ಜೈಲಿನ ನಿಯಮಗಳು ಎಲ್ಲಾ ಕೈದಿಗಳಿಗೆ ಸಮನಾಗಿರಬೇಕು: ಯದುವೀರ್ ಕೃಷ್ಣದತ್ ಒಡೆಯರ್, ಸಂಸದ

ಅರುಣ್​ ಕುಮಾರ್​ ಬೆಳ್ಳಿ

Updated on: Aug 27, 2024 | 4:28 PM

ಕೈದಿಗಳ ನಡುವೆ ತಾರತಮ್ಯ ನಡೆಯುತ್ತಿದ್ದರೆ, ಕೆಲವು ಅಯ್ದ ಕೈದಿಗಳಿಗೆ ಉಳಿದವರಿಗಿಂತ ಭಿನ್ನ ಟ್ರೀಟ್ಮೆಂಟ್ ಸಿಗುತ್ತಿದ್ದರೆ ಅದಕ್ಕೆ ರಾಜ್ಯದ ಗೃಹ ಸಚಿವರು ಉತ್ತರ ನೀಡಬೇಕಾಗುತ್ತದೆ, ಜೈಲಿನ ಶಿಸ್ತು ಮತ್ತು ಶಿಷ್ಟಾಚಾರಕ್ಕೆ ಎಲ್ಲ ಕೈದಿಗಳು ಬದ್ಧರಾಗಿರಬೇಕು ಎಂದು ಯದುವೀರ್ ಕೃಷ್ಣದತ್ ಒಡೆಯರ್ ಹೇಳಿದರು.

ಮೈಸೂರು: ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಕೊಲೆ ಅರೋಪಿ ಚಿತ್ರನಟ ದರ್ಶನ್​ಗೆ ವಿಶೇಷ ಆತಿಥ್ಯ ಸಿಗುತ್ತಿರೋದು ಸರಿಯಲ್ಲ, ಅರೋಪಿಗಳು ಮತ್ತು ಕೈದಿಗಳು ಯಾರೇ ಅಗಿರಲಿ, ಜೈಲಿನ ನಿಯಮಗಳು ಎಲ್ಲರಿಗೂ ಸಮಾನವಅಗಿರಬೇಕು, ಒಬ್ಬರ ಕಣ್ಣಿಗೆ ಬೆಣ್ಣೆ ಮತ್ತೊಬ್ಬರ ಕಣ್ಣಿಗೆ ಸುಣ್ಣದಂಥ ಸ್ಥಿತಿ ನಿರ್ಮಾಣವಾಗಬಾರದು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ ಒಡೆಯರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ದರ್ಶನ್​ರನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವ ಪರಿಸ್ಥಿತಿ ಇದ್ದರೆ ಖಂಡಿತ ಮಾಡ್ತೀವಿ: ಸಿದ್ದರಾಮಯ್ಯ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.