ಸಿದ್ದರಾಮಯ್ಯನ ಕೊಂದ್ರೆ ಹಿಂದೂಗಳಿಗೆ ನೆಮ್ಮದಿ: ಪೋಸ್ಟ್ ಹಾಕಿದ್ದ ಹೋಂ ಗಾರ್ಡ್ ಅರೆಸ್ಟ್
ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂದೂ ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡಲಾಗಿದ್ದು, ಈ ಕೊಲೆ ಬಳಿಕ ದಕ್ಷಿಣ ಕನ್ನಡದಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನುಂಟು ಮಾಡಿತ್ತು. ಎಲ್ಲವೂ ತಣ್ಣಹಾಯ್ತು ಎನ್ನುವರಷ್ಟರಲ್ಲಿ ಇದೀಗ ಏಟಿಗೆ ಎದುರೇಟು, ಪ್ರತೀಕಾರದ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರ ಮಧ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇನಕಾರಿ ಪೋಸ್ಟ್ ಹಾಕಿದ್ದ ಹೋಂ ಗಾರ್ಡ್ ಅರೆಸ್ಟ್ ಆಗಿದ್ದಾನೆ.

ಉಡುಪಿ, (ಮೇ 04): ಹಿಂದೂ ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ (Suhas Shetty Murder Case) ಸಂಬಂಧಿಸಿದಂತೆ ಈಗಾಗಲೇ ಮಂಗಳೂರು ಪೊಲೀಸರು (Mangaluru Police) 8 ಜನರನ್ನು ಬಂಧಿಸಿದ್ದು, ತನಿಖೆ ತನಿಖೆ ನಡೆಸಿದ್ದಾರೆ. ಇದರ ಮಧ್ಯ ಸುಹಾಸ್ ಶೆಟ್ಟಿ ಕೊಲೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರತೀಕಾರದ ಬೆದರಿಕೆಗಳು ಹರಿದಾಡುತ್ತಿವೆ. ಇದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೋಂ ಗಾರ್ಡ್ ಅವಹೇಳಕನಕಾರಿ ಕಮೆಂಟ್ ಮಾಡಿದ್ದಾನೆ. ಹೌದು…ಸಿಎಂ ಸಿದ್ದರಾಮಯ್ಯನನ್ನು ಕೊಂದ್ರೆ ಹಿಂದೂಗಳಿಗೆ ನೆಮ್ಮದಿ ಎಂದು ಕಾಮೆಂಟ್ ಹಾಕಿದ್ದ ಉಡುಪಿಯ ಕಾರ್ಕಳದ ಹೋಂ ಗಾರ್ಡ್ ಸಂಪತ್ ಸಾಲಿಯಾನ್ ಬಂಧನವಾಗಿದೆ.
ಬೆಂಗಳೂರಿನ ಹೋಂ ಗಾರ್ಡ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಂಪತ್ ಸಾಲಿಯಾನ್ ಎನ್ನುವಾತ ಸಿಎಂ ಸಿದ್ದರಾಮಯ್ಯನನ್ನು ಕೊಂದ್ರೆ ಹಿಂದೂಗಳಿಗೆ ನೆಮ್ಮದಿ ಎಂದು ಸಂಪತ್ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಹಾಕಿದ್ದಾನೆ. ಈ ಸಂಬಂಧ ಸದ್ಯ ಕಾರ್ಕಳ ಪೊಲೀಸರು ಹೋಂ ಗಾರ್ಡ್ ಸಂಪತ್ನನ್ನು ಬಂಧಿಸಿದ್ದಾರೆ.
ಇದನ್ನು ಓದಿ: ಮಂಗಳೂರಿನಲ್ಲಿ ಮುಂದುವರಿದ ಪ್ರತೀಕಾರದ ಎಚ್ಚರಿಗಳು: ಕೊಚ್ಚಿ ಕೊಲ್ಲುವ ಸಂದೇಶಗಳು
ಹಿಂದೂ ಮುಖಂಡರಿಗೆ ಬೆದರಿಕೆ
ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಏಟಿಗೆ ಎದುರೇಟು, ಪ್ರತೀಕಾರದ ಸಂದೇಶಗಳು ಹರಿದಾಡುತ್ತಿವೆ. ವಿಹೆಚ್ಪಿ ಮತ್ತು ಬಜರಂಗದಳ ಮುಖಂಡರಿಗೆ ಜೀವ ಬೆದರಿಕೆ ಹಾಕಲಾಗಿದೆ. ಮುಂದಿನ ಟಾರ್ಗೆಟ್ ವಿಶ್ವ ಹಿಂದೂ ಪರಿಷತ್ ಶರಣ್ ಪಂಪ್ವೆಲ್ ಮತ್ತು ಬಜರಂಗದಳ ಮುಖಂಡ ಭರತ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಲಾಗಿದೆ.
2018ರಲ್ಲಿ ಮಂಗಳೂರಿನ ಕೊಟ್ಟಾರ ಚೌಕಿ ಬಳಿ ನಡೆದಿದ್ದ ಬಷೀರ್ ಹತ್ಯೆ ಆರೋಪಿ ಶ್ರೀಜಿತ್ಗೆ ಮತ್ತೆ ಕೊಲೆ ಬೆದರಿಕೆ ಹಾಕಲಾಗಿದೆ. ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರತೀಕಾರಕ್ಕೆ ಬಷೀರ್ ಕೊಲೆಯಾಗಿತ್ತು. ಬಷೀರ್ ಕೊಲೆ ಪ್ರಕರಣದ ಆರೋಪಿ ಶ್ರೀಜಿತ್ ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿಯಾಗಿದ್ದಾರೆ. ನೆಕ್ಸ್ಟ್ ಟಾರ್ಗೆಟ್ ಈ ಶ್ರೀಜಿತ್ ಅಂತ ‘Killers_target’ ಎಂಬ ಫೇಸಬುಕ್ ಪೇಜ್ನಿಂದ ಈ ಹಿಂದೆ ಪೋಸ್ಟ್ ಮಾಡಲಾಗಿತ್ತು. ರವಿವಾರ ಮತ್ತೆ ‘Abu_Sifiyan678′ ಪೇಜ್ನಿಂದ ಶ್ರೀಜಿತ್ಗೆ ‘ಎಲ್ಲಿದೀಯಾ ನೀನು, ನೆಕ್ಸ್ಟ್ ನೀನೆ’ ಅಂತ ಮಲಯಾಳಂನಲ್ಲಿ ಕೊಲೆ ಬೆದರಿಕೆ ಮೆಸೇಜ್ ಕಳುಹಿಸಿದ್ದಾರೆ.
ಹೆಚ್ಚಾದ ಪ್ರತೀಕಾರದ ಸಂದೇಶಗಳು
“ಸುಹಾಸ್ ಶೆಟ್ಟಿಯನ್ನು ಕೊಂದವರು, ಕೊಂದವರ ಮನೆಯವರು, ಅಲ್ಲಿ ಯಾರು ಸಿಗುತ್ತಾರೆ ಅವರನ್ನು ಕೊಚ್ಚಿ ಕೊಲ್ಲುತ್ತೇವೆ” ಎಂದು ಧನುಷ್.ಸಿ ಎಂಬುವರು ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದ ಫೇಸ್ಬುಕ್ ಫೋಸ್ಟ್ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತಣ್ಣೀರುಪಂಥ ನಿವಾಸಿ ಧನುಷ್.ಸಿ ಪುಂಜಾಲಕಟ್ಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕೋಮುದ್ವೇಷ ಹರಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂಥ ಪ್ರಚೋದನಾತ್ಮಕ ವಿಡಿಯೋವನ್ನು ಪ್ರಸಾರಮಾಡಿದ ಹಿನ್ನೆಲೆಯಲ್ಲಿ ಬಿಎನ್ಎಸ್ 196(1)(A), 353(1)(C)ರ ಅಡಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ







