ಮೈಸೂರು: ಸಿದ್ದರಾಮಯ್ಯರನ್ನು ಕೆಟ್ಟ ಪದಗಳಿಂದ ಬೈದು ವಿಡಿಯೋ ಹರಿಬಿಟ್ಟಿರುವ ಜೇಲ್ ವಾಚರ್​ನನ್ನು ಬಂಧಿಸಲು ಆಗ್ರಹ

ಅರುಣ್​ ಕುಮಾರ್​ ಬೆಳ್ಳಿ

Updated on: May 06, 2025 | 6:07 PM

ಒಬ್ಬ ಸರ್ಕಾರೀ ನೌಕರನಾಗಿ ಮಧು ಕುಮಾರ್ ರಾಜ್ಯದ ಮುಖ್ಯಮಂತ್ರಿ ಮತ್ತು ಅವರ ಪತ್ನಿಯ ವಿರುದ್ಧ ಬಳಸಿರುವ ಭಾಷೆಯಿಂದ ಕಾಂಗ್ರೆಸ್ ಕಾರ್ಯಕರ್ತರು ವಿಪರೀತ ನೊಂದಿದ್ದಾರೆ ಮತ್ತು ಮಧು ಕುಮಾರ್ ರನ್ನು ಬಂಧಿಸಬೇಕೆಂದು ಅಗ್ರಹಿಸುತ್ತಿದ್ದಾರೆ. ನಾಳೆ ಜಿಲ್ಲಾಧ್ಯಕ್ಷ ಬಿಜೆ ವಿಜಯಕುಮಾರ್ ನೇತೃತ್ವದಲ್ಲಿ ನಗರ ಪೊಲೀಸ್ ಕಮೀಶನರ್ ಕಚೇರಿಯ ಮುಂದೆ ದೊಡ್ಡ ಪ್ರತಿಭಟನೆ ನಡೆಯಲಿದೆ ಎಂದು ಅವರು ಹೇಳಿದರು.

ಮೈಸೂರು, ಮೇ 6: ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ನೇತೃತ್ವದಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಇಂದು ನಗರದ ಕೇಂದ್ರ ಕಾರಾಗೃಹದ ಮುಂದೆ ಪ್ರತಿಭಟನೆ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತಾಡಿದ ಲಕ್ಷ್ಮಣ್ ಸೆಂಟ್ರಲ್ ಜೈಲಲ್ಲಿ ವಾಚರ್ ಆಗಿ ಕೆಲಸ ಮಾಡುವ ಮಧುಕುಮಾರ್ ಎನ್ನುವವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿಯ ವಿರುದ್ಧ ಕೆಟ್ಟ ಮತ್ತು ಅವಾಚ್ಯ ಪರಗಳನ್ನು ಬಳಸಿ ಬಯ್ಯತ್ತ ಸುಮಾರು ಐದೂವರೆ ನಿಮಿಷಗಳ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ, ಇದರಿಂದ ಕಾರ್ಯಕರ್ತರ ಮನಸ್ಸಿಗೆ ತುಂಬಾ ನೋವಾಗಿದೆ,. ಇವರ ವಿರುದ್ಧ ಉಗ್ರ ಕ್ರಮ ಜರುಗಿಸಬೇಕು ಎಂದು ಹೇಳಿದರು. ಜಿಲ್ಲಾ ಕಾಂಗ್ರೆಸ್ ದೂರು ದಾಖಲಿಸಿದ ಬಳಿಕ ಅವರನ್ನು ತಾತ್ಕಾಲಿಕ ಸಸ್ಪೆಂಡ್ ಮಾಡಲಾಗಿದೆ, ಅದರೆ ಅಷ್ಟು ಸಾಲದು, ಅವರನ್ನು ಬಂಧಿಸಬೇಕು ಮತ್ತು ಜೈಲಿಗೆ ಹಾಕಬೇಕು ಎಂದು ಲಕ್ಷ್ಮಣ್ ಹೇಳಿದರು.

ಇದನ್ನೂ ಓದಿ:   ಕ್ರೀಡಾ ಇಲಾಖೆಯ ಜಡತ್ವ ಕಂಡು ದಿಗಿಲುಗೊಂಡ ಸಿಎಂ ಸಿದ್ದರಾಮಯ್ಯರಿಂದ ಅಧಿಕಾರಿಗಳ ತರಾಟೆ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.