ಅಭಯರಾಣ್ಯದ ಏಕತಾನತೆಯಿಂದ ಬೇಸತ್ತ ಸಲಗವೊಂದು ನುಗ್ಗಿದ್ದೆಲ್ಲಿ ಗೊತ್ತಾ? ವಿಡಿಯೋ ನೋಡಿ

ಅಭಯರಾಣ್ಯದ ಏಕತಾನತೆಯಿಂದ ಬೇಸತ್ತ ಸಲಗವೊಂದು ನುಗ್ಗಿದ್ದೆಲ್ಲಿ ಗೊತ್ತಾ? ವಿಡಿಯೋ ನೋಡಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 17, 2022 | 11:13 AM

ಸಲಗ ಪಾರ್ಕ್​ನಲ್ಲಿ ಆಡುತ್ತಾ ಎಂಜಾಯ್ ಮಾಡುತ್ತಿರುವುದನ್ನು ನೋಡುತ್ತಿದ್ದರೆ ಮನಸ್ಸು ಮುದಗೊಳ್ಳುತ್ತದೆ, ನೀವೂ ಆನಂದಿಸಿ.

ಅಸ್ಸಾಂ ರಾಜಧಾನಿ ಗುವಾಹಟಿಯ ಅಮ್ಚಂಗ್ ವನ್ಯಜೀವಿ ಅಭಯಾರಣ್ಯದಿಂದ (Amchang wildlife Sanctuary) ತಪ್ಪಿಸಿಕೊಂಡು ನಗರದ ನಾರಂಗಿ ಆರ್ಮಿ ಕ್ಯಾಂಟ್ (Narangi Army Cantt) ಪ್ರದೇಶದಲ್ಲಿರುವ ಮಕ್ಕಳ ಪಾರ್ಕ್ ನುಗ್ಗಿರುವ ಈ ಒಂಟಿ ಸಲಗಕ್ಕೆ (tusker) ಬಾಲ್ಯದಲ್ಲಿ ಅದರ ತಂದೆತಾಯಿಗಳು ಪಾರ್ಕ್​ಗೆ ಕರೆದೊಯ್ದಿಲ್ಲ ಅನಿಸುತ್ತೆ ಮರಾಯ್ರೇ. ಹಾಗಾಗೇ ಅಭಯಾರಣ್ಯದಿಂದ ತಪ್ಪಿಸಿಕೊಂಡು ಇದು ಪಾರ್ಕ್ ಪ್ರವೇಶಿಸಿದೆ. ಅದು ಪಾರ್ಕಲ್ಲಿ ಆಡುತ್ತಾ ಎಂಜಾಯ್ ಮಾಡುತ್ತಿರುವುದನ್ನು ನೋಡುತ್ತಿದ್ದರೆ ಮನಸ್ಸು ಮುದಗೊಳ್ಳುತ್ತದೆ, ನೀವೂ ಆನಂದಿಸಿ. ಅಂದಹಾಗೆ, ಈ ವಿಡಿಯೋ ವೈರಲ್ ಆಗಿದೆ.