ಕಾಂಗ್ರೆಸ್ ಅಧ್ಯಕ್ಷನ ಸ್ಥಾನಕ್ಕೆ ಸ್ಪರ್ಧೆ, ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ತಮ್ಮ ಚಲಾಯಿಸಿದರು ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ ಅವರು ಮತದಾನ ಮಾಡುವಾಗ ಕಾಂಗ್ರೆಸ್ ನಾಯಕರು ಮತ್ತು ಮಾಧ್ಯಮದವರು ಅವರನ್ನು ಸುತ್ತುವರಿದಿದ್ದು ಸೋಜಿಗ ಹುಟ್ಟಿಸಿತು.
ಬೆಂಗಳೂರು: ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ಮಲಯಾಳೀ ಶಶಿ ತರೂರ್ (Shashi Tharoor)-ಯಾರು ಹಿತವರು ನಮಗೆ ಈ ಇಬ್ಬರೊಳಗೆ ಅಂತ ಕಾಂಗ್ರೆಸ್ ಪಕ್ಷದ ನಾಯಕರು ಇಂದು ನಿರ್ಧರಿಸಲಿದ್ದಾರೆ. ಬೆಂಗಳೂರಿನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (KPCC) ಕಚೇರಿಯಲ್ಲಿ ಸೋಮವಾರ ಮತದಾನ ನಡೆದಾಗ ಅಭ್ಯರ್ಥಿ ಮತ್ತು ಗೆಲ್ಲುವ ನೆಚ್ಚಿನ ಸ್ಪರ್ಧಿ ಅನಿಸಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಮತ ಚಲಾಯಿಸಿದರು. ಖರ್ಗೆ ಮತದಾನ ಮಾಡುವಾಗ ಕಾಂಗ್ರೆಸ್ ನಾಯಕರು ಮತ್ತು ಮಾಧ್ಯಮದವರು ಅವರನ್ನು ಸುತ್ತುವರಿದಿದ್ದು ಸೋಜಿಗ ಹುಟ್ಟಿಸಿತು.
Latest Videos