‘ಜೇಮ್ಸ್ ಬಾಂಡ್ ರಾಜು’ಗೆ ಶ್ರೀಮುರಳಿ ಶುಭ ಹಾರೈಸಿದ್ದು ಹೀಗೆ
James Bond Raju Movie: ‘ಫಸ್ಟ್ ರ್ಯಾಂಕ್ ರಾಜು’ ಖ್ಯಾತಿನ ನಟ ಗುರುನಂದನ್ ಅವರ ಹೊಸ ಸಿನಿಮಾ ‘ಜೇಮ್ಸ್ ಬಾಂಡ್ ರಾಜು’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನಟ ಶ್ರೀಮುರಳಿ ಗುರುನಂದನ್ ಅವರ ಹೊಸ ಸಿನಿಮಾಕ್ಕೆ ಮನಃಪೂರ್ವಕವಾಗಿ ಹಾರೈಸಿದ್ದು, ಸಿನಿಮಾಕ್ಕೆ ಭಿನ್ನವಾಗಿ ಶುಭ ಕೋರಿದ್ದಾರೆ.
‘ಫಸ್ಟ್ ರ್ಯಾಂಕ್ ರಾಜು’ ಖ್ಯಾತಿನ ನಟ ಗುರುನಂದನ್ ಅವರ ಹೊಸ ಸಿನಿಮಾ ‘ಜೇಮ್ಸ್ ಬಾಂಡ್ ರಾಜು’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗಷ್ಟೆ ಸಿನಿಮಾದ ಪ್ರೊಮೋಷನ್ ಇವೆಂಟ್ ಅನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ನಟ ಶ್ರೀಮುರಳಿ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು. ವೇದಿಕೆ ಮೇಲೆ ಮಾತನಾಡಿದ ಶ್ರೀಮುರಳಿ ಚಿತ್ರತಂಡದ ಶ್ರಮವನ್ನು ಕೊಂಡಾಡಿದರು. ಗುರುನಂದನ್ ಅನ್ನು ಸ್ಮಾರ್ಟ್ ನಟ ಎಂದ ಶ್ರೀಮುರಳಿ, ಸಿನಿಮಾಕ್ಕೆ ಶುಭ ಹಾರೈಸುತ್ತಾ, ಲಗೇಜುಗಳು ತುಂಬುವಷ್ಟು ಹಣವನ್ನು ಈ ಸಿನಿಮಾ ಗಳಿಕೆ ಮಾಡಲಿ ಎಂದು ಹಾರೈಸಿದರು. ತಾವೂ ಸಹ ಗುರುನಂದನ್ ಅವರ ಸಿನಿಮಾಗಳನ್ನು ಕುತೂಹಲದಿಂದ ಗಮನಿಸುತ್ತಿರುವುದಾಗಿ ಹೇಳಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ