‘ಬಿಗ್ ಬಾಸ್ನ ಎಕ್ಸ್ಪೋಸ್ ಮಾಡ್ತೀನಿ’; ದೊಡ್ಮನೆಯಲ್ಲಿದ್ದುಕೊಂಡೇ ಪಣ ತೊಟ್ಟ ಜಗದೀಶ್
‘ಬಿಗ್ ಬಾಸ್ ಕನ್ನಡ ಸೀಸನ್ 11’ ಮನೆಯಲ್ಲಿ ಎಲ್ಲರೂ ಏಕ ಕಾಲಕಕ್ಕೆ ಲಾಯರ್ ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದಕ್ಕೆ ಕಾರಣ ಆಗಿರೋದು ಅವರು ನಡೆದುಕೊಳ್ಳುತ್ತಿರುವ ರೀತಿ. ಅವರು ಬೇಕಂತಲೇ ಎಲ್ಲರನ್ನೂ ಕುಪಿತಗೊಳಿಸೋ ಕೆಲಸ ಮಾಡುತ್ತಿದ್ದಾರೆ. ಈಗ ಅವರು ‘ಬಿಗ್ ಬಾಸ್’ ತೊರೆಯೋ ನಿರ್ಧಾರ ತೆಗೆದುಕೊಂಡಿದ್ದಾರೆ.
‘ಬಿಗ್ ಬಾಸ್’ ಸ್ಕ್ರಿಪ್ಟೆಡ್ ಎನ್ನುವ ಮಾತಿದೆ. ಇದನ್ನು ಅನೇಕರು ಒಪ್ಪುತ್ತಾರೆ. ಈಗ ಬಿಗ್ ಬಾಸ್ನ ಎಕ್ಸ್ಪೋಸ್ ಮಾಡೋಕೆ ಲಾಯರ್ ಜಗದೀಶ್ ಮುಂದಾಗಿದ್ದಾರೆ. ‘ಬಿಗ್ ಬಾಸ್’ ಮನೆಯಲ್ಲಿದ್ದುಕೊಂಡೇ ಈ ಚಾಲೆಂಜ್ ಹಾಕಿದ್ದಾರೆ. ‘ಬಿಗ್ ಬಾಸ್ ನಾನು ನಿಮ್ಮನ್ನು ಎಕ್ಸ್ಪೋಸ್ ಮಾಡುತ್ತೇನೆ. ಕರ್ನಾಟಕದಲ್ಲಿ ನನ್ನನ್ನು ಎದುರಹಾಕಿಕೊಂಡು ಬಿಗ್ ಬಾಸ್ ನಡೆಸೋಕೆ ಆಗುತ್ತದೆ ಎಂದುಕೊಂಡಿದ್ದೀರಾ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಈ ಪ್ರೋಮೋ ವೈರಲ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Oct 03, 2024 08:13 AM