ಬಾಗಲಕೋಟೆ ಜಿಲ್ಲಾ ಕಾರ್ಯಕರ್ತರ ವಿಶ್ವಾಸ ಗೆಲ್ಲುವ ಪ್ರಯತ್ನಕ್ಕೆ ಮುಂದಾದ ಸಂಯುಕ್ತಾ ಪಾಟೀಲ್ ಗೆ ಆರಂಭಿಕ ಜಯ

ಬಾಗಲಕೋಟೆ ಜಿಲ್ಲಾ ಕಾರ್ಯಕರ್ತರ ವಿಶ್ವಾಸ ಗೆಲ್ಲುವ ಪ್ರಯತ್ನಕ್ಕೆ ಮುಂದಾದ ಸಂಯುಕ್ತಾ ಪಾಟೀಲ್ ಗೆ ಆರಂಭಿಕ ಜಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 23, 2024 | 6:18 PM

ಮಹಿಳೆಯರಿಗೆ ಅಕ್ಕ, ಆಂಟಿ ಅಂತ ಮಾತಾಡಿದ ಸಂಯುಕ್ತಾ, ಅವರನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದರು. ಯುವ ಕಾರ್ಯಕರ್ತರಿಗೆ ತಮ್ಮ ಹೊಸ ನಾಯಕಿ ಜೊತೆ ಕೈಕುಲುಕುವ ತವಕ. ಕೆಲವರಿಗೆ ಅವಕಾಶ ಸಿಕ್ಕರೆ ಉಳಿದವರಿಗೆ ಸಿಗಲಿಲ್ಲ. ಕಚೇರಿಯೊಳಗಿದ್ದ ಕೆಲ ಹಿರಿಯ ನಾಯಕರ ಪಾದಮುಟ್ಟಿ ಆಶೀರ್ವಾದ ಪಡೆಯುವ ಕೆಲಸವನ್ನೂ ಸಂಯುಕ್ತಾ ಮಾಡಿದರು.

ಬಾಗಲಕೋಟೆ: ಪವಾಡಸದೃಶವಾಗಿ ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿರುವ ಸಚಿವ ಶಿವಾನಂದ ಪಾಟೀಲ್ (Shivanand Patil) ಪುತ್ರಿ ಸಂಯುಕ್ತಾ ಪಾಟೀಲ್ ಗೆ (Samyukta Patil) ಮೇಲ್ನೋಟಕ್ಕೆ ಕಾರ್ಯಕರ್ತರ ಬೆಂಬಲ ವ್ಯಕ್ತವಾಗುತ್ತಿರುವಂತೆ ಕಾಣುತ್ತಿದೆ. ಇಂದು ಬಾಗಲಕೋಟಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಅವರು ಪಾಲ್ಗೊಳ್ಳಲು ಆಗಮಿಸಿದಾಗ ಯುವ, ಮಹಿಳೆ ಮತ್ತು ಹಿರಿಯ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಾಜರಿದ್ದು ಅವರನ್ನು ಸ್ವಾಗತಿಸಿದರು. ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ್ ಗೆ (Veena Kashappanavar) ಟಿಕೆಟ್ ಮಿಸ್ ಆಗಿದ್ದಕ್ಕೆ ಕಾರ್ಯಕರ್ತರಲ್ಲಿ ತೀವ್ರ ಸ್ವರೂಪದ ಅಸಮಾಧಾನವಿದೆ ಎಂದು ಹೇಳಲಾಗುತಿತ್ತು. ಆದರೆ ಸಂಯುಕ್ತಾ ಸ್ವಾಗತಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರು ಅಗಮಿಸಿದ್ದು ಬೇರೆ ಕತೆಯನ್ನು ಹೇಳುತ್ತದೆ. ಮಹಿಳೆಯರಿಗೆ ಅಕ್ಕ, ಆಂಟಿ ಅಂತ ಮಾತಾಡಿದ ಸಂಯುಕ್ತಾ, ಅವರನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದರು. ಯುವ ಕಾರ್ಯಕರ್ತರಿಗೆ ತಮ್ಮ ಹೊಸ ನಾಯಕಿ ಜೊತೆ ಕೈಕುಲುಕುವ ತವಕ. ಕೆಲವರಿಗೆ ಅವಕಾಶ ಸಿಕ್ಕರೆ ಉಳಿದವರಿಗೆ ಸಿಗಲಿಲ್ಲ. ಕಚೇರಿಯೊಳಗಿದ್ದ ಕೆಲ ಹಿರಿಯ ನಾಯಕರ ಪಾದಮುಟ್ಟಿ ಆಶೀರ್ವಾದ ಪಡೆಯುವ ಕೆಲಸವನ್ನೂ ಸಂಯುಕ್ತಾ ಮಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಟಿಕೆಟ್ ಸಿಗದಿದ್ದರೆ ವೀಣಾ ಕಾಶಪ್ಪನವರ್ ಬಂಡಾಯವೇಳಲಿದ್ದಾರೆಯೇ? ಅವರ ಮಾತುಗಳಲ್ಲಿ ಸುಳಿವನ್ನು ಗುರುತಿಸಬಹುದು!