MLC 2025: ಕೊನೆಯ ಎಸೆತದಲ್ಲಿ ಕ್ಯಾಚ್ ಕೈಚೆಲ್ಲಿ ಪಂದ್ಯ ಸೋತ ಶಾರುಖ್ ಖಾನ್ ತಂಡ; ವಿಡಿಯೋ
Jason Holder's Drop Costs LA Knight Riders: ಮೇಜರ್ ಲೀಗ್ ಕ್ರಿಕೆಟ್ 2025ರ 17ನೇ ಪಂದ್ಯದಲ್ಲಿ, ಶಾರುಖ್ ಖಾನ್ ನೇತೃತ್ವದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡ ಜೇಸನ್ ಹೋಲ್ಡರ್ ಅವರ ನಿರ್ಣಾಯಕ ಕ್ಯಾಚ್ ಡ್ರಾಪ್‌ನಿಂದಾಗಿ ವಾಷಿಂಗ್ಟನ್ ಫ್ರೀಡಂ ವಿರುದ್ಧ 5 ವಿಕೆಟ್‌ಗಳಿಂದ ಸೋಲುಂಡಿದೆ. ಈ ಸೋಲಿನೊಂದಿಗೆ ಅವರು ಟೂರ್ನಿಯಲ್ಲಿ ಐದನೇ ಸೋಲನ್ನು ಎದುರಿಸಿದ್ದಾರೆ. ಹೋಲ್ಡರ್‌ರ ಎರಡು ಅವಕಾಶಗಳನ್ನು ತಪ್ಪಿಸಿಕೊಂಡದ್ದು ಪಂದ್ಯ ಸೋಲಲು ಕಾರಣವಾಯಿತು.
ಮೇಜರ್ ಲೀಗ್ ಕ್ರಿಕೆಟ್ 2025 ರ 17 ನೇ ಪಂದ್ಯದಲ್ಲಿ, ಶಾರುಖ್ ಖಾನ್ ಓಡೆತನದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಜೇಸನ್ ಹೋಲ್ಡರ್ ಮಾಡಿದ ತಪ್ಪಿನಿಂದಾಗಿ ಟೂರ್ನಿಯಲ್ಲಿ ಐದನೇ ಸೋಲನ್ನು ಎದುರಿಸಬೇಕಾಯಿತು. ವಾಸ್ತವವಾಗಿ ಈ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ತಂಡಕ್ಕೆ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ವಿರುದ್ಧ ಗೆಲ್ಲಲು ಒಂದು ಎಸೆತದಲ್ಲಿ ಒಂದು ರನ್ ಅಗತ್ಯವಿತ್ತು. ಈ ವೇಳೆ ಸ್ಟ್ರೈಕ್ನಲ್ಲಿದ್ದ ಗ್ಲೆನ್ ಫಿಲಿಪ್ಸ್ ಗಾಳಿಯಲ್ಲಿ ಶಾಟ್ ಹೊಡೆದರು. ಅದನ್ನು ಕ್ಯಾಚ್ ತೆಗೆದುಕೊಳ್ಳುವಲ್ಲಿ ಜೇಸನ್ ಹೋಲ್ಡರ್ ಮೊದಲ ಯತ್ನದಲ್ಲಿ ವಿಫಲರಾದರು. ಆ ನಂತರ ಹೋಲ್ಡರ್ಗೆ ಮತ್ತೆ ಚೆಂಡನ್ನು ಹಿಡಿಯುವ ಅವಕಾಶ ಸಿಕ್ಕಿತ್ತು. ಆದರೆ ಎರಡನೇ ಯತ್ನದಲ್ಲೂ ಹೋಲ್ಡರ್ ಕ್ಯಾಚ್ ಅನ್ನು ಪೂರ್ಣಗೊಳಿಸಲಿಲ್ಲ. ಹೀಗಾಗಿ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡ 5 ವಿಕೆಟ್‌ಗಳಿಂದ ಹೀನಾಯ ಸೋಲನ್ನು ಎದುರಿಸಬೇಕಾಯಿತು.
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!

