ಸೆಕ್ಷನ್ 144 ಜಾರಿಯಲ್ಲಿದ್ದರೂ ಹರ್ಷನ ಮೃತದೇಹ ಮೆರವಣಿಗೆ ಅನುಮತಿ ಯಾಕೆ ನೀಡಲಾಯಿತು? ಸಿದ್ದರಾಮಯ್ಯ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 22, 2022 | 9:47 PM

ಹರ್ಷನ ಕೊಲೆ ಶಿವಮೊಗ್ಗನಲ್ಲಿ ನಡೆದಿರುವುದರಿಂದ ಜ್ಞಾನೇಂದ್ರ ಮತ್ತು ಈಶ್ವರಪ್ಪ ಇದಕ್ಕೆ ಹೊಣೆಗಾರರಾಗುತ್ತಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಶಿವಮೊಗ್ಗನಲ್ಲಿ ಕಳೆದ ಮೂರು ದಿನಗಳಲ್ಲಿ ಮೂರು ಕೊಲೆಗಳಾಗಿವೆ ಎಂದು ಸಿದ್ದರಾಮಯ್ಯ ಹೇಳಿದರು.

ಮಂಗಳವಾರ ಬೆಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಆಡಳಿತರೂಢ ಬಿಜೆಪಿ ಸರ್ಕಾರವನ್ನು (BJP government) ಇಕ್ಕಟ್ಟಿಗೆ ಸಿಲುಕಿಸುವ ಕೆಲವು ಪ್ರಶ್ನೆಗಳನ್ನು ಕೇಳಿದರು. ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ (BS Yediyurappa), ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಬೇರೆ ಕೆಲ ನಾಯಕರನ್ನು ಸಿದ್ದರಾಮಯ್ಯ ಟಾರ್ಗೆಟ್ ಮಾಡಿದರು. ಯಾಕೆಂದರೆ ಮೂವರು ನಾಯಕರು ಶಿವಮೊಗ್ಗ ಜಿಲ್ಲೆಯವರು. ಅವರು ಎತ್ತಿದ ಮೂಲ ಪ್ರಶ್ನೆಯನ್ನು ಗಮನಿಸಿ. ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಕೊಲೆಯಾಗಿದ್ದು ರವಿವಾರ ರಾತ್ರಿ. ಅಪರಾಧ ನಡೆದ ಅರ್ಧ ಗಂಟೆಯೊಳಗೆ ಶಿವಮೊಗ್ಗನಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿತ್ತು. ಆದರೆ ಮರುದಿನ ಹರ್ಷನ ಮೃತದೇಹದ ಮೆರವಣಿಗೆ ನಡೆಸಲು ಪೊಲೀಸರು ಅನುಮತಿ ನೀಡುತ್ತಾರೆ. ಪೊಲೀಸರಿಗೆ ಯಾರು ಸೂಚನೆ ನೀಡಿದ್ದು? ಈ ಮೆರವಣಿಗೆಯಲ್ಲಿ ಈಶ್ವರಪ್ಪ ಮತ್ತು ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಪಾಲ್ಗೊಳ್ಳುತ್ತಾರೆ. ಇದರ ಅರ್ಥವೇನು? ಎಂದು ಸಿದ್ದರಾಮಯ್ಯ ಕೇಳಿದರು.

ಹರ್ಷನ ಕೊಲೆ ಶಿವಮೊಗ್ಗನಲ್ಲಿ ನಡೆದಿರುವುದರಿಂದ ಜ್ಞಾನೇಂದ್ರ ಮತ್ತು ಈಶ್ವರಪ್ಪ ಇದಕ್ಕೆ ಹೊಣೆಗಾರರಾಗುತ್ತಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಶಿವಮೊಗ್ಗನಲ್ಲಿ ಕಳೆದ ಮೂರು ದಿನಗಳಲ್ಲಿ ಮೂರು ಕೊಲೆಗಳಾಗಿವೆ ಎಂದು ಸಿದ್ದರಾಮಯ್ಯ ಹೇಳಿದರು.

ಹರ್ಷನ ಕೊಲೆಯನ್ನು ತಾನು ಖಂಡಿಸಿದ್ದೇನೆ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಅಂತ ನಾನು ಹೇಳಿದ್ದೇನೆ. ಗೃಹ ಸಚಿವರು ಮತ್ತು ಗ್ರಾಮೀಣಾಭಿವೃದ್ಧಿ ಸಚಿವರ ತವರು ಜಿಲ್ಲೆಯಲ್ಲಿ ಇಂಥ ಸ್ಥಿತಿ ತಲೆದೋರಿರುವುದು ಶೋಚನೀಯ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ:   Shivamogga Violence: ಹರ್ಷ ಹತ್ಯೆ ಪ್ರಕರಣ, ಮುಸ್ಲಿಂ ಗೂಂಡಾಗಿರಿಯಿಂದ ಶಿವಮೊಗ್ಗದಲ್ಲಿ ಗಲಭೆ ಆಗಿದೆ: ಸಚಿವ ಅಶೋಕ್