ಉದಯಪುರದ ಹೋಟೆಲೊಂದರಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ತಮ್ಮ ಪಾಳಯದ ಸದಸ್ಯರೊಂದಿಗೆ ಡಿನ್ನರ್ ಸವಿದರು
ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ಕಾಣಿಸುವ ಕಡೆಯೆಲ್ಲ ಗಿರಿಜಾ ಮೀಸೆ ಹೊತ್ತ ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ಕಾಣಿಸುತ್ತಾರೆ. ಅವರ ನಡುವೆ ಉತ್ತಮ ಸ್ನೇಹ ಮತ್ತು ಆತ್ಮೀಯ ಬಾಂಧವ್ಯ ಇರಬಹುದು ಆ ಪ್ರಶ್ನೆ ಬೇರೆ.
Udaipur: ದಿನವಿಡೀ ಚಿಂತನ್ ಶಿವಿರ್ (Chintan Shivir) ನಂತರ ರಾತ್ರಿ ಭೋಜನ್ ಶಿವಿರ್. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ರಾಜ್ಯ ಕಾಂಗ್ರೆಸ್ ಇತರ ಕೆಲ ನಾಯಕರೊಂದಿಗೆ ಗುರುವಾರ ರಾತ್ರಿ ಡಿನ್ನರ್ ಸವಿಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ (Siddaramaiah) ಕಾಣಿಸುವ ಕಡೆಯೆಲ್ಲ ಗಿರಿಜಾ ಮೀಸೆ ಹೊತ್ತ ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ (Praksah Rathod) ಕಾಣಿಸುತ್ತಾರೆ. ಅವರ ನಡುವೆ ಉತ್ತಮ ಸ್ನೇಹ ಮತ್ತು ಆತ್ಮೀಯ ಬಾಂಧವ್ಯ ಇರಬಹುದು ಆ ಪ್ರಶ್ನೆ ಬೇರೆ. ಆದರೆ ಕರ್ನಾಟಕ ಕಾಂಗ್ರೆಸ್ ನಲ್ಲಿ ಎರಡು ಕ್ಯಾಂಪ್ ಗಳಿರುವುದು ಯಾರಿಗೆ ಗೊತ್ತಿಲ್ಲ? ಓಕೆ ಆ ವಿಷಯವನ್ನು ಆಮೇಲೆ ಚರ್ಚಿಸುವ, ಮೊದಲು ಊಟದ ವಿಷಯವನ್ನು ನೋಡೋಣ. ಕಾಂಗ್ರೆಸ್ ನಾಯಕರೆಲ್ಲ ಈಗ ರಾಜಸ್ತಾನದ ಉದಯಪುರನಲ್ಲಿದ್ದಾರೆ. 3 ದಿನಗಳ ಚಿಂತನ್ ಶಿವಿರ್ ಗುರುವಾರ ಆರಂಭವಾಗಿದ್ದು ಮತ್ತು ನಾಳೆ ಅಂದರೆ ಶನಿವಾರ ಕೊನೆಗೊಳ್ಳುತ್ತದೆ.
ಸಿದ್ದರಾಮಯ್ಯ ಮತ್ತು ಸಂಗಡಿಗರ ಊಟ ಇನ್ನೂ ಅರಂಭವಾಗುವುದರಲ್ಲಿದೆ. ಸಿದ್ದರಾಮಯ್ಯ ಸೂಪು ಸವಿಯುತ್ತಿರುವುದನ್ನು ನೀವು ವಿಡಿಯೋನಲ್ಲಿ ನೋಡಬಹುದು. ಅವರ ಎಡಭಾಗದಲ್ಲಿ ಎಮ್ ಬಿ ಪಾಟೀಲ ಮತ್ತು ಬಲಕ್ಕೆ ರಾಠೋಡ ಇದ್ದಾರೆ. ಅವರಲ್ಲದೆ ಸತೀಶ್ ಜಾರಕಿಹೊಳಿ, ಭೈರತಿ ಸುರೇಶ ಹಾಗೂ ಇನ್ನೂ ಕೆಲವರನ್ನು ಕಾಣಬಹುದು. ಸೂಪು ಕುಡಿಯುವಾಗ ಸಿದ್ದರಾಮಯ್ಯ ಊಟದ ಬಳಿಕ ಎಲ್ಲಿಗೋ ಹೋಗಿ ಬರೋಣ ಅನ್ನುತ್ತಾರೆ. ಅವರ ಎದುರು ಕುಳಿತಿರುವ ನಾಯಕರು ಈಗಾಗಲೇ ಸಾಕಷ್ಟು ಸಮಯವಾಗಿದೆ ಸರ್, ಈಗ ಹೋಗಕ್ಕಾಗಲ್ಲ ಅಂದಾಗ ಸಿದ್ದರಾಮಯ್ಯ ಬೆಳಗ್ಗೆ ತಡವಾಗಿ ಎದ್ದರಾಯಿತು ಅನ್ನುತ್ತಾರೆ.
ಕರ್ನಾಟಕ ಕಾಂಗ್ರೆಸ್ ನಲ್ಲಿ ಎರಡು ಬಣಗಳಾಗಿರುವುದು ಭಾರತದ ಅತ್ಯಂತ ಹಳೆಯ ಪಕ್ಷಕ್ಕೆ ಶುಭಸೂಚನೆಯಲ್ಲ ಎಂದು ರಾಜಕೀಯ ಕಾಮೆಂಟೇಟರ್ ಗಳು ಹೇಳುತ್ತಿದ್ದಾರೆ. ಬಣಗಳಾಗಿರೋದೆ ಮುಖ್ಯಮಂತ್ರಿ ಸ್ಥಾನಕ್ಕೆ ನಡೆಯುತ್ತಿರುವ ಪೈಪೋಟಿಯಿಂದಾಗಿ. ಇಬ್ಬರು ಪ್ರಮುಖ ದಾವೇದಾರರು ತಮ್ಮ ತಮ್ಮ ನಿಷ್ಠರನ್ನು ಜೊತೆಗಿಟ್ಟುಕೊಡು ತಿರುಗಾಡುತ್ತಿದ್ದಾರೆ. ಹೈಕಮಾಂಡ್ ಗೂ ವಿಷಯ ಗೊತ್ತಿದೆ, ಆದರೆ ಅದನ್ನು ಇತ್ಯರ್ಥಗೊಳಿಸುವ ಪ್ರಯತ್ನ ನಡೆಯುತ್ತಿಲ್ಲ.