ವೈಡ್-ನೋಬಾಲ್-ವೈಡ್: ಲಯತಪ್ಪಿದ ಯಾರ್ಕರ್ ಕಿಂಗ್, ನಡೆಯುತ್ತಿಲ್ಲ ಬುಮ್ರಾ ಮ್ಯಾಜಿಕ್
ಯಾರ್ಕರ್ ಕಿಂಗ್ ಎಂದೇ ಖ್ಯಾತಿ ಪಡೆದಿರೋ ಜಸ್ಪ್ರೀತ್ ಬುಮ್ರಾ ಈಗ ಲಯ ತಪ್ಪಿದ್ದಾರೆ. ಅದು ಸ್ಪಷ್ಟವಾಗುತ್ತಿದೆ. ಅವರು ಬ್ಯಾಕ್ ಟು ಬ್ಯಾಕ್ ನೋಬಾಲ್ಗಳನ್ನು ಎಸೆದು ಟೀಕೆಗೆ ಗುರಿಯಾಗಿದ್ದಾರೆ. ಈಗ ಎಲ್ಎಸ್ಜಿ ವಿರುದ್ಧದ ಪಂದ್ಯದಲ್ಲೂ ಹಾಗೆಯೇ ಆಗಿದೆ. ಅವರು ವಿಕೆಟ್ ಏನೋ ಕಿತ್ತಿದ್ದರು. ಆದರೆ, ಅದು ನೋಬಾಲ್ ಆಯಿತು ಎಂಬುದು ಬೇಸರದ ವಿಷಯ.
ಯಾರ್ಕರ್ ಕಿಂಗ್ ಎಂದೇ ಜನಪ್ರಿಯತೆ ಪಡೆದಿರೋ ಜಸ್ಪ್ರೀತ್ ಬುಮ್ರಾ ಈಗ ಲಯತಪ್ಪಿದ್ದು ಸ್ಪಷ್ಟವಾಗುತ್ತಿದೆ. ಈ ಬಾರಿ ಅವರಿಗೆ ಹೆಚ್ಚಿನ ವಿಕೆಟ್ ಸಿಕ್ಕಿಲ್ಲ ಎಂಬ ಕೊರಗು ಒಂದು ಕಡೆಯಾದರೆ, ನೋಬಾಲ್ ಹಾಕುವ ಮೂಲಕ ದುಬಾರಿ ಆಗುತ್ತಿದ್ದಾರೆ. ಮೇ4 ಎಲ್ಎಸ್ಜಿ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಅವರು ಲಯತಪ್ಪಿದ್ದು ಸ್ಪಷ್ಟವಾಗಿದೆ. ಹಿಮ್ಮತ್ ಸಿಂಗ್ ಅವರು ಬುಮ್ರಾ ಬಾಲಿಂಗ್ನಲ್ಲಿ ಕೀಪರ್ ಕ್ಯಾಚ್ ಕೊಟ್ಟರು. ದುರಾದೃಷ್ಟ ಎಂದರ ಅದು ನೋಬಾಲ್ ಆಯಿತು. ಆ ಬಳಿಕ ಒಂದು ವೈಡ್ ಹಾಕಿದರು. ಬಳಿಕ ಮತ್ತೆ ನೋಬಾಲ್ ಹಾಕಿದರು. ನಿನ್ನೆಯ ಪಂದ್ಯದಲ್ಲಿ ಮೂರು ಹಾಗೂ ಈ ಸೀಸನ್ ಅಲ್ಲಿ 9 ನೋಬಾಲ್ಗಳನ್ನು ಬುಮ್ರಾ ಎಸೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: May 05, 2026 08:37 AM
Follow Us
Latest Videos
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ


