ಜೆಡಿಎಸ್​ ಜಲಧಾರೆ ಮುಗಿಯಿತು, ಮುಂದೇನು? ಪಕ್ಷ-ನಾಯಕರಿಗೆ ಇದು ಹೊಸ ಇಮೇಜ್ ತಂದುಕೊಡುವಲ್ಲಿ ಯಶಸ್ವಿಯಾಯಿತೇ? ಈ ಬಗ್ಗೆ ಟಿವಿ 9 ಕನ್ನಡ ಡಿಜಿಟಲ್​ ಲೈವ್​ ಚರ್ಚೆ

| Updated By: ಸಾಧು ಶ್ರೀನಾಥ್​

Updated on: May 13, 2022 | 3:39 PM

ಜೆಡಿಎಸ್ ಕೈಗೊಂಡಿದ್ದ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಇಂದು ತೆರೆ ಬೀಳಲಿದೆ. ಈ ಕಾರ್ಯಕ್ರಮ ಪಕ್ಷ ಅಥವಾ ನಾಯಕರಿಗೆ ಹೊಸ ಇಮೇಜ್ ತಂದುಕೊಡುವಲ್ಲಿ ಸಹಾಯಕವಾಗಿದೆಯೆ? ಅಥವಾ ಮೇಕೆದಾಟು ಪಾದಯಾತ್ರೆ ತರಹ ಮತ್ತೊಂದು ರಾಜಕೀಯ ಪ್ರಯೋಗವಾಗಿ ಅಂತ್ಯ ಕಾಣಬಹುದೇ? ಈ ಕುರಿತು ಆ್ಯಂಕರ್​ ಹರಿಪ್ರಸಾದ್,​ ಇಂದಿನ ಟಿವಿ 9 ಕನ್ನಡ ಡಿಜಿಟಲ್​ ಲೈವ್​ ಚರ್ಚೆಯನ್ನು ಮಧ್ಯಾಹ್ನ 3.30 ಕ್ಕೆ ನಡೆಸಿಕೊಡಲಿದ್ದಾರೆ.

ಜೆಡಿಎಸ್ ಕೈಗೊಂಡಿದ್ದ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಇಂದು ತೆರೆ ಬೀಳಲಿದೆ. ಈ ಕಾರ್ಯಕ್ರಮ ಪಕ್ಷ ಅಥವಾ ನಾಯಕರಿಗೆ ಹೊಸ ಇಮೇಜ್ ತಂದುಕೊಡುವಲ್ಲಿ ಸಹಾಯಕವಾಗಿದೆಯೆ? ಅಥವಾ ಮೇಕೆದಾಟು ಪಾದಯಾತ್ರೆ ತರಹ ಮತ್ತೊಂದು ರಾಜಕೀಯ ಪ್ರಯೋಗವಾಗಿ ಅಂತ್ಯ ಕಾಣಬಹುದೇ? ಈ ಕುರಿತು ಆ್ಯಂಕರ್​ ಚಂದ್ರ ಮೋಹನ್,​ ಇಂದಿನ ಟಿವಿ 9 ಕನ್ನಡ ಡಿಜಿಟಲ್​ ಲೈವ್​ ಚರ್ಚೆಯನ್ನು ಮಧ್ಯಾಹ್ನ 3.30 ಕ್ಕೆ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ (TV 9 Kannada Digital Live).

ಕಳೆದ ತಿಂಗಳು ಎಪ್ರೀಲ್ 16ರಂದು ಹನುಮ ಜಯಂತಿ ದಿನದಂದು ಜನತಾ ಜಲಧಾರೆ ಪ್ರಾರಂಭವಾಗಿದೆ. ಈ ಜನತಾ ಜಲಧಾರೆ ಸಮಾರೋಪ ಸಮಾವೇಶದಲ್ಲಿ ರಾಜ್ಯದಲ್ಲಿ ನೀರಾವರಿ ಯೋಜನೆಗಳನ್ನು ಜಾರಿ ಮಾಡುವ ನಿಟ್ಟಿನಲ್ಲಿ ಇಂದು ಮಧ್ಯಾಹ್ನ ಗಂಗಾ ಮಾತೆಯ ಸಾಕ್ಷಿಯಾಗಿ ಸಂಕಲ್ಪ ಮಾಡಲಾಗುವುದು. ಜನತಾ ಜಲಧಾರೆ ಸಮಾರೋಪ ಸಮಾರಂಭವು ನೆಲಮಂಗಲ ಸಮೀಪದ ಬಾವಿಕೆರೆ ಬಳಿಯ ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿ ಪಕ್ಕದ ವಿಶಾಲ ಮೈದಾನದಲ್ಲಿ ಆಯೋಜಿಸಲಾಗಿದೆ.

ಈ ಜನತಾ ಜನತಾ ಜಲದಾರೆ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲು ಹಾಸನದಿಂದ ಅಪಾರ ಸಂಖ್ಯೆಯ ಜೆಡಿಎಸ್ ಕಾರ್ಯಕರ್ತರು ಬರುತ್ತಿದ್ದಾರೆ. ಸಮಾರಂಭಕ್ಕೆ ಹಾಸನ ಜಿಲ್ಲೆಯಾದ್ಯಂತ 547 ಸಾರಿಗೆ ಬಸ್, 600 ಖಾಸಗಿ ವಾಹನಗಳಲ್ಲಿ ಸಮಾರಂಭಕ್ಕೆ ಸಹಸ್ರಾರು ಜನ ಹೊರಟಿದ್ದಾರೆ. ಜಿಲ್ಲೆಯ ಎಂಟೂ ತಾಲ್ಲೂಕಿನಿಂದ ಅಪಾರ ಸಂಖ್ಯೆಯಲ್ಲಿ ಜೆಡಿಎಸ್ ಬೆಂಬಲಿಗರು ಹೊರಟಿದ್ದಾರೆ. ಹಾಸನ ನಗರದ ರಿಂಗ್ ರಸ್ತೆಯಿಂದ 150 ಬಸ್ ಗಳು ಸಮಾರೋಪ ಸಮಾರಂಭಕ್ಕೆ ಹೊರಟವೆ. ವಾಹನಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಜೆಡಿಎಸ್ ಪರ ಜಯಘೋಷ ಮೊಳಗಿಸುತ್ತಾ ಬೆಂಗಳೂರಿನತ್ತ ಹೊರಟಿದ್ದಾರೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: May 13, 2022 03:37 PM