣ ಎಂದು ಹೇಳಿದ್ದಾಗಿ ಶಿವಕುಮಾರ್ ಹೇಳಿದರು. ಹೆಚ್‌ಡಿ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿರುವುದನ್ನು ಶಿವಕುಮಾರ್ ಗಮನಕ್ಕೆ ತಂದಾಗ, ಅವರೆಲ್ಲ ಒಂದೇ ಗರಡಿಯಲ್ಲಿ ಪಳಗಿದವರು, ಇವರ ಪಟ್ಟು ಅವರಿಗೆ ಗೊತ್ತು, ಅವರ ಪಟ್ಟು ಇವರಿಗೆ ಗೊತ್ತು, ಚುನಾವಣೆ ಸಂದರ್ಭದಲ್ಲಿ ಅವರವರ ಅನುಕೂಲಕ್ಕೆ ತಕ್ಕಂತೆ ಮಾತಾಡುತ್ತಾರೆ, ಅವರು (ಕುಮಾರಸ್ವಾಮಿ) ಮಾತಾಡಿದ್ದನ್ನು ಮರೆತು ಬಿಡಲಾಗುತ್ತಾ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಓದಿ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಎಂಎಲ್ಸಿ ತೇಜಸ್ವಿನಿ ಗೌಡ