ಜೈಪುರದಲ್ಲಿ ಹಿಟ್ ಆ್ಯಂಡ್ ರನ್; ಒಂದೇ ಕುಟುಂಬದ ಮೂವರ ಸಾವಿನ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

|

Updated on: Oct 11, 2024 | 9:34 PM

ಜೈಪುರದ ಮಾನಸ ಸರೋವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ವೇಗವಾಗಿ ಬಂದ ಥಾರ್ ಕಾರು ತಾಯಿ, ಮಗಳು ಮತ್ತು ಸೋದರಳಿಯನನ್ನು ಅಪ್ಪಚ್ಚಿ ಮಾಡಿದೆ. ಈ ಅಪಘಾತದಲ್ಲಿ ಎರಡೂವರೆ ವರ್ಷದ ಮಗಳು ಮತ್ತು 10 ವರ್ಷದ ಸೋದರಳಿಯ ಮೃತಪಟ್ಟಿದ್ದಾರೆ. ಆರೋಪಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಜೈಪುರ: ರಾಜಸ್ಥಾನದ ಜೈಪುರದಿಂದ ಹಿಟ್ ಆ್ಯಂಡ್ ರನ್ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಅಪಘಾತದಲ್ಲಿ ಥಾರ್ ಕಾರು ತಾಯಿ, ಮಗಳು ಮತ್ತು ಸೋದರಳಿಯನನ್ನು ನುಜ್ಜುಗುಜ್ಜುಗೊಳಿಸಿದೆ. ಅಪಘಾತದ ನಂತರ ಮೂವರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮಹಿಳೆ ರಸ್ತೆ ದಾಟಲು ಮಕ್ಕಳೊಂದಿಗೆ ಬದಿಯಲ್ಲಿ ನಿಂತಿದ್ದರು. ಈ ವೇಳೆ ಆರೋಪಿ ಥಾರ್ ಕಾರನ್ನು ಅವರ ಮೇಲೆ ಹರಿಸಿದ್ದಾರೆ. ಅಪಘಾತದ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳ ನೆರವಿನಿಂದ ಆರೋಪಿಯನ್ನು ಬಂಧಿಸಲಾಗಿದೆ. ಅಲ್ಲದೆ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ