ಕಾಂಗ್ರೆಸ್ ನನ್ನನ್ನು ಬೇರೆ ಕ್ಷೇತ್ರಕ್ಕೆ ಆಹ್ವಾನಿಸುತ್ತಿರುವುದು ಹಾಸ್ಯಾಸ್ಪದ, ನಾನು ಮಂಡ್ಯ ಬಿಡಲ್ಲ, ಮಂಡ್ಯ ನನ್ನ ಬಿಡಲ್ಲ: ಸುಮಲತಾ ಅಂಬರೀಷ್
2019 ರಲ್ಲಿ ಘಟಾನುಘಟಿ ನಾಯಕರೆಲ್ಲ ಸೇರಿ ನನ್ನ ವಿರುದ್ಧ ಪ್ರಚಾರ ಮಾಡಿದರೂ ಮಂಡ್ಯದ ಜನತೆ ನನ್ನ ಕೈ ಬಿಡಲಿಲ್ಲ, ಅವರ ಋಣ ನನ್ನ ಮೇಲೆ ನಿರಂತರವಾಗಿ ಇರಲಿದೆ ಎಂದು ಸುಮಲತಾ ಹೇಳಿದರು.
Mandya: ಬದುಕು ನಡೆಸಲು ನನಗೆ ರಾಜಕೀಯಕ್ಕೆ ಬರುವ ಅವಶ್ಯಕತೆಯಿರಲಿಲ್ಲ, ಆದರೆ ನನಗೆ ಮಂಡ್ಯ ಮತ್ತು ಮಂಡ್ಯದ (Mandya) ಜನರು ನನಗೆ ಬೇಕಾಗಿತ್ತು ಹಾಗಾಗಿ ನಾನು ರಾಜಕಾರಣಕ್ಕೆ ಬಂದೆ ಎಂದು ಮಂಡ್ಯದ ಲೋಕಸಭೆ ಸದಸ್ಯೆ ಸುಮಲತಾ ಅಬರೀಷ್ (Sumalatha Ambareesh) ಅವರು ಮಂಡ್ಯದಲ್ಲಿ ಮಂಗಳವಾರ ಸ್ಪಷ್ಟಪಡಿಸಿದರು. 2019ರಲ್ಲಿ ತನಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡದ ಕಾಂಗ್ರೆಸ್ ಈಗ ಬೆಂಗಳೂರು ದಕ್ಷಿಣ (Bengaluru South) ಕ್ಷೇತ್ರದಿಂದ ಸ್ಫರ್ಧಿಸಿ ಅಂತ ಆಹ್ವಾನಿಸುತ್ತಿರುವುದು ಹಾಸಾಸ್ಪದ ಎಂದ ಅವರು ನಾನು ಮಂಡ್ಯವನ್ನು ಬಿಡಲ್ಲ ಮತ್ತು ಮಂಡ್ಯ ನನ್ನನ್ನು ಬಿಡಲ್ಲ ಎಂದರು. 2019 ರಲ್ಲಿ ಘಟಾನುಘಟಿ ನಾಯಕರೆಲ್ಲ ಸೇರಿ ನನ್ನ ವಿರುದ್ಧ ಪ್ರಚಾರ ಮಾಡಿದರೂ ಮಂಡ್ಯದ ಜನತೆ ನನ್ನ ಕೈ ಬಿಡಲಿಲ್ಲ, ಅವರ ಋಣ ನನ್ನ ಮೇಲೆ ನಿರಂತರವಾಗಿ ಇರಲಿದೆ ಎಂದು ಸುಮಲತಾ ಹೇಳಿದರು.
ಇದನ್ನೂ ಓದಿ: Viral Video: ಏಳುಸುತ್ತಿನ ಕೋಟೆಯಲ್ಲಿ ಕಲ್ಲಿನ ಗೋಡೆ ಏರಿದ ಐಪಿಎಸ್ ಅಧಿಕಾರಿ! ವಿಡಿಯೋ ಇಲ್ಲಿದೆ ನೋಡಿ
Latest Videos