ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ

Updated By: Ganapathi Sharma

Updated on: Apr 28, 2025 | 1:55 PM

ಪಹಲ್ಗಾಮ್ ಭಯೋತ್ಪಾದಕ ದಾಳಿ ವೇಳೆ ಉಗ್ರರು ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ ಎಂದು ಘಟನೆಯಲ್ಲಿ ಮೃತಪಟ್ಟ ಮಂಜುನಾಥ್ ಅವರ ಪತ್ನಿ ಪಲ್ಲವಿ ತಿಳಿಸಿದ್ದಾರೆ. ಟಿವಿ9 ಜತೆ ಮಾತನಾಡಿದ ಅವರು, ಘಟನೆ ಸಂಬಂಧ ಮಾಹಿತಿ ಸಂಗ್ರಹಿಸಲು ಎನ್​ಐಎ ಅಧಿಕಾರಿಗಳು ಬರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿವಮೊಗ್ಗ, ಏಪ್ರಿಲ್ 28: ಪತಿಯ ಮೇಲೆ ದಾಳಿ ಮಾಡುವ ಮುನ್ನ ಉಗ್ರರು ನಮ್ಮ ಬಳಿ ಧರ್ಮ ಕೇಳಿಲ್ಲ. ಹಾಗೆಂದು ಅಲ್ಲಿದ್ದ ಇತರ ಕೆಲವರ ಮೇಲೆ ಹಿಂದೂಗಳೇ ಎಂದು ಪರಿಶೀಲಿಸಿ ದಾಳಿ ಮಾಡಿದ್ದು ನಿಜ ಎಂದು ಶಿವಮೊಗ್ಗದ ಮಂಜುನಾಥ್ (ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರು) ಪತ್ನಿ ಪಲ್ಲವಿ ಹೇಳಿದರು. ಉಗ್ರರು ದಾಳಿ ಮಾಡುವಾಗ ಧರ್ಮ ಕೇಳುತ್ತಾ ಕೂತಿರಲ್ಲ ಎಂಬ ಸಚಿವ ಆರ್​ಬಿ ತಿಮ್ಮಾಪುರ ಹೇಳಿಕೆ ಹಿನ್ನೆಲೆಯೆಲ್ಲಿ ಅವರ ಬಳಿ ಮಾಧ್ಯಮದವರು ಪ್ರಶ್ನೆ ಕೇಳಿದರು. ಅದಕ್ಕೆ ಅವರು ಮೇಲಿನಂತೆ ಉತ್ತರಿಸಿದ್ದಾರೆ. ನೆಗೆಟಿವ್ ಕಮೆಂಟ್​ಗಳು ಬರುತ್ತಿವೆ. ಏನೂ ಮಾಡಲಾಗದು. ಇನ್ನೇನೂ ಕೇಳಬೇಡಿ ಎಂದು ಅವರು ಹೇಳಿದರು. ಎನ್​ಐಎ ಅಧಿಕಾರಿಗಳು ಬರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಅವರು ಏನು ಕೇಳುತ್ತಾರೋ ಅದಕ್ಕೆ ಉತ್ತರಿಸುತ್ತೇನೆ ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ