‘ಜಾಕಿ’ ಸಿನಿಮಾದಿಂದ ರವಿವರ್ಮಾ, ಡಿಫರೆಂಟ್​ ಡ್ಯಾನಿ ನಡುವೆ ಕಿರಿಕ್​ ಶುರುವಾಗಿದ್ದು ಹೇಗೆ?

|

Updated on: Mar 13, 2024 | 8:07 PM

ಪುನೀತ್​ ರಾಜ್​ಕುಮಾರ್​ ಅಭಿನಯದ ‘ಜಾಕಿ’ ಸಿನಿಮಾ 2010ರಲ್ಲಿ ತೆರೆಕಂಡಿತ್ತು. ಆ ಸಿನಿಮಾಗೆ ರವಿಮರ್ಮಾ ಮತ್ತು ಡಿಫರೆಂಟ್​ ಡ್ಯಾನಿ ಅವರು ಸಾಹಸ ನಿರ್ದೇಶನ ಮಾಡಿದ್ದರು. ಅವರಿಬ್ಬರ ನಡುವೆ ಜಗಳ ಶುರುವಾಗಿದೆ. ಈ ವಿವಾದವು ಕೊಲೆ ಬೆದರಿಕೆ ಹಾಕುವ ಮಟ್ಟಕ್ಕೆ ಬೆಳೆದಿದೆ. ಇದೆಲ್ಲ ಹೇಗೆ ಆರಂಭ ಆಯಿತು ಎಂಬುದನ್ನು ಡಿಫರೆಂಟ್​ ಡ್ಯಾನಿ ಅವರು ವಿವರಿಸಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ಸಾಹಸ ನಿರ್ದೇಶಕರಾದ ಡಿಫರೆಂಟ್​ ಡ್ಯಾನಿ ಹಾಗೂ ರವಿವರ್ಮಾ (Ravi Varma) ಅವರ ನಡುವೆ ಕಿರಿಕ್​ ಆರಂಭ ಆಗಿದೆ. ಪುನೀತ್​ ರಾಜ್​ಕುಮಾರ್​ ನಟನೆಯ ‘ಜಾಕಿ’ (Jackie Movie) ಸಿನಿಮಾದಲ್ಲಿನ ಒಂದು ಫೈಟ್​ಗೆ ಕ್ರೆಡಿಟ್​ ಪಡೆಯುವ ವಿಚಾರದಿಂದ ಆರಂಭವಾದ ಜಗಳ ನಂತರ ಕೊಲೆ ಬೆದರಿಕೆ ಹಾಕುವ ಮಟ್ಟಕ್ಕೂ ಹೋಗಿದೆ. ಅಷ್ಟಕ್ಕೂ ಈ ಎಲ್ಲ ಕಿರಿಕ್ ಹುಟ್ಟಿಕೊಂಡಿದ್ದಕ್ಕೆ ಅಸಲಿ ಕಾರಣ ಏನು ಎಂಬುದನ್ನು ಡಿಫರೆಂಟ್​ ಡ್ಯಾನಿ (Different Danny) ವಿವರಿಸಿದ್ದಾರೆ. ‘ಜಾಕಿ ಸಿನಿಮಾದ ಫೈರ್​ ಫೈಟ್​ ಮಾಡಿದ್ದು ನಾನು. ಆಗ ಅದನ್ನು ತಾನೇ ಮಾಡಿದ್ದು ಅಂತ ರವಿವರ್ಮಾ ಹೇಳಿಕೊಂಡ. ನನಗೆ ಆ ವಿಷಯ ಗೊತ್ತಾಯಿತು. ಕಾರಣಾಂತರಗಳಿಂದ ಇದುವರೆಗೆ ನಾನು ಆ ಬಗ್ಗೆ ಹೆಚ್ಚು ಮಾತನಾಡಿಲ್ಲ. ಈಗ ಜಾಕಿ ಸಿನಿಮಾ ಮತ್ತೆ ರಿಲೀಸ್​ ಆಗುತ್ತಿರುವ ಹಿನ್ನೆಲೆಯಲ್ಲಿ ರವಿವರ್ಮಾ ಕೆಲವು ಮಾಧ್ಯಮಕ್ಕೆ ಸಂದರ್ಶನ ನೀಡಿದ್ದಾನೆ. ನನ್ನ ಫೈಟ್​ನ ಹೀಯಾಳಿಸುವ ರೀತಿ ಮಾತನಾಡಿದ್ದಾನೆ. ಅದರಿಂದ ನನಗೆ ಕೋಪ ಬಂತು. ಆ ವಿಚಾರ ನಾನು ಮಾತನಾಡಿದೆ. ಬಳಿಕ ಅವನು ಡ್ರಿಂಕ್ಸ್​ ಮಾಡಿ ನನಗೆ ಫೋನ್​ ಮಾಡಿದ. ನಾನು ಬ್ಯುಸಿ ಇದ್ದೆ. ನನಗೆ ಕೊಲೆ ಬೆದರಿಕೆ ಹಾಕಿದ್ದಾನೆ’ ಎಂದು ಡಿಫರೆಂಟ್​ ಡ್ಯಾನಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.