ಬಲವಂತವಾಗಿ ಉತ್ತರ ಪ್ರದೇಶದ ಮಾಜಿ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ಬಂಧನ; ವಿಡಿಯೋ ವೈರಲ್
Amitabh Thakur Arrest: 'ನೀವು ಎಫ್ಐಆರ್ ತೋರಿಸುವವರೆಗೂ ನಾನು ನಿಮ್ಮ ಜೊತೆ ಬರುವುದಿಲ್ಲ' ಎಂದು ಅಮಿತಾಭ್ ಠಾಕೂರ್ ತಮ್ಮನ್ನು ಬಂಧಿಸಲು ಬಂದು ಪೊಲೀಸರ ಮೇಲೆ ವಾದ ಮಾಡಿದ್ದು ಕೂಡ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ಲಕ್ನೋ: ಉತ್ತರ ಪ್ರದೇಶದ ಲಕ್ನೋದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎದುರಾಳಿಯಾಗಿ ಅಮಿತಾಭ್ ಠಾಕೂರ್ 2022ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ ಬೆನ್ನಲ್ಲೇ ಅವರನ್ನು ಸಿನಿಮೀಯವಾಗಿ ಇಂದು ಕಾರಿನಿಂದ ಕೆಳಗಿಳಿಸಿ, ಬಂಧಿಸಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದರ ವಿಡಿಯೋ ಕೂಡ ವೈರಲ್ ಆಗಿದೆ.
‘ನೀವು ಎಫ್ಐಆರ್ ತೋರಿಸುವವರೆಗೂ ನಾನು ನಿಮ್ಮ ಜೊತೆ ಬರುವುದಿಲ್ಲ’ ಎಂದು ಅಮಿತಾಭ್ ಠಾಕೂರ್ ತಮ್ಮನ್ನು ಬಂಧಿಸಲು ಬಂದು ಪೊಲೀಸರ ಮೇಲೆ ವಾದ ಮಾಡಿದ್ದು ಕೂಡ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಆದರೂ ಅವರನ್ನು ಬಲವಂತವಾಗಿ ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ 24 ವರ್ಷದ ಯುವತಿ ತನ್ನ ಗೆಳೆಯನೊಂದಿಗೆ ಸುಪ್ರೀಂ ಕೋರ್ಟ್ ಎದುರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಳು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಳು. 2019ರಲ್ಲಿ ಆ ಯುವತಿ ಬಿಎಸ್ಪಿ ಸಂಸದ ಅತುಲ್ ರೈ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಫೇಸ್ಬುಕ್ ಲೈವ್ ವಿಡಿಯೋದಲ್ಲಿ ಅಮಿತಾಭ್ ಠಾಕೂರ್ ಸೇರಿದಂತೆ ಹಲವು ಅಧಿಕಾರಿಗಳ ಹೆಸರನ್ನು ಹೇಳಿ ಆಕೆ ತನ್ನ ಗೆಳೆಯನೊಂದಿಗೆ ಸುಪ್ರೀಂ ಕೋರ್ಟ್ ಎದುರು ಬೆಂಕಿ ಹಚ್ಚಿಕೊಂಡಿದ್ದಳು. ಈ ಆರೋಪದಲ್ಲಿ ಇಂದು ಅಮಿತಾಭ್ ಠಾಕೂರ್ ಅವರನ್ನು ಬಂಧಿಸಲಾಗಿದೆ.
भूतपूर्व पुलिस के विरुद्ध भाजपा सरकार की पुलिस का अभूतपूर्व कार्य!
भाजपाई राजनीति लोगों के बीच दरार पैदा करके ही जिंदा है. अब भाजपा सरकार के दबाव के कारण पुलिस ही पुलिस के ख़िलाफ़ काम करने पर मजबूर है. एक सेनानिवृत आईपीएस के साथ ऐसा व्यवहार अक्षम्य है. #नहीं_चाहिए_भाजपा pic.twitter.com/o7OG4XRAMy
— Akhilesh Yadav (@yadavakhilesh) August 27, 2021
ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ಅವರ ಸೇವಾವಧಿ ಕೊನೆಗೊಳ್ಳುವ ಮೊದಲೇ ಕೇಂದ್ರ ಗೃಹ ಸಚಿವಾಲಯದ ಒತ್ತಡಕ್ಕೆ ಮಣಿದು ಕಳೆದ ಮಾರ್ಚ್ ತಿಂಗಳಲ್ಲಿ ನಿವೃತ್ತಿ ಘೋಷಿಸಿದ್ದರು. ಉತ್ತರ ಪ್ರದೇಶ ಕೇಡರ್ನ ಮಾಜಿ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಅವರ ವಿರುದ್ಧ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು.
ಕೇಂದ್ರ ಗೃಹಸಚಿವಾಲಯದ ಒಂದು ನಿರ್ಧಾರದ ನಂತರ ಅಮಿತಾಭ್ ಠಾಕೂರ್ ನಿವೃತ್ತಿ ತೆಗೆದುಕೊಳ್ಳುವ ಪರಿಸ್ಥಿತಿ ಉಂಟಾಗಿತ್ತು. ತಮ್ಮ ಬಕಿ ಉಳಿದ ಸೇವಾವಧಿಯಲ್ಲಿ ಮುಂದುವರಿಯಲು ಅಮಿತಾಬ್ ಠಾಕೂರ್ ಸಮರ್ಥರಲ್ಲ ಎಂದು ಗೃಹ ಸಚಿವಾಲಯ ಆದೇಶದಲ್ಲಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ 2028ರಲ್ಲಿ ನಿವೃತ್ತರಾಗಬೇಕಾಗಿದ್ದ ಅಮಿತಾಭ್ ಠಾಕೂರ್ ಕಳೆದ ಮಾರ್ಚ್ನಲ್ಲಿ ನಿವೃತ್ತಿ ಪಡೆದಿದ್ದರು.
The police has forcibly taken @Amitabhthakur without any justification/ providing reasons to the Hazratganj police station.@Uppolice @dgpup pic.twitter.com/P0AlihDpfn
— AmitabhThakur (@Amitabhthakur) August 27, 2021
2017ರಲ್ಲಿ ಅಮಿತಾಬ್ ಠಾಕೂರ್ ತಮ್ಮ ಕೇಡರ್ ಬದಲಾಯಿಸುವಂತೆ ಕೇಂದ್ರ ಸರ್ಕಾರವನ್ನು ಆ್ರಹಿಸಿದ್ದರು. 2015ರಲ್ಲಿ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರು ತನಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಅರೋಪಿಸಿದ ಹಿನ್ನೆಲೆಯಲ್ಲಿ ಆಗ ಅಧಿಕಾರದಲ್ಲಿದ್ದ ಅಖಿಲೇಶ್ ಯಾದವ್ ಸರ್ಕಾರ ಅಮಿತಾಭ್ ಠಾಕೂರ್ ಅವರನ್ನು ಅಮಾನತು ಮಾಡಿತ್ತು. 2016ರಲ್ಲಿ ಅವರು ಮತ್ತೆ ಉದ್ಯೋಗಕ್ಕೆ ಮರಳಿದ್ದರು. ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯ ಲಖನೌ ಪೀಠವು ಏಪ್ರಿಲ್ 2016ರಲ್ಲಿ ಠಾಕೂರ್ ಅವರ ಅಮಾನತು ಆದೇಶವನ್ನು ತಡೆಹಿಡಿದು, ಪುನರ್ ನೇಮಕ ಮಾಡಲು ಆದೇಶಿಸಿತ್ತು.
ಯೋಗಿ ಆದಿತ್ಯನಾಥ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ; ದೂರು ದಾಖಲು
(Viral Video Shows Dramatic Arrest Of UP Ex IPS Officer Amitabh Thakur in Rape Victim Suicide Case)
Published On - 8:23 pm, Fri, 27 August 21