ವಿವಿಧ ಜಿಮ್ ಔಟ್​ಫಿಟ್​​​ಗಳಲ್ಲಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಪಡ್ಡೆಗಳ ನಿದ್ರೆ ಕೆಡಿಸುತ್ತಿದ್ದಾಳೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 27, 2021 | 9:11 PM

‘ಧಡಕ್’ ಚಿತ್ರದ ನಂತರ ಆಫರ್​ಗಳು ಅಕೆಯನ್ನು ಹುಡುಕಿಕೊಂಡು ಹೋಗಲಿಲ್ಲ. ಹಾಗಾಗಿ ನೆಟ್​ಫ್ಲಿಕ್ಸ್​​ ನಲ್ಲಿ ಬರುವ ದೆವ್ವಗಳನ್ನು ಆಧಾರಿತ ಸರಣಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ಆಕೆಯ ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್ ಚಿತ್ರ ವಿವಾದಕ್ಕೊಳಗಾಗಿತ್ತು.

ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಸದಾ ಸುದ್ದಿಯಲ್ಲಿರುತ್ತಾಳೆ. ತನ್ನಮ್ಮನ ಸೌಂದರ್ಯದ ಅರ್ಧದಷ್ಟು ಮತ್ತು ಅಭಿನಯ ಪ್ರತಿಭೆಯ ಶೇಕಡಾ 10 ರಷ್ಟನ್ನು ಸಹ ಆಕೆ ಪಡೆದು ಬಂದಿಲ್ಲವಾದರೂ ಮಾಧ್ಯಮಗಳಲ್ಲಿ ಸದಾ ಮಿಂಚುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾಳೆ. ಸೌಂದರ್ಯ ಮತ್ತು ಪ್ರತಿಭೆಯ ಖನಿಯಾಗಿದ್ದ ಶ್ರೀದೇವಿ ಒಬ್ಬ ದಿವಾ ಆಗಿದ್ದರು. ಆಕೆಯ ಸ್ಥಾನವನ್ನು ಜಾಹ್ನವಿ ಮಾತ್ರ ಅಲ್ಲ, ಬೇರೆ ಯಾರಿಂದಲೂ ತುಂಬುವುದು ಸಾಧ್ಯವಿಲ್ಲ. ಜಾಹ್ನವಿ ಬಾಲಿವುಡ್ಗೆ ಎಂಟ್ರಿ ಕೊಟ್ಟು ಆಗಲೇ ಮೂರು ವರ್ಷ ಕಳೆದಿವೆ. 2018ರಲ್ಲಿ ಬಿಡುಗಡೆಯಾದ ಆಕೆಯ ಮೊದಲ ಚಿತ್ರ ‘ಧಡಕ್’ ನಲ್ಲಿ ಆಕೆಯ ನಟನೆ ಬಗ್ಗೆ ಉತ್ತಮ ಕಾಮೆಂಟ್ಗಳು ಬಾರದೆ ಹೋದರೂ ಚಿತ್ರ ಬಾಕ್ಸಾಫೀಸಿನಲ್ಲಿ ಯಶ ಕಂಡಿತು.

‘ಧಡಕ್’ ಚಿತ್ರದ ನಂತರ ಆಫರ್​ಗಳು ಅಕೆಯನ್ನು ಹುಡುಕಿಕೊಂಡು ಹೋಗಲಿಲ್ಲ. ಹಾಗಾಗಿ ನೆಟ್​ಫ್ಲಿಕ್ಸ್​​ ನಲ್ಲಿ ಬರುವ ದೆವ್ವಗಳನ್ನು ಆಧಾರಿತ ಸರಣಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ಆಕೆಯ ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್ ಚಿತ್ರ ವಿವಾದಕ್ಕೊಳಗಾಗಿತ್ತು.

ಅದೇನೆ ಇರಲಿ, ಜಾಹ್ನವಿ ತನ್ನ ಫಿಟ್ನೆಸ್ಗೆ ಜಾಸ್ತಿ ಗಮನ ನೀಡುತ್ತಾಳೆ ಅನ್ನವ ಬಗ್ಗೆ ದೂಸ್ರಾ ಮಾತಿಲ್ಲ. ಪ್ರತಿದಿನ ಜಿಮ್ಗೆ ಹೋಗಿ ವರ್ಕ್ ಔಟ್ ಮಾಡುವುದನ್ನು ಆಕೆ ತಪ್ಪಿಸಲಾರಳು. ಆದರೆ ವಿಷಯ ಅದಲ್ಲ. ಆಕೆ ಜಿಮ್ಗೆ ಹೋಗಿ ಕಸರತ್ತು ಮಾಡುವುದಕ್ಕಿಂತ ಅಲ್ಲಿಗೆ ಹೋಗುವಾಗ ಆಕೆ ತೊಡುವ ದಿರಿಸಿನ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಈ ವಿಡಿಯೋ ಗಮನಿಸಿ. ದಿನಕ್ಕೊಂದು ಬಗೆಯ ಜಿಮ್ ಔಟ್ಫಿಟ್ ಆಕೆ ಧರಿಸುತ್ತಾಳೆ. ಹೆಚ್ಚು ಕಡಿಮೆ ಎಲ್ಲ ಔಟ್ಫಿಟ್ ಆಕೆಯ ಸೌಂದರ್ಯವನ್ನು ಕಾಂಪ್ಲಿಮೆಂಟ್ ಮಾಡುವಂತಿವೆ. ಪಡ್ಡೆಗಳು ಫಿದಾ ಆಗುತ್ತಿದ್ದಾರೆ ಅಂತ ಬೇರೆ ಹೇಳಬೇಕೆ?

ಇದನ್ನೂ ಓದಿ:  ಬಲವಂತವಾಗಿ ಉತ್ತರ ಪ್ರದೇಶದ ಮಾಜಿ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ಬಂಧನ; ವಿಡಿಯೋ ವೈರಲ್