ಅಭಯರಾಣ್ಯದ ಏಕತಾನತೆಯಿಂದ ಬೇಸತ್ತ ಸಲಗವೊಂದು ನುಗ್ಗಿದ್ದೆಲ್ಲಿ ಗೊತ್ತಾ? ವಿಡಿಯೋ ನೋಡಿ
ಸಲಗ ಪಾರ್ಕ್ನಲ್ಲಿ ಆಡುತ್ತಾ ಎಂಜಾಯ್ ಮಾಡುತ್ತಿರುವುದನ್ನು ನೋಡುತ್ತಿದ್ದರೆ ಮನಸ್ಸು ಮುದಗೊಳ್ಳುತ್ತದೆ, ನೀವೂ ಆನಂದಿಸಿ.
ಅಸ್ಸಾಂ ರಾಜಧಾನಿ ಗುವಾಹಟಿಯ ಅಮ್ಚಂಗ್ ವನ್ಯಜೀವಿ ಅಭಯಾರಣ್ಯದಿಂದ (Amchang wildlife Sanctuary) ತಪ್ಪಿಸಿಕೊಂಡು ನಗರದ ನಾರಂಗಿ ಆರ್ಮಿ ಕ್ಯಾಂಟ್ (Narangi Army Cantt) ಪ್ರದೇಶದಲ್ಲಿರುವ ಮಕ್ಕಳ ಪಾರ್ಕ್ ನುಗ್ಗಿರುವ ಈ ಒಂಟಿ ಸಲಗಕ್ಕೆ (tusker) ಬಾಲ್ಯದಲ್ಲಿ ಅದರ ತಂದೆತಾಯಿಗಳು ಪಾರ್ಕ್ಗೆ ಕರೆದೊಯ್ದಿಲ್ಲ ಅನಿಸುತ್ತೆ ಮರಾಯ್ರೇ. ಹಾಗಾಗೇ ಅಭಯಾರಣ್ಯದಿಂದ ತಪ್ಪಿಸಿಕೊಂಡು ಇದು ಪಾರ್ಕ್ ಪ್ರವೇಶಿಸಿದೆ. ಅದು ಪಾರ್ಕಲ್ಲಿ ಆಡುತ್ತಾ ಎಂಜಾಯ್ ಮಾಡುತ್ತಿರುವುದನ್ನು ನೋಡುತ್ತಿದ್ದರೆ ಮನಸ್ಸು ಮುದಗೊಳ್ಳುತ್ತದೆ, ನೀವೂ ಆನಂದಿಸಿ. ಅಂದಹಾಗೆ, ಈ ವಿಡಿಯೋ ವೈರಲ್ ಆಗಿದೆ.