Daily Horoscope: ಇಂದು ಬನದ ಹುಣ್ಣಿಮೆ, ಈ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 13, 2025ರ ಸೋಮವಾರದ ಪಂಚಾಂಗದ ಪ್ರಕಾರ, ಭೋಗಿ ಹಬ್ಬ ಮತ್ತು ಬನದ ಹುಣ್ಣಿಮೆ ಆಚರಿಸಲಾಗುತ್ತದೆ. ಮಂಗಳವಾರ ಮಕರ ಸಂಕ್ರಾಂತಿಯಾಗಿದ್ದು, ಸೂರ್ಯ ಉತ್ತರಾಯಣ ಪ್ರವೇಶಿಸುತ್ತಾನೆ. ಬನಶಂಕರಿ ವ್ರತ ಮತ್ತು ಉಡುಪಿಯಲ್ಲಿ ಸುವರ್ಣೋತ್ಸವ ಕೂಡ ಈ ದಿನಗಳಲ್ಲಿ ನಡೆಯುತ್ತದೆ. ರಾಹುಕಾಲ, ಶುಭ ಕಾಲಗಳ ಸಮಯವನ್ನು ಈ ಪಂಚಾಂಗದಲ್ಲಿ ನೀಡಲಾಗಿದೆ. ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಅವರು ಗ್ರಹಗಳ ಸಂಚಾರ ಮತ್ತು ರಾಶಿ ಭವಿಷ್ಯವನ್ನು ತಿಳಿಸಿದ್ದಾರೆ.
ನಿತ್ಯ ಪಂಚಾಂಗ: ದಿನಾಂಕ 13-01-2025 ಸೋಮವಾರ, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಪುಷ್ಯ ಮಾಸ, ಹೇಮಂತ ಋತು, ಶುಕ್ಲಪಕ್ಷ, ಪೂರ್ಣಿಮಾ ದಿನ, ಪೂರ್ಣಿಮಾ ತಿಥಿ, ಆರ್ದ್ರಾ ನಕ್ಷತ್ರ, ಇಂದ್ರಯೋಗ, ಭದ್ರಕರಣ. ಈ ದಿನದ ರಾಹುಕಾಲ 8:59 ನಿಮಿಷದಿಂದ 9:25 ನಿಮಿಷದವರೆಗೆ ಇರುತ್ತೆ. ಸರ್ವಸಿದ್ಧಿಕಾಲ, ಸಂಕಲ್ಪಕಾಲ, ಶುಭಕಾಲ ಬೆಳಗ್ಗೆ ಜಾವ 9:36 ನಿಮಿಷದಿಂದ 10:02 ನಿಮಿಷದವರೆಗೆ ಇರುತ್ತದೆ.
ಇಂದು ಭೋಗಿ ಹಬ್ಬ ಜೊತೆಗೆ ಬನದ ಹುಣ್ಣಿಮೆ. ಮಂಗಳವಾರ ಮಕರ ಸಂಕ್ರಾಂತಿ. ಸೂರ್ಯ ಪಥ ಬದಲಾಯಿಸುತ್ತಾನೆ. ಸೂರ್ಯ ಉತ್ತರಕ್ಕೆ ಮುಖ ಮಾಡಿ ಸಂಚಾರವನ್ನು ಆರಂಭಿಸುತ್ತಾನೆ. ಈ ದಿನ ಬನಶಂಕರಿ ವ್ರತವನ್ನು ಮಾಡುತ್ತಾರೆ. ಉಡುಪಿಯಲ್ಲಿ ಸುವರ್ಣೋತ್ಸವ ನಡೆಯುತ್ತದೆ. ರವಿ ಧನುಸ್ಸು ರಾಶಿಯಲ್ಲಿ ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ ಮಾಡುತ್ತಿದೆ. ಇಂದಿನ ಗ್ರಹಗಳ ಸಂಚಾರ, ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.