ನೆಲಮಂಗಲ: ಅಡುಗೆ ಸಿದ್ಧತೆ ವೀಕ್ಷಿಸಲು ಬಂದ ನಿಖಿಲ್ ಕುಮಾರಸ್ವಾಮಿ ಕೇಸರಿ ಬಾತ್ ರುಚಿ ನೋಡಿ ಭೇಷ್ ಅಂದರು!

ನೆಲಮಂಗಲ: ಅಡುಗೆ ಸಿದ್ಧತೆ ವೀಕ್ಷಿಸಲು ಬಂದ ನಿಖಿಲ್ ಕುಮಾರಸ್ವಾಮಿ ಕೇಸರಿ ಬಾತ್ ರುಚಿ ನೋಡಿ ಭೇಷ್ ಅಂದರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 13, 2022 | 5:43 PM

ಭಕ್ಷ್ಯಗಳ ತಯಾರಿ ಬಗ್ಗೆ ಅವರಿ ಉಸ್ತುವಾರಿ ವಹಿಸಿಕೊಂಡಿರುವವರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಕೇಸರಿ ಭಾತ್ ರುಚಿ ಪರೀಕ್ಷಿಸುವಂತೆ ಅವರಿಗೆ ಒಂದು ಸ್ಪೂನಲ್ಲಿ ನೀಡಲಾಗುತ್ತದೆ. ನಿಖಿಲ್ ಅದನ್ನು ತಿಂದು ಅದ್ಭುತವಾಗಿದೆ ಎಂದು ಹೇಳುತ್ತಾರೆ.

Nelamangala:  ಮುಂದಿನ ವಿಧಾನ ಸಭೆ ಚುನಾವಣೆಗೆ ಜೆಡಿ(ಎಸ್) ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ನೆಲಮಂಗಲನಲ್ಲಿ ಶುಕ್ರವಾರ ಸಾಯಂಕಾಲ ನಡೆಯಲಿರುವ ಜನತಾ ಜಲಧಾರೆ ಸಂಕಲ್ಪ ಸಮಾವೇಶ ಸಮಾರೋಪ ಸಮಾರಂಭದಲ್ಲಿ ತಮ್ಮ ಪಕ್ಷಕ್ಕೆ ಪೂರ್ಣ ಪ್ರಮಾಣದ ಅಧಿಕಾರ ನೀಡಿದರೆ ನೀರಾವರಿಯ ಎಲ್ಲ ಯೋಜನೆಗಳನ್ನು ಜಾರಿಗೆ ತರುವುದಾಗಿ ಗಂಗಾಮಾತೆಯನ್ನು ಸಾಕ್ಷಿಯಾಗಿಟ್ಟುಕೊಂಡು ಜೆಡಿ(ಎಸ್) ನಾಯಕರು ಪ್ರಮಾಣ ಮಾಡಲಿದ್ದಾರೆ. ಸಮಾರಂಭದದಲ್ಲಿ ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡ (HD Devegowda) ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಸೇರಿದಂತೆ ಪಕ್ಷದ ಎಲ್ಲ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ರಾಜ್ಯದ ನಾನಾಭಾಗಗಳ 5 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದ್ದು ಅದರ ತಯಾರಿಯನ್ನು ನಿಖಿಲ್ ಕುಮಾರಸ್ವಾಮಿ (Nikhil Kumaraswamy) ವೀಕ್ಷಿಸಿದರು.

ಬೃಹತ್ ಪ್ರಮಾಣದಲ್ಲಿ ಕೇಸರಿ ಬಾತ್ ತಯಾರಿಸುತ್ತಿರುವ ಸ್ಥಳಕ್ಕೆ ನಿಖಿಲ್ ಆಗಮಿಸಿದ್ದಾರೆ. ಭಕ್ಷ್ಯಗಳ ತಯಾರಿ ಬಗ್ಗೆ ಅವರಿ ಉಸ್ತುವಾರಿ ವಹಿಸಿಕೊಂಡಿರುವವರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಕೇಸರಿ ಬಾತ್ ರುಚಿ ಪರೀಕ್ಷಿಸುವಂತೆ ಅವರಿಗೆ ಒಂದು ಸ್ಪೂನಲ್ಲಿ ನೀಡಲಾಗುತ್ತದೆ. ನಿಖಿಲ್ ಅದನ್ನು ತಿಂದು ಅದ್ಭುತವಾಗಿದೆ ಎಂದು ಹೇಳುತ್ತಾರೆ.

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಸುಮಾರು 3,000 ಬಾಣಸಿಗರನ್ನು ಅಡುಗೆ ಮಾಡುವ ಕಾರ್ಯಕ್ಕೆ ನಿಯೋಜಿಸಲಾಗಿದೆ. ಕಾರ್ಯಕರ್ತರಿಗೆ ಊಟ ಬಡಿಸಲೆಂದೇ 2,000 ಜನರಿದ್ದಾರೆ ಎಂಬ ವರ್ತಮಾನವಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 95-100 ಸೀಟುಗಳನ್ನು ನಿರಾಯಾಸದಿಂದ ಗೆಲ್ಲುತ್ತೇವೆ, ಮಿಕ್ಕಿದ 25-30 ಸ್ಥಾನ ಗೆಲ್ಲಲು ಸ್ವಲ್ಪ ಕಷ್ಟಪಡಬೇಕಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ:   ಜನತಾ ಜಲಧಾರೆ ಸಮಾರೋಪ ಸಮಾರಂಭಕ್ಕು ಮುನ್ನ ತಂದೆ, ತಾಯಿ ಆಶಿರ್ವಾದ ಪಡೆದ ಹೆಚ್.ಡಿ. ಕುಮಾರಸ್ವಾಮಿ, ಸಮಾರಂಭಕ್ಕೆ ಅಪಾರ ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಭಾಗಿ