ಲಿಂಗಾಯತ ಸಮುದಾಯ ಶೆಟ್ಟರ್ 2013ರಲ್ಲಿ ಸಿಎಂ ಆಗಿದ್ರೂ ಬಿಜೆಪಿ ಅಧಿಕಾರ ಉಳಿಸಿಕೊಂಡಿತೇ? ಸಿದ್ದರಾಮಯ್ಯ, ಸಿಎಂ
2013ರ ವಿಧಾನ ಸಭಾ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದವರೆಲ್ಲ ಬಿಜೆಪಿಗೆ ವೋಟು ಹಾಕಿದ್ದರೆ ಅದೇ ಪಕ್ಷ ಆಧಿಕಾರಕ್ಕೆ ಬರಬೇಕಿತ್ತಲ್ಲ, ಕಾಂಗ್ರೆಸ್ ಗೆದ್ದಿದ್ದು ಯಾಕೆ? ಅಂತ ಸಿಎಂ ಪ್ರಶ್ನಿಸಿದರು. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದರಿಂದ ಕಾಂಗ್ರೆಸ್ ಅವಕಾಶಗಳ ಮೇಲೆ ಯಾವುದೇ ಪ್ರಭಾವ ಬೀರದು ಅಂತ ಹೇಳಲು ಮುಖ್ಯಮಂತ್ರಿ ದಶಕದ ಹಿಂದಿನ ಇತಿಹಾಸ ಉಲ್ಲೇಖಿಸಿದರು!
ಕೋಲಾರ: ಇಂದು ಕೋಲಾರ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (CM Siddaramaiah) ಲಿಂಗಾಯತ ಸಮುದಾಯದ ನಾಯಕ ಮತ್ತು ಬಿಎಸ್ ಯಡಿಯೂರಪ್ಪನವರ (BS Yediyurappa) ಮಗ ಬಿವೈ ವಿಜಯೇಂದ್ರ (BY Vijayendra) ಅವರನ್ನು ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ಮಾಡಿದ್ದಕ್ಕೆ ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರದರ್ಶನದ ಮೇಲೆ ಪ್ರಭಾವ ಬೀರಲಿದೆಯೇ ಅಂತ ಕೇಳಿದಾಗ ಸಿಡಿಮಿಡಿಗೊಂಡರು. 2013 ರಲ್ಲಿ ರಾಜ್ಯದ ಮುಖ್ಯಮಂತ್ರಿ ಯಾರಾಗಿದ್ದರು ಅಂತ ಅವರು ಕೇಳಿದ ಪ್ರಶ್ನೆಯಿಂದ ತಬ್ಬಿಬ್ಬಾದ ಪತ್ರಕರ್ತರು, ನೀವೇ ಆಗಿದ್ರಲ್ಲ ಸರ್ ಅಂತ ಹೇಳಿದಾಗ 2013ರ ವಿಧಾನ ಸಭೆ ಚುನಾವಣೆ ನಡೆಯುವ ಮೊದಲು ಜಗದೀಶ್ ಶೆಟ್ಟರ್ (Jagadish Shettar) ರಾಜ್ಯದ ಮುಖ್ಯಮಂತ್ರಿಯಾಗಿದ್ದರು ಮತ್ತು ಅವರು ಲಿಂಗಾಯತ ಸಮುದಾಯದವರು. ಚುನಾವಣೆಯಲ್ಲಿ ಲಿಂಗಾಯತ ಸಮುದಾಯದವರೆಲ್ಲ ಬಿಜೆಪಿಗೆ ವೋಟು ಹಾಕಿದ್ದರೆ ಅದೇ ಪಕ್ಷ ಆಧಿಕಾರಕ್ಕೆ ಬರಬೇಕಿತ್ತಲ್ಲ, ಕಾಂಗ್ರೆಸ್ ಗೆದ್ದಿದ್ದು ಯಾಕೆ? ಅಂತ ಪ್ರಶ್ನಿಸಿದರು. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದರಿಂದ ಕಾಂಗ್ರೆಸ್ ಅವಕಾಶಗಳ ಮೇಲೆ ಯಾವುದೇ ಪ್ರಭಾವ ಬೀರದು ಅಂತ ಹೇಳಲು ಮುಖ್ಯಮಂತ್ರಿಯವರು ದಶಕದ ಹಿಂದಿನ ಇತಿಹಾಸ ಉಲ್ಲೇಖಿಸಿದರು!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ