ಕೋಲಾರಕ್ಕೆ 3ನೇ ವ್ಯಕ್ತಿ ನಿರ್ಧಾರ ಸರಿಯಲ್ಲ; ಕಾಲ ಮಿಂಚಿಲ್ಲ, ಚಿಕ್ಕಪೆದ್ದಣ್ಣಗೆ ಅವಕಾಶ ಕೊಡಿ: ಮುನಿಯಪ್ಪ ಆಗ್ರಹ
ಎಲ್ಲ ಕಡೆ ಸಂಧಾನ ಆಗುತ್ತೆ, ಕೋಲಾರದ್ದು ಏಕೆ ಸಂಧಾನ ಆಗುತ್ತಿಲ್ಲ. ಸಿಎಂ, ಡಿಸಿಎಂ ಅವರಿಗೆ ಸಮಸ್ಯೆ ಬಗೆಹರಿಸಬೇಕಾದ ಜವಾಬ್ದಾರಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮಸ್ಯೆ ಬಗೆಹರಿಸಬೇಕಾದವರು ಸ್ವಲ್ಪ ಮನಸ್ಸು ಮಾಡಬೇಕು. ಅವರು ಸ್ವಲ್ಪ ಮನಸ್ಸು ಮಾಡಿದರೆ ಸಮಸ್ಯೆ ಬಗೆಹರಿಯುತ್ತದೆ ಎಂದು ಸಚಿವ ಕೆಹೆಚ್ ಮುನಿಯಪ್ಪ ಹೇಳಿದರು.
ಬೆಂಗಳೂರು, ಮಾರ್ಚ್ 29: ಕೋಲಾರ ಲೋಕಸಭಾ ಕ್ಷೇತ್ರದ (Kolar Lok Sabha Constituency) ಕಾಂಗ್ರೆಸ್ ಟಿಕೆಟ್ ಕಗ್ಗಂಟಾಗಿದೆ. ಕೋಲಾರ ಕ್ಷೇತ್ರದ ಟಿಕೆಟ್ ಮೂರನೇ ವ್ಯಕ್ತಿ ಗೌತಮ ಹೆಸರು ಕೇಳಿ ಬರುತ್ತಿದೆ. ಈ ವಿಚಾರವಾಗಿ ಸಚಿವ ಕೆಹೆಚ್ ಮುನಿಯಪ್ಪ (KH Muniyappa) ಮಾತನಾಡಿ, ಮೂರನೇ ಅಭ್ಯರ್ಥಿ ಬಗ್ಗೆ ನಾನು ಯೋಚನೆ ಮಾಡಿಯೇ ಇಲ್ಲ. ಬೇರೆಯವರಿಗೆ ಟಿಕೆಟ್ ಕೊಡುತ್ತೇವೆ ಅನ್ನೋ ನಿರ್ಧಾರ ಸರಿಯಲ್ಲ. ಗೌತಮ್ ಅಂತ ಹೆಸರು ನಾನು ಹೇಳಲ್ಲ. ನಾನು ಬಹಳ ನೋವಿನಲ್ಲಿದ್ದೇನೆ, ಆದರೆ ನನ್ನ ನೋವು ದೊಡ್ಡದಲ್ಲ. ಕಾಂಗ್ರೆಸ್ (Congress) ಪಕ್ಷವೇ ದೊಡ್ಡದು ಎಂದ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಮೇಶ್ ಕುಮಾರ್ ಬಣದವರಿಗೂ ಬೇಡ, ಮುನಿಯಪ್ಪ ಬಣದವರಿಗೂ ಬೇಡ ಅಂತ ಮೂರನೇದವರಿಗೆ ಟಿಕೆಟ್ ನೀಡಿದರೆ, ಯಾರೂ ಕೆಲಸ ಮಾಡಲ್ಲ. ಬರುವ ಅಭ್ಯರ್ಥಿ ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತಾರೆ. ಮುಖ್ಯಮಂತ್ರಿಗಳು ತೆಗೆದುಕೊಳ್ಳುತ್ತಿರುವ ನಿರ್ಧಾರ ಫಲಿತಾಂಶಕ್ಕಾಗಿ ಅಲ್ಲ. ಈಗಲೂ ಕಾಲ ಮಿಂಚಿಲ್ಲ, ಚಿಕ್ಕಪೆದ್ದಣ್ಣಗೆ ಅವಕಾಶ ಕೊಟ್ಟರೆ ಗೆಲ್ಲಬಹುದು ಎಂದರು.
ಎಲ್ಲ ಕಡೆ ಸಂಧಾನ ಆಗುತ್ತೆ, ಕೋಲಾರದ್ದು ಏಕೆ ಸಂಧಾನ ಆಗುತ್ತಿಲ್ಲ. ಸಿಎಂ, ಡಿಸಿಎಂ ಅವರಿಗೆ ಸಮಸ್ಯೆ ಬಗೆಹರಿಸಬೇಕಾದ ಜವಾಬ್ದಾರಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮಸ್ಯೆ ಬಗೆಹರಿಸಬೇಕಾದವರು ಸ್ವಲ್ಪ ಮನಸ್ಸು ಮಾಡಬೇಕು. ಅವರು ಸ್ವಲ್ಪ ಮನಸ್ಸು ಮಾಡಿದರೆ ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಸಿಎಂ, ಡಿಸಿಎಂ ಮುಂದೆ ಮುನಿಯಪ್ಪರ ದಲಿತ ಎಡಗೈ-ಬಲಗೈ ಸಮುದಾಯದ ಪ್ರಾತಿನಿಧ್ಯದ ವಾದ
ಹಾಗಾದ್ರೆ ಕೋಲಾರ ಕಾಂಗ್ರಸ್ ಅಭ್ಯರ್ಥಿ ಯಾರು?
ಸಚಿವ ಕೆಎಚ್ ಮುನಿಯಪ್ಪ ಅಳಿಯನಿಗೆ ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಖಚಿತವಾಗುತ್ತಿದ್ದಂತೆಯೇ ರಮೇಶ್ ಕುಮಾರ್ ಬಣದ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಕೆಲ ಶಾಸಕ, ವಿಧಾನಪರಿಷತ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಹಂತಕ್ಕೆ ಹೋಗಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ಕೋಲಾರ ನಾಯಕರ ಜೊತೆ ಸಂಧಾನ ಸಭೆ ಮಾಡಿದ್ದು, ಸಭೆ ಫಲಪ್ರದವಾಗಿದೆ. ಸಿಎಂ, ಡಿಸಿಎಂ ಮತ್ತು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ರಮೇಶ್ ಕುಮಾರ್ ಬಣದ ನಾಯಕರು ಹೇಳುತ್ತಿದ್ದಾರೆ.
ಆದರೆ, ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ ಉಳಿದಿದೆ. ಮುನಿಯಪ್ಪ ಅಳಿಯನಿಗೆ ಟಿಕೆಟ್ ಎನ್ನುವ ಸುದ್ದಿ ಹರಿದಾಡಿದ ಬೆನ್ನಲ್ಲೇ ಇಷ್ಟೆಲ್ಲಾ ಕೋಲಾಹಲ ನಡೆದಿದೆ. ಹೀಗಾಗಿ ಹೈಕಮಾಂಡ್, ಬೇರೆಯವರಿಗೆ ಟಿಕೆಟ್ ನೀಡುತ್ತೋ ಅಥವಾ ಅದೇ ಮುನಿಯಪ್ಪನವರ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಮಣೆ ಹಾಕುತ್ತೋ ಎನ್ನುವುದೇ ತೀವ್ರ ಕುತೂಹಲ ಮೂಡಿಸಿದೆ. ಒಂದು ವೇಳೆ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡಿದರೆ, ರಮೇಶ್ ಕುಮಾರ್ ಬಣದ ನಾಯಕರು ಸುಮ್ಮನೆ ಇರುತ್ತಾರಾ ಅಥವಾ ಚುನಾವಣೆಯಲ್ಲಿ ಸೈಲೆಂಟ್ ಆಗುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ