AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಕೈಗಳಿಗೆ ಹಗ್ಗ, ಮುಖಕ್ಕೆ ಬಟ್ಟೆ​, ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೈಲಿನಿಂದ ಬಂದ ಗ್ಯಾಂಗ್​ಸ್ಟರ್

Video: ಕೈಗಳಿಗೆ ಹಗ್ಗ, ಮುಖಕ್ಕೆ ಬಟ್ಟೆ​, ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೈಲಿನಿಂದ ಬಂದ ಗ್ಯಾಂಗ್​ಸ್ಟರ್

ನಯನಾ ರಾಜೀವ್
|

Updated on: Dec 28, 2025 | 7:18 AM

Share

ಮೊಮ್ಮಗನ ಕೊಲೆ ಆರೋಪದಲ್ಲಿ ಜೈಲುಪಾಲಾಗಿರುವ ಗ್ಯಾಂಗ್​​ಸ್ಟರ್ ಬಂಡು ಅಂಡೆಕರ್ ಸ್ಥಳೀಯ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾನೆ. ಆತನ ಕೈಗಳನ್ನು ಕಟ್ಟಲಾಗಿತ್ತು, ಮುಖಕ್ಕೆ ಕಪ್ಪು ಬಟ್ಟೆ ಹಾಕಲಾಗಿತ್ತು. ಜೈಲಿನಿಂದ ನೇರವಾಗಿ ಬಂದು ನಾಮಪತ್ರ ಸಲ್ಲಿಸಿದ್ದಾನೆ. ಪುಣೆಯಲ್ಲಿ ಮಹಾನಗರ ಪಾಲಿಕೆಗಳು ಮತ್ತು ರಾಜ್ಯದ 28 ಇತರ ನಾಗರಿಕ ಸಂಸ್ಥೆಗಳ ಚುನಾವಣೆಗಳು ಜನವರಿ 15 ರಂದು ನಡೆಯಲಿವೆ.

ಪುಣೆ, ಡಿಸೆಂಬರ್ 28: ಮೊಮ್ಮಗನ ಕೊಲೆ ಮಾಡಿ ಜೈಲುಪಾಲಾಗಿರುವ ಗ್ಯಾಂಗ್​​ಸ್ಟರ್ ಬಂಡು ಅಂಡೆಕರ್ ಸ್ಥಳೀಯ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾನೆ. ಆತನ ಕೈಗಳನ್ನು ಕಟ್ಟಲಾಗಿತ್ತು, ಮುಖಕ್ಕೆ ಕಪ್ಪು ಬಟ್ಟೆ ಹಾಕಲಾಗಿತ್ತು. ಜೈಲಿನಿಂದ ನೇರವಾಗಿ ಬಂದು ನಾಮಪತ್ರ ಸಲ್ಲಿಸಿದ್ದಾನೆ. ಪುಣೆಯಲ್ಲಿ ಮಹಾನಗರ ಪಾಲಿಕೆಗಳು ಮತ್ತು ರಾಜ್ಯದ 28 ಇತರ ನಾಗರಿಕ ಸಂಸ್ಥೆಗಳ ಚುನಾವಣೆಗಳು ಜನವರಿ 15 ರಂದು ನಡೆಯಲಿವೆ.

ಮೊಮ್ಮಗ ಆಯುಷ್ ಕೊಮ್ಕರ್ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಅಂಡೇಕರ್​ಗೆ ಪುಣೆಯ ವಿಶೇಷ MCOCA ನ್ಯಾಯಾಲಯವು ಷರತ್ತುಬದ್ಧ ಅನುಮತಿ ನೀಡಿದೆ.ಆತ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಮುಖಕ್ಕೆ ಕಪ್ಪು ಬಟ್ಟೆ ಹಾಕಿ, ಕೈಗಳನ್ನು ಹಗ್ಗದಿಂದ ಕಟ್ಟಿ ಯೆರವಡಾ ಕೇಂದ್ರ ಕಾರಾಗೃಹದಿಂದ ಪೊಲೀಸ್ ವ್ಯಾನ್‌ನಲ್ಲಿ ನಗರದ ಭವಾನಿ ಪೇಟ್ ಪ್ರದೇಶದಲ್ಲಿರುವ ಗೊತ್ತುಪಡಿಸಿದ ನಾಮಪತ್ರ ಸಲ್ಲಿಕೆ ಕೇಂದ್ರಕ್ಕೆ ಅಂಡೇಕರ್​ನನ್ನು ಕರೆತರಲಾಯಿತು. ಸೆಪ್ಟೆಂಬರ್ 5 ರಂದು ನಾನಾ ಪೇಟ್‌ನಲ್ಲಿ ಆಯುಷ್​ನನ್ನು ಗುಂಡಿಕ್ಕಿ ಕೊಂದಿದ್ದ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ