‘ತೋತಾಪುರಿ 2’ ಸಿನಿಮಾಕ್ಕೆ ದೊರಕುತ್ತಿರುವ ಪ್ರತಿಕ್ರಿಯೆ ಬಗ್ಗೆ ನಿರ್ಮಾಪಕರ ಮಾತು
Totapuri 2: ಕರ್ನಾಟಕ ಬಂದ್ ಹಿಂದಿನ ದಿನ 'ತೋತಾಪುರಿ 2' ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾಕ್ಕೆ ಸಿಗುತ್ತಿರುವ ಪ್ರೇಕ್ಷಕರ ಬೆಂಬಲದ ಬಗ್ಗೆ ನಿರ್ಮಾಪಕರು ಖುಷಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕಾವೇರಿ ಹೋರಾಟಕ್ಕೂ ಜೈ ಎಂದಿದ್ದಾರೆ.
ಜಗ್ಗೇಶ್ (Jaggesh), ಡಾಲಿ ಧನಂಜಯ್ (Daali Dhananjay) ಇನ್ನೂ ಹಲವು ಪ್ರಮುಖ ನಟರು ನಟಿಸಿರುವ ‘ತೋತಾಪುರಿ 2’ ಸಿನಿಮಾ ಇಂದು (ಸೆಪ್ಟೆಂಬರ್ 28) ಕ್ಕೆ ಬಿಡುಗಡೆ ಆಗಿದೆ. ಮೊದಲ ದಿನ ಸಿನಿಮಾ ನೋಡಿದ ಪ್ರೇಕ್ಷಕರ ಪ್ರತಿಕ್ರಿಯೆ ಬಗ್ಗೆ ನಿರ್ಮಾಪಕ ಕೆಎ ಸುರೇಶ್ ಖುಷಿ ವ್ಯಕ್ತಪಡಿಸಿದ್ದಾರೆ. ‘ತೋತಾಪುರಿ 2’ ಸಿನಿಮಾದಲ್ಲಿ ಹಾಸ್ಯವಿದೆ, ಭಾವುಕತೆ ಎಲ್ಲವೂ ಇದೆ ಎಲ್ಲವನ್ನೂ ಪ್ರೇಕ್ಷಕರು ಎಂಜಾಯ್ ಮಾಡುತ್ತಿದ್ದಾರೆ ಎಂದಿದ್ದಾರೆ. ಕಾವೇರಿಗಾಗಿ ನಾಳೆ (ಸೆಪ್ಟೆಂಬರ್ 29) ಬಂದ್ ನಡೆಯುತ್ತಿದ್ದು, ಚಿತ್ರಮಂದಿರಗಳು ಬಾಗಿಲು ಹಾಕಲಿವೆ. ಆದರೆ ಆ ಬಗ್ಗೆ ತಮಗೆ ಬೇಸರವಿಲ್ಲ ಎಂದಿದ್ದಾರೆ ಸುರೇಶ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ