Jaggesh: ಜಗ್ಗೇಶ್ ಪುತ್ರ ಗುರುರಾಜ್ ಹೇಳಲಿದ್ದಾರೆ ತಂದೆಗೆ ಆಕ್ಷನ್ ಕಟ್; ನವರಸ ನಾಯಕ ಹಂಚಿಕೊಂಡ್ರು ಅಚ್ಚರಿಯ ಮಾಹಿತಿ

| Updated By: shivaprasad.hs

Updated on: Sep 29, 2021 | 10:00 AM

Kaage Motte: ಗುರುರಾಜ್ ಜಗ್ಗೇಶ್ ನಾಯಕನಾಗಿ ಕಾಣಿಸಿಕೊಂಡಿರುವ ‘ಕಾಗೆ ಮೊಟ್ಟೆ’ ಚಿತ್ರದ ಸುದ್ದಿ ಗೋಷ್ಠಿಯಲ್ಲಿ ಜಗ್ಗೇಶ್ ಅಚ್ಚರಿಯ ಮಾಹಿತಿಯೊಂದನ್ನು ನೀಡಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ತಮ್ಮದೇ ಆದ ವಿಭಿನ್ನ ಶೈಲಿಯ ಚಿತ್ರಗಳಿಂದ ಹೆಸರು ಮಾಡಿದವರು ಜಗ್ಗೇಶ್. ಇತ್ತೀಚೆಗೆ ಅವರು ತಮ್ಮ ಪುತ್ರ ಗುರುರಾಜ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಕಾಗೆ ಮೊಟ್ಟೆ’ ಚಿತ್ರದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಇದೇ ವೇಳೆ ಅವರು ತಮ್ಮ ಮಗನ ಸಾಮರ್ಥ್ಯದ ಕುರಿತು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಗುರುರಾಜ್, ಜಗ್ಗೇಶ್​ಗೆ ಕತೆಯೊಂದನ್ನು ಹೇಳಿದ್ದಾರಂತೆ. ಅದು ಅದ್ಭುತವಾಗಿದೆ. ವಿಶ್ವದಲ್ಲೇ ಅತ್ಯತಂತ ಭಿನ್ನವಾದ ಕತೆ ಎಂದರೆ ಅತಿಶಯೋಕ್ತಿ ಅಲ್ಲ ಎಂದು ಜಗ್ಗೇಶ್ ಮಗನ ಯೋಚನಾ ಲಹರಿಗೆ, ಕತೆಗೆ ಶಹಬ್ಬಾಸ್​ ಗಿರಿ ನೀಡಿದ್ದಾರೆ.

ಗುರುರಾಜ್ ಅವರನ್ನು ಸ್ವತಂತ್ರವಾಗಿರಲು ಬಿಡಬೇಕಿತ್ತು, ಎಂದು ಜಗ್ಗೇಶ್ ಇದೇ ವೇಳೆ ಬೇಸರ ಹೊರಹಾಕಿದ್ದಾರೆ. ಪುತ್ರ ಗುರುರಾಜ್ ಪ್ರತಿಭೆಯ ಕುರಿತಂತೆ ಮಾತನಾಡಿದ ಜಗ್ಗೇಶ್, ಆತ ನನ್ನ ಮೊದಲ ಪ್ರೇಕ್ಷಕ. ಸಣ್ಣ ವಯಸ್ಸಿನಿಂದಲೂ ನನ್ನನ್ನು ನೋಡಿ ಬೆಳೆದಿದ್ದಾನೆ ಎಂದಿದ್ದಾರೆ. ಪುತ್ರನ ಸಿನಿ ಪಯಣದ ಕುರಿತು ಮಾತನಾಡಿರುವ ಜಗ್ಗೇಶ್, ಪುತ್ರನಿಗೆ ಪರ ಭಾಷೆಯಲ್ಲಿ ಹತ್ತಾರು ಅವಕಾಶಗಳು ಬಂದಾಗಲೂ, ಬೇಡ ಎಂದು ನಿರಾಕರಿಸಿದೆ. ಅದು ಈಗಲೂ ನನ್ನನ್ನು ಕಾಡುತ್ತಿದೆ. ಹಾರುವ ಪಕ್ಷಿಯಂತೆ, ಆತನಿಗೆ (ಗುರುರಾಜ್) ತಡೆಯೊಡ್ಡದೇ ಉಳಿದಿದ್ದರೆ, ಎಲ್ಲಿಗೋ ಹೋಗಿ ತಲುಪುತ್ತಿದ್ದ. ಈಗಲೂ ಅದು ಬಹಳ ಕಾಡುತ್ತದೆ. ನನ್ನ ಜೀವನದ ಅತೀ ದೊಡ್ಡ ತಪ್ಪದು ಎಂದು ಜಗ್ಗೇಶ್ ನುಡಿದಿದ್ದಾರೆ.

ಇದನ್ನೂ ಓದಿ:

Jaggesh: ನವರಸ ನಾಯಕನ ಜೀವನದಲ್ಲಿ ಅತೀ ದೊಡ್ಡ ನೋವೇನು?; ಜಗ್ಗೇಶ್ ಹೇಳಿದ ಸತ್ಯ!

Kaage Motte: ‘ನಮ್ಗೆಲ್ಲಾ ಯಾವ ಲವ್ ಸಿಗ್ತಿಲ್ವಲಾ..’ ಅಂತ ತಲೆ ಕೆಡಿಸ್ಕೊಂಡಿದ್ರಂತೆ ಜಗ್ಗೇಶ್; ಏನಿದು ಸಮಾಚಾರ?!

(Jaggesh will be feature in his son Gururaj directorial debut)

Published on: Sep 29, 2021 09:58 AM