ಜಗದೀಶ್ ಶೆಟ್ಟರ್ ಮತ್ತು ನನ್ನ ನಡುವೆ ವ್ಯತ್ಯಾಸವಿದೆ, ನಾನು ಬಿಜೆಪಿಯಲ್ಲೇ ಇದ್ದೇನೆ: ಎಸ್ ಟಿ ಸೋಮಶೇಖರ್
ವಿಧಾನಸಭಾ ಚುನಾವಣೆಯಲ್ಲಿ ಆಗಿದ್ದೇನು? ಯಶವಂತಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿದ್ದವು, ಆದರೆ ಅದು ಮತದಾರರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಎಂದು ಹೇಳಿದ ಸೋಮಶೇಖರ್ ಲೋಕಸಭಾ ಚುನಾವಣೆ ಇನ್ನೂ ಸಮಯವಿದೆ, ಮೊದಲು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ, ಜನ ಅದರ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಎಂದರು.
ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸಭೆ (BJP Executive Committee Meet) ನಡೆಯುತ್ತಿದ್ದರೆ ಪಕ್ಷದ ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ (ST Somashekhar) ನಗರದ ಬೇರೆ ಯಾವುದೋ ಭಾಗದಲ್ಲಿದ್ದರು. ಏನ್ಸಾರ್ ನೀವಿಲ್ಲಿ, ಉಳಿದವರೆಲ್ಲ ಅಲ್ಲಿ ಅಂತ ಮಾಧ್ಯಮ ಪ್ರತಿನಿಧಿಗಳು ಕೇಳಿದ್ದಕ್ಕೆ, ಕಾರ್ಯಕಾರಿಣಿ ಸಮಿತಿ ಸಭೆಗೆ ತನಗೆ ಆಹ್ವಾನ ಇಲ್ಲ ಎಂದು ಹೇಳಿದರು. ಮಾಧ್ಯಮದವರು ಜಗದೀಶ್ ಶೆಟ್ಟರ್ (Jagadish Shettar) ಅವರ ಬಗ್ಗೆ ಪ್ರಶ್ನೆ ಕೇಳಿದಾಗ ಶಾಸಕ ಸೋಮಶೇಖರ್, ತನ್ನ ಮತ್ತು ಅವರ ನಡುವೆ ವ್ಯತ್ಯಾಸವಿದೆ, ಶೆಟ್ಟರ್ ತನಗೆ ಅನ್ಯಾಯವಾಗಿದೆ ಅಂತ ಕಾಂಗ್ರೆಸ್ ಗೆ ಹೋಗಿದ್ದರು, ಪಕ್ಷಅವರನ್ನು ಗೌರವಿಸಿ ಎಮ್ ಎಲ್ ಸಿ ಮಾಡಲಾಗಿತ್ತು, ಅದರೆ ಈಗ ಪುನಃ ಬಿಜೆಪಿಗೆ ವಾಪಸ್ಸು ಬಂದಿದ್ದಾರೆ, ಆದರೆ ತಾನಿನ್ನೂ ಬಿಜೆಪಿಯಲ್ಲಿರುವುದಾಗಿ ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್ ಒಂದಾಗಿರುವುದರಿಂದ ಕಾರ್ಯಕರ್ತರ ನಡುವೆ ಗೊಂದಲವಿದೆ ಅಂತ ಹೇಳಿದಾಗ ಯಾರು ಯಾರೊಂದಿಗೆ ಮಾಡಿಕೊಂಡರೂ ಚುನಾವಣೆಯಲ್ಲಿ ಮತದಾರನ ತೀರ್ಮಾನವೇ ಲೆಕ್ಕಕ್ಕೆ ಬರೋದು, ವಿಧಾನಸಭಾ ಚುನಾವಣೆಯಲ್ಲಿ ಆಗಿದ್ದೇನು? ಯಶವಂತಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿದ್ದವು, ಆದರೆ ಅದು ಮತದಾರರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಎಂದು ಹೇಳಿದ ಸೋಮಶೇಖರ್ ಲೋಕಸಭಾ ಚುನಾವಣೆ ಇನ್ನೂ ಸಮಯವಿದೆ, ಮೊದಲು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ, ಜನ ಅದರ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ