ಚಾಂಪಿಯನ್ಸ್ ಟ್ರೋಫಿಗಾಗಿ ಹಾರ್ದಿಕ್ ಪಾಂಡ್ಯ ಸರ್ಕಸ್: ಪ್ರೊಮೊ ವಿಡಿಯೋ ನೋಡಿ

ಚಾಂಪಿಯನ್ಸ್ ಟ್ರೋಫಿಗಾಗಿ ಹಾರ್ದಿಕ್ ಪಾಂಡ್ಯ ಸರ್ಕಸ್: ಪ್ರೊಮೊ ವಿಡಿಯೋ ನೋಡಿ

ಝಾಹಿರ್ ಯೂಸುಫ್
|

Updated on:Feb 02, 2025 | 1:30 PM

Champions Trophy 2025: 2025ರ ಚಾಂಪಿಯನ್ಸ್ ಟ್ರೋಫಿಯು ಫೆಬ್ರವರಿ 19 ರಿಂದ ಆರಂಭವಾಗಲಿದೆ. ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿರುವ ಈ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಅದರಂತೆ ಭಾರತದ ಪಂದ್ಯಗಳು ದುಬೈನಲ್ಲಿ ಜರುಗಲಿದ್ದು, ಉಳಿದ ಮ್ಯಾಚ್​ಗಳಿಗೆ ಪಾಕಿಸ್ತಾನ್ ಆತಿಥ್ಯವಹಿಸಲಿದೆ. ಟೀಮ್ ಇಂಡಿಯಾ ಫೈನಲ್​ಗೆ ಪ್ರವೇಶಿಸಿದರೆ ಆ ಪಂದ್ಯ ಕೂಡ ದುಬೈನಲ್ಲೇ ಜರುಗಲಿದೆ.

ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಫೆಬ್ರವರಿ 19 ರಿಂದ ಐಸಿಸಿ ಟೂರ್ನಿಗೆ ಚಾಲನೆ ದೊರೆಯಲಿದ್ದು, ಈ ಬಾರಿ ಟ್ರೋಫಿಗಾಗಿ 8 ತಂಡಗಳು ಕಣಕ್ಕಿಳಿಯಲಿವೆ. ಅದರಂತೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿಯಲಿರುವ ಎಂಟು ತಂಡಗಳನ್ನು 2 ಗ್ರೂಪ್​ಗಳಾಗಿ ವಿಂಗಡಿಸಲಾಗಿದ್ದು, ಈ ತಂಡಗಳ ಪಟ್ಟಿ ಈ ಕೆಳಗಿನಂತಿದೆ…

  • ಗ್ರೂಪ್-A:
  • ಭಾರತ
  • ಪಾಕಿಸ್ತಾನ್
  • ನ್ಯೂಝಿಲೆಂಡ್
  • ಬಾಂಗ್ಲಾದೇಶ್

 

  • ಗ್ರೂಪ್- B
  • ಸೌತ್ ಆಫ್ರಿಕಾ
  • ಆಸ್ಟ್ರೇಲಿಯಾ
  • ಅಫ್ಘಾನಿಸ್ತಾನ್
  • ಇಂಗ್ಲೆಂಡ್

ಈ ತಂಡಗಳು ಮೊದಲ ಸುತ್ತಿನಲ್ಲಿ ಲೀಗ್ ಪಂದ್ಯಗಳನ್ನಾಡಲಿದೆ. ಇಲ್ಲಿ ಆಯಾ ಗ್ರೂಪ್​ಗೆ ಪಾಯಿಂಟ್ಸ್ ಟೇಬಲ್​ ಇರಲಿದ್ದು, ಈ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ನಾಲ್ಕು ತಂಡಗಳು ಸೆಮಿಫೈನಲ್​ಗೆ ಪ್ರವೇಶಿಸಲಿದೆ. ಸೆಮಿಫೈನಲ್ ಪಂದ್ಯಗಳು ಮಾರ್ಚ್ 4 ಮತ್ತು 5 ರಂದು ನಡೆಯಲಿದೆ. ಹಾಗೆಯೇ ಚಾಂಪಿಯನ್ಸ್ ಟ್ರೋಫಿಯ ಅಂತಿಮ ಹಣಾಹಣಿ ಮಾರ್ಚ್ 9 ರಂದು ಜರುಗಲಿದೆ.

ಇದೀಗ ಈ ಟೂರ್ನಿಯ ಪ್ರೊಮೊ ವಿಡಿಯೋವನ್ನು ಬಿಡುಗಡೆ ಮಾಡಲಾಗಿದ್ದು, ಈ ವಿಡಿಯೋದಲ್ಲಿ ಟೀಮ್ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ, ಪಾಕಿಸ್ತಾನ್ ವೇಗಿ ಶಾಹೀನ್ ಅಫ್ರಿದಿ, ಅಫ್ಘಾನಿಸ್ತಾನ್ ಆಲ್​ರೌಂಡರ್ ಮೊಹಮ್ಮದ್ ನಬಿ ಹಾಗೂ ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟರ್ ಫಿಲ್ ಸಾಲ್ಟ್ ಕಾಣಿಸಿಕೊಂಡಿದ್ದಾರೆ.

ಇನ್ನು ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಅದರಂತೆ ಭಾರತದ ಪಂದ್ಯಗಳು ದುಬೈನಲ್ಲಿ ಜರುಗಲಿದ್ದು, ಉಳಿದ ಮ್ಯಾಚ್​ಗಳಿಗೆ ಪಾಕಿಸ್ತಾನ್ ಆತಿಥ್ಯವಹಿಸಲಿದೆ. ಇನ್ನು ಟೀಮ್ ಇಂಡಿಯಾ ಸೆಮಿಫೈನಲ್ ಹಾಗೂ ಫೈನಲ್​ಗೆ ಪ್ರವೇಶಿಸಿದರೆ ಆ ಪಂದ್ಯಗಳನ್ನು ಸಹ ದುಬೈನಲ್ಲೇ ಆಡಲಾಗುತ್ತದೆ.

Published on: Feb 02, 2025 01:28 PM