ನಟರು ಬಂದು ಭಾಷಣ ಮಾಡಿದರೆ ಕಾವೇರಿ ಹರಿಸುವುದು ನಿಲ್ಲಿಸುತ್ತಾರಾ? ಜಗ್ಗೇಶ್ ಪ್ರಶ್ನೆ

ನಟರು ಬಂದು ಭಾಷಣ ಮಾಡಿದರೆ ಕಾವೇರಿ ಹರಿಸುವುದು ನಿಲ್ಲಿಸುತ್ತಾರಾ? ಜಗ್ಗೇಶ್ ಪ್ರಶ್ನೆ

ಮಂಜುನಾಥ ಸಿ.
|

Updated on: Sep 30, 2023 | 11:03 PM

Jaggesh: ಸಮಸ್ಯೆ ಬಂದಾಗ ನಟರನ್ನು ಕರೆಯುತ್ತೀರ, ಅವರು ಬರ್ತಾರೆ ಆದರೆ ಯಾವ ನಟರು ಬಂದಿಲ್ಲ ಅಂದರೆ ಅವರನ್ನು ದ್ರೋಹಿ, ಕೆಟ್ಟವನು ಎಂದೆಲ್ಲ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡುತ್ತಾರೆ. ಯಾರೋ ಒಬ್ಬ ನಟ ಬಂದು ಭಾಷಣ ಮಾಡಿದರೆ ಕಾವೇರಿ ಹರಿಸುವುದು ನಿಲ್ಲಿಸುತ್ತಾರಾ? ಎಂದು ಜಗ್ಗೇಶ್ ಪ್ರಶ್ನೆ ಮಾಡಿದ್ದಾರೆ.

ಕಾವೇರಿ (Cauvery) ವಿವಾದ ಎಂಬುದು ಒಂದೇ ದಿನದ ಸಮಸ್ಯೆ ಅಲ್ಲ, 1991 ರಿಂದಲೂ ನಡೆಯುತ್ತಿದೆ. ಮಳೆ ಬಾರದ ಪ್ರತಿವರ್ಷವೂ ಕಾವೇರಿ ಸಮಸ್ಯೆ ಬರುತ್ತದೆ. ಸಮಸ್ಯೆ ಬಂದಾಗ ನಟರನ್ನು ಕರೆಯುತ್ತೀರ, ಅವರು ಬರ್ತಾರೆ ಆದರೆ ಯಾವ ನಟರು ಬಂದಿಲ್ಲ ಅಂದರೆ ಅವರನ್ನು ದ್ರೋಹಿ, ಕೆಟ್ಟವನು ಎಂದೆಲ್ಲ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡುತ್ತಾರೆ. ಯಾರೋ ಒಬ್ಬ ನಟ ಬಂದು ಭಾಷಣ ಮಾಡಿದರೆ ಕಾವೇರಿ ಹರಿಸುವುದು ನಿಲ್ಲಿಸುತ್ತಾರಾ? ಅದೆಲ್ಲ ಕಾನೂನು ಸಮಸ್ಯೆ. ಅದನ್ನು ಹಾಗೆಯೇ ಸರಿ ಮಾಡಬೇಕು. ರಾಜ್ಯ ಸರ್ಕಾರ ತಪ್ಪು ಮಾಡಿದೆ. ಮೊದಲು ನೀರು ಬಿಟ್ಟು ಬಳಿಕ ಸರ್ವ ಪಕ್ಷ ಸಭೆ ಮಾಡಿದರು. ನೀವು ತಪ್ಪು ಮಾಡಿ, ಬಳಿಕ ಅದನ್ನು ಬೇರೆಯವರಿಗೆ ಒರೆಸುವ ಕಾರ್ಯ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ ಅದು ತಪ್ಪು ಎಂದರು ಜಗ್ಗೇಶ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ