ಗೌತಮ್ಗೆ ಟಿಕೆಟ್ ನೀಡಿದ್ದನ್ನು ಮುನಿಯಪ್ಪ ಸ್ವಾಗತಿಸುತ್ತಾರಾದರೂ ಅವರಲ್ಲಿ ಅಸಮಾಧಾನ ಮಡುಗಟ್ಟಿದೆ!
ಕೋಲಾರ ಅಭ್ಯರ್ಥಿ ಆಯ್ಕೆ ಪಕ್ಷದ ವರಿಷ್ಠರ ತಲೆಬಿಸಿ ಮಾಡಿದ್ದು ಸುಳ್ಳಲ್ಲ. ಆದರೆ, ಎಐಸಿಸಿ ನಿರ್ಧಾರ ಮುನಿಯಪ್ಪ ವಿರೋಧಿ ಬಣದ ಶಿಬಿರದಲ್ಲಿ ಹರ್ಷ ಮೂಡಿಸಿದೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುನಿಯಪ್ಪ ಹೈಕಮಾಂಡ್ ನಿರ್ಧಾರದಿಂದ ಅಸಮಾಧಾನಗೊಂಡಿರುವುದು ಸ್ಪಷ್ಟವಾಗಿ ಗೊತ್ತಾಗುತಿತ್ತು.
ಬೆಂಗಳೂರು: ಕೋಲಾರ ಕ್ಷೇತ್ರದ ಟಿಕೆಟ್ ವಿವಾದ ಬಗೆಹರಿದಿದೆ. ಸಚಿವ ಕೆಹೆಚ್ ಮುನಿಯಪ್ಪ (KH Muniyappa) ಅಳಿಯನಿಗೆ ಟಿಕೆಟ್ ನೀಡದ ಕಾಂಗ್ರೆಸ್ ಹೈಕಮಾಂಡ್ ಕೆವಿ ಗೌತಮ್ (KV Gowtham) ನೀಡಿದೆ. ಮೂಲಗಳ ಪ್ರಕಾರ ಗೌತಮ್ ತಂದೆ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನಡುವೆ ದಶಕಗಳ ಬಾಂಧವ್ಯವಿದೆ. ಅದೇ ಕಾರಣಕ್ಕೆ ಗೌತಮ್ ಗೆ ಟಿಕೆಟ್ ಸಿಕ್ಕಿದೆ ಅಂತ ನಿಖರವಾಗಿ ಹೇಳಲಾಗದಿದ್ದರೂ, ಕೋಲಾರ ಅಭ್ಯರ್ಥಿ ಆಯ್ಕೆ ಪಕ್ಷದ ವರಿಷ್ಠರ ತಲೆಬಿಸಿ ಮಾಡಿದ್ದು ಸುಳ್ಳಲ್ಲ. ಆದರೆ, ಎಐಸಿಸಿ ನಿರ್ಧಾರ ಮುನಿಯಪ್ಪ ವಿರೋಧಿ ಬಣದ ಶಿಬಿರದಲ್ಲಿ ಹರ್ಷ ಮೂಡಿಸಿದೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುನಿಯಪ್ಪ ಹೈಕಮಾಂಡ್ ನಿರ್ಧಾರದಿಂದ ಅಸಮಾಧಾನಗೊಂಡಿರುವುದು ಸ್ಪಷ್ಟವಾಗಿ ಗೊತ್ತಾಗುತಿತ್ತು.
ತಮ್ಮ ಕುಟುಂಬಕ್ಕೆ ಟಿಕೆಟ್ ಬೇಕೆಂದು ಆಗ್ರಹಿಸಿದ್ದು ನಿಜ, ಆದರೆ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವನ್ನು ಅಂಗೀಕರಿಸುವುದಾಗಿ ಮೊದಲಿಂದಲೂ ಹೇಳಿಕೊಂಡು ಬಂದಿರುವ ಹಾಗೆ ನಿರ್ಧಾರವನ್ನು ಸ್ವಾಗತಿಸಿ ಗೌತಮ್ ಗೆಲುವಿಗೆ ಶ್ರಮಿಸುವುದಾಗಿ ಮುನಿಯಪ್ಪ ಹೇಳಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಂದೀಪ್ ಸುರ್ಜೆವಾಲಾ ಮತ್ತು ಕೆಸಿ ವೇಣುಗೋಪಾಲ್ ತಮಗೆ ಫೋನ್ ಮಾಡಿ ವಿಷಯ ತಿಳಿಸಿದರೆಂದು ಮುನಿಯಪ್ಪ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಓದಿ: ಇಬ್ಬರ ಘಟಾನುಘಟಿ ನಾಯಕರ ಬಣ ಜಗಳದಲ್ಲಿ ಕೋಲಾರ ಟಿಕೆಟ್ ಗಿಟ್ಟಿಸಿಕೊಂಡ ಗೌತಮ್ ಯಾರು?