AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರಿನಲ್ಲಿ ಮುಂದುವರಿದ ಪ್ರತೀಕಾರದ ಎಚ್ಚರಿಗಳು: ಕೊಚ್ಚಿ ಕೊಲ್ಲುವ ಸಂದೇಶಗಳು

ಸುಹಾಸ್ ಶೆಟ್ಟಿ ಕೊಲೆಯ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಪ್ರತೀಕಾರದ ಬೆದರಿಕೆಗಳು ಹರಿದಾಡುತ್ತಿವೆ. ಧನುಷ್.ಸಿ ಎಂಬಾತ ಸೆಲ್ಫಿ ವೀಡಿಯೊದಲ್ಲಿ ಕೊಲೆ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಾಗಿದೆ. ಅಲ್ಲದೇ ಹಿಂದೂ ಪರ ಸಂಘಟನೆಗಳ ಮುಖಂಡರಾದ ಶರಣ್ ಪಂಪ್ ವೆಲ್ ಮತ್ತು ಭರತ್ ಕುಮ್ಡೇಲ್ ಜೀವ ಬೆದರಿಕೆ ಹಾಕಲಾಗಿದೆ.

ಮಂಗಳೂರಿನಲ್ಲಿ ಮುಂದುವರಿದ ಪ್ರತೀಕಾರದ ಎಚ್ಚರಿಗಳು: ಕೊಚ್ಚಿ ಕೊಲ್ಲುವ ಸಂದೇಶಗಳು
ಫೇಸ್​ಬುಕ್​ನಲ್ಲಿ ಬೆದರಿಕೆ ಫೋಸ್ಟ್​
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: ವಿವೇಕ ಬಿರಾದಾರ|

Updated on: May 04, 2025 | 5:13 PM

Share

ಮಂಗಳೂರು, ಮೇ 04: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಕೊಲೆ ಬಳಿಕ ಸಮಾಜಿಕ ಜಾಲತಾಣಗಳಲ್ಲಿ ಪ್ರತೀಕಾರದ ಸಂದೇಶಗಳು ಹರಿದಾಡುತ್ತಿವೆ. “ಸುಹಾಸ್ ಶೆಟ್ಟಿಯನ್ನು ಕೊಂದವರು, ಕೊಂದವರ ಮನೆಯವರು, ಅಲ್ಲಿ ಯಾರು ಸಿಗುತ್ತಾರೆ ಅವರನ್ನು ಕೊಚ್ಚಿ ಕೊಲ್ಲುತ್ತೇವೆ” ಎಂದು ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದ ಫೇಸ್​​ಬುಕ್​ ಧನುಷ್.ಸಿ ಎಂಬುವರು ಫೋಸ್ಟ್​ ಮಾಡಿದ್ದಾರೆ.

ಜಾಸ್ತಿ ದಿನ ತೆಗೆದುಕೊಳ್ಳಲ್ಲ, ತಕ್ಷಣವೇ ಸುಹಾಸ್ ಶೆಟ್ಟಿ ಕೊಂದವರ ಮೇಲೆ ರಿವೇಂಜ್ ತೆಗೆದುಕೊಳುತ್ತೇವೆ. ಕೊಲೆ ಬೆದರಿಕೆ ಹಾಕಿದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ‌ ತಣ್ಣೀರುಪಂಥ ನಿವಾಸಿ ಧನುಷ್.ಸಿ ಪುಂಜಾಲಕಟ್ಟೆ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಕೋಮುದ್ವೇಷ ಹರಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂಥ ಪ್ರಚೋದನಾತ್ಮಕ ವಿಡಿಯೋವನ್ನು ಪ್ರಸಾರಮಾಡಿದ ಹಿನ್ನೆಲೆಯಲ್ಲಿ ಬಿಎನ್​ಎಸ್​ 196(1)(A), 353(1)(C)ರ ಅಡಿ ಪ್ರಕರಣ ದಾಖಲಾಗಿದೆ.

ಶರಣ್ ಪಂಪ್​ವೆಲ್​ಗೆ ಜೀವ ಬೆದರಿಕೆ

ಸುಹಾಸ್ ಶೆಟ್ಟಿ ಕೊಲೆ ಬೆನ್ನಲ್ಲೇ ವಿಹೆಚ್​ಪಿ ಮತ್ತು ಬಜರಂಗದಳ ಮುಖಂಡರಿಗೆ ಜೀವ ಬೆದರಿಕೆ ಹಾಕಲಾಗಿದೆ. ಮುಂದಿನ ಟಾರ್ಗೆಟ್ ವಿಶ್ವ ಹಿಂದೂ ಪರಿಷತ್​ ಶರಣ್​ ಪಂಪ್​ವೆಲ್​ ಮತ್ತು ಬಜರಂಗದಳ ಮುಖಂಡ ಭರತ್​ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಹಾಕಲಾಗಿದೆ. “ಶರಣ್ ಪಂಪ್​ವೆಲ್​​ ಹತ್ಯೆಯಾಗಲು ತಯಾರಾಗು ಎಂದು ಜೀವ ಬೆದರಿಕೆ ಹಾಕಲಾಗಿದೆ.

ಇದನ್ನೂ ಓದಿ
Image
ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಮಂಗಳೂರಿನ 3 ಕಡೆ ಚಾಕು ಇರಿತ: 7 ಜನರ ಬಂಧನ
Image
ಸುಹಾಸ್ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿರುವ ಇಬ್ಬರು ಹಿಂದೂಗಳು ಯಾರು?
Image
ಸುಹಾಸ್ ಹತ್ಯೆ: ಫಿನೀಶ್, ರಿವೇಂಜ್ ಪೋಸ್ಟ್​​ಗಳ ವಿರುದ್ಧ 12 ಪ್ರಕರಣ ದಾಖಲು
Image
ಸುಹಾಸ್ ಶೆಟ್ಟಿ ಕೊಲೆ ಕೇಸ್‌: 8 ಜನ ಶಂಕಿತರು ವಶಕ್ಕೆ, ಪೊಲೀಸರಿಂದ ವಿಚಾರಣೆ

ಬಷೀರ್ ಹತ್ಯೆ ಆರೋಪಿಗೂ ಕೊಲೆ ಬೆದರಿಕೆ

2018ರಲ್ಲಿ ಮಂಗಳೂರಿನ ಕೊಟ್ಟಾರ ಚೌಕಿ ಬಳಿ ನಡೆದಿದ್ದ ಬಷೀರ್ ಹತ್ಯೆ ಆರೋಪಿ ಶ್ರೀಜಿತ್​ಗೆ ಮತ್ತೆ ಕೊಲೆ ಬೆದರಿಕೆ ಹಾಕಲಾಗಿದೆ. ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರತೀಕಾರಕ್ಕೆ ಬಷೀರ್ ಕೊಲೆಯಾಗಿತ್ತು. ಬಷೀರ್ ಕೊಲೆ ಪ್ರಕರಣದ ಆರೋಪಿ ಶ್ರೀಜಿತ್ ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿಯಾಗಿದ್ದಾರೆ.

ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆಗೆ ಸ್ಕೆಚ್ ಹಾಕಿದ್ದೇ ರೋಚಕ: ಇಲ್ಲಿದೆ ಆರೋಪಿಗಳ ಪ್ಲ್ಯಾನ್​​ನ ಇನ್​ಸೈಡ್ ಡಿಟೇಲ್ಸ್

ನೆಕ್ಸ್ಟ್​​ ಟಾರ್ಗೆಟ್ ಈ ಶ್ರೀಜಿತ್ ಅಂತ ‘Killers_target’ ಎಂಬ ಫೇಸಬುಕ್​ ಪೇಜ್​ನಿಂದ ಈ ಹಿಂದೆ ಪೋಸ್ಟ್ ಮಾಡಲಾಗಿತ್ತು. ರವಿವಾರ ಮತ್ತೆ ‘Abu_Sifiyan678′ ಪೇಜ್​ನಿಂದ ಶ್ರೀಜಿತ್​ಗೆ ‘ಎಲ್ಲಿದೀಯಾ ನೀನು, ನೆಕ್ಸ್ಟ್ ನೀನೆ’ ಅಂತ ಮಲಯಾಳಂನಲ್ಲಿ ಕೊಲೆ ಬೆದರಿಕೆ ಮೆಸೇಜ್ ಕಳುಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Pruthviraj
Pruthviraj

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More